May 16, 2024

Bhavana Tv

Its Your Channel

ಹೊನ್ನಾವರ ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಆಚರಣೆ.

ಹೊನ್ನಾವರ ತಾಲೂಕಾಡಳಿತ ಹಾಗೂ ತಾಲೂಕಿನ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗಣರಾಜೊತ್ಸವ ಕಾರ್ಯಕ್ರಮ ಹೊನ್ನಾವರ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆಯಿತು,

ಕಾರ್ಯಕ್ರಮದ ಆರಂಭವನ್ನು ಗಾಂಧಿಜಿ ಮತ್ತು ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿ ನಂತರ ಗಣರಾಜೊತ್ಸವ ಕಾರ್ಯಕ್ರಮದ ದ್ವಜಾರೋಹಣವನ್ನು ಹೊನ್ನಾವರ ತಹಶೀಲ್ದಾರ ನಾಗರಾಜ ನಾಯ್ಕಡ ಧ್ವಜಾರೋಹಣ ನೇರವೇರಿಸಿದರು ನಂತರ ಮಾತನಾಡಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ನೀತಿನಿಯಮದ ಸೂಚನೆ ಹಾಕಿಕೊಟ್ಟ ಸಮಗ್ರ ಮಾಹಿತಿಯ ಗುಚ್ಚವೇ ಭಾರತದ ಸಂವಿಧಾನವಾಗಿದೆ. ಶಾಂತಿ ಸುವ್ಯವಸ್ಥೆಯ ಸಂವಿಧಾನದ ದೊಡ್ಡ ಲಿಖಿತ ಸಂವಿಧಾನ ಎನ್ನುವ ಹೆಮ್ಮೆ ಇದೆ. ದೇಶದ ನಾಡು ನುಡಿ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವುದು ಪ್ರತಿಯೊರ್ವ ನಾಗರಿಕರ ಕತ್ಯರ್ವವಾಗಿದೆ. ರಾಷ್ಟಿçÃಯ ಐಕ್ಯತೆ ಸಾಧಿಸಲು ನಾವೆಲ್ಲರು ಒಂದಾಗಬೇಕಿದೆ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವು ಜಾತಿ ಧರ್ಮ ಪಂಗಡ ಪ್ರದೇಶ ಭಾಷೆ ನೆಲ ಜಲಗಳ ವಿಚಾರವಾಗಿ ಪರಸ್ಪರ ದ್ವೇಷ ಕಟ್ಟಿಕೊಳ್ಳದೆ ಪ್ರೀತಿ ವಿಶ್ವಾಶ ಗೌರವಗಳನ್ನು ಬೇಳಸಿಕೋಂಡು ರಾಷ್ಟಿçÃಯ ಬಾವೈಕತೆಯನ್ನು ಬಲ ಪಡಿಸಬೇಕಾಗಿದೆ, ನಮ್ಮಲ್ಲಿ ಎಷ್ಟೆ ಬೇದಗಳಿದ್ದರು ನಾವೇಲ್ಲರು ಒಂದೆ ಬಾರತಾಂಬೆಯ ಮಕ್ಕಳು ಎನ್ನುವ ಐಕತಾಭಾವ ಬಲವಾದರೆ ದೇಶ ಪ್ರಗತಿಯನ್ನು ಸಾದಿಸಲುಸಾದ್ಯ ಎನ್ನುವ ಸಂದೇಶವನ್ನು ವ್ಯಕ್ತ ಪಡಿಸೋಣ ಎಂದು ಸಂದೇಶ ನೀಡಿದರು.

ಪೋಲಿಸ್ ಸಿಬ್ಬಂದಿಗಳು ಮತ್ತು ಹೋಮಗಾರ್ಡ್ಸ ಸಿಬ್ಬಂದಿಗಳು ಗೌರವ ಸಲ್ಲಿಸಿದರು ಹಾಗೂ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ ಸಮಾಜ ಸೇವರನ್ನು. ಕ್ರೀಡಾ ವಿಭಾಗಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳನ್ನು ನೌಕರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಗಣರಾಜ್ಯೋತ್ಸವ ನಿಮಿತ್ತ ಇಲಾಖೆಯ ನಡುವಿನ ಕ್ರಿಕೇಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಜಯಗಳಿಸಿದ ತಂಡಕ್ಕೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಗ್ರೇಡ್-2 ತಹಶಿಲ್ದಾರ ಉಷಾ ಪಾವಸ್ಕರ್, ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ, ತಾಲೂಕ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಕ್ಷೇತ್ರಶಿಕ್ಷಣಾಧಿಕಾರಿ ಸವಿತಾ ನಾಯ್ಕ, ನೌಕರರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಪಟ್ಟಣ ಪಂಚಾಯತ ಸದಸ್ಯರುಗಳಾದ ನಾಗರಾಜ ಭಟ್, ಸುಬ್ರಾಯ ಗೌಡ, ಶ್ರೀಪಾದ ನಾಯ್ಕ, ಸುರೇಶ ಹೊನ್ನಾವರ, ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ಭಾವನಾ ಟಿವಿಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜಮೇಸ್ತರವರು ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಬ್ ಅಂಬೇಡಕರ ರಚಿಸಿದ ಸಂವಿಧಾನವನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು. ಉಪಾಧ್ಯಕ್ಷೆ ಶ್ರೀಮತಿ ಮೇಧಾ ನಾಯ್ಕರವರು ಹಾಗೂ ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕರವರು ಗಣರಾಜ್ಯೋತ್ಸವದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ,
ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: