April 29, 2024

Bhavana Tv

Its Your Channel

“ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೊನ್ನಾವರ ರೋಟರಿ ಕ್ಲಬ್ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ

ಹೊನ್ನಾವರ: “ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೊನ್ನಾವರ ರೋಟರಿ ಕ್ಲಬ್ ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಗೌರವ ನೀಡಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ನಡೆಸುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸ್ಟಿಪನ್ ರೊಡ್ರಿಗಿಸ್ ಹೇಳಿದರು.

ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಹೊನ್ನಾವರ ರೋಟರಿಕ್ಲಬ್ ವತಿಯಿಂದ ತಾಲೂಕಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಗುವಿಗೆ ಹಾಗೂ ಅವರ ತಾಯಿಗೆ ಅವಶ್ಯಕ ಕಿಟ್ ವಿತರಿಸಿ ಅವರು ಮಾತನಾಡಿದರು.ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದ ಬಗ್ಗೆ ಡಾ.ರಾಜೇಶ್ ಕಿಣಿಯವರು ಹೇಳಿದ್ದರು. ಇಂದಿನ ದಿನ ಹೆಣ್ಣು ಜನನವಾಗಿರುವುದು ತುಂಬಾ ಖುಷಿಯಾಯಿತು. ತಾಯಿ-ಮಗುವಿನ ಆರೋಗ್ಯ ಉತ್ತಮವಾಗಿರಲಿ ಎಂದು ಶುಭ ಹಾರೈಸಿ ಅವಶ್ಯಕ ಕಿಟ್ ವಿತರಿಸಿದರು.ಮುಂದಿನ ದಿನಗಳಲ್ಲಿ ರೋಟರಿ ವತಿಯಿಂದ ಸರ್ಕಾರಿ ಆಸ್ಪತ್ರೆಗೆ ಉತ್ತಮ ರೀತಿಯಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದರು.

ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ ಕಿಣಿ ಮಾತನಾಡಿ ” ಹೆಣ್ಣೆಂದರೆ ತಿರಸ್ಕಾರ ಮನೋಭಾವನೆ ಹೊಂದುತ್ತಾರೆ, ಹೆಣ್ಣು ಭ್ರೂಣ ಹತ್ಯೆ ,ಶಿಶು ಹತ್ಯೆಯಂತಹ ಪಾಪಕಾರ್ಯ ನಡೆಸುತ್ತಾರೆ.ಇಂತಹ ಕೃತ್ಯಗಳು ತೊಲಗಬೇಕು,ಹೆಣ್ಣಿನ ಬಗ್ಗೆ ಗೌರವ ಭಾವನೆ ಹೊಂದಬೇಕು. ಹೆಣ್ಣು ಭ್ರೂಣ ಹತ್ಯೆ ಬಗ್ಗೆ ತಂದೆ-ತಾಯAದಿರಿಗೆ ತಿಳುವಳಿಕೆ ನೀಡುವುದು ಅಗತ್ಯ. ಒಂದು ಹೆಣ್ಣು ಕಲಿತರೆ ಸಮಾಜವೇ ಕಲಿತಂತೆ. ಹೆಣ್ಣನ್ನು ಪ್ರಭುದ್ಧತೆಯಾಗಿ ಬೆಳೆಸಲು ತಾಯಿ ಪಾತ್ರ ಹೆಚ್ಚಾಗಿರುತ್ತದೆ. ಹೆಣ್ಣು ಭ್ರೂಣ ಹತ್ಯೆ ,ಶಿಶು ಹತ್ಯೆಯಂತಹ ಕೃತ್ಯ ಸಮಾಜದಿಂದ ತೊಲಗಬೇಕೆಂದರೆ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂದರು. ದಿನಾಚರಣೆಯಂದೆ ತಾಲೂಕಾಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿರುವುದು ಖುಷಿ ತಂದಿದೆ ಎಂದು,ತಾಯಿ ಮಗುವಿಗೆ ಶುಭ ಹಾರೈಸಿದರು.

ಡಾ. ಅನುರಾಧ,ಡಾ.ಗಾಯತ್ರಿ ಅವರು ಮಗುವಿನ ತಾಯಿಗೆ ಪುಷ್ಪ ನೀಡಿ ಉತ್ತಮವಾಗಿ ಮಗುವಿನ ಕಾಳಜಿ ವಹಿಸುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಸೂರ್ಯಕಾಂತ ಸಾರಂಗ್, ಸತ್ಯ ಜಾವಗಲ್,ದೀಪಕ್ ಲೋಫಿಸ್,ನಸ್ರುಲ್ಲಾ ಉಪಸ್ಥಿತರಿದ್ದರು. ರೋ.ದಿನೇಶ್ ಕಾಮತ್ ಸ್ವಾಗತಿಸಿ,ವಂದಿಸಿದರು.

error: