May 18, 2024

Bhavana Tv

Its Your Channel

ಪರಿಸರ ರಕ್ಷಣೆ ಮತ್ತು ಸ್ವಚ್ಚತಾ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜನ ಜಾಗೃತಿ ಜಾಥಾ

ಹೊನ್ನಾವರ ತಾಲೂಕಿನ ಗುಣವಂತೆ ಕರಾವಳಿ ಪ್ರೌಢಶಾಲೆಯಲ್ಲಿ ಪರಿಸರ ರಕ್ಷಣೆ ಮತ್ತು ಸ್ವಚ್ಚತಾ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜನ ಜಾಗೃತಿ ಜಾತಾ ನಡೆಸಲಾಯಿತು.

ಎರಡು ದಿನಗಳ ಕಾಲ ಸ್ವಚ್ಚತೆ ಕುರಿತ ಕಾರ್ಯಕ್ರಮ ನಡೆದಿದ್ದು ಗುರುವಾರದಂದು ಕರಾವಳಿ ಪ್ರೌಢಶಾಲಾ ಆವರಣದಿಂದ ಗುಣವಂತೆ ಶಂಭುಲಿAಗೇಶ್ವರ ಮಾರ್ಗವಾಗಿ ತಲುಪಿ ರಾಷ್ಟ್ರೀಯ ಹೆದ್ದಾರಿ 66ರ ಹೆಬ್ಬರಾಹಿತ್ಲವರೆಗೆ ತಲುಪಿ ಹಿಂದುರಿಗಿ ಜಾತಾ ಅಂತ್ಯಗೊಳಿಸಲಾಯಿತು. ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಗೆಗಿನ ದುಷ್ಪರಿಣಾಮ ಬಗ್ಗೆ ಜಾಥಾ ಮೂಲಕ ತಿಳಿಸಿದರು. ಹಸಿರೆ ಉಸಿರು,ಪ್ಲಾಸ್ಟಿಕ್ ಬಳಕೆ ಬೇಡವೆ ಬೇಡ,ಕಾಡು ಬೆಳಿಸಿ ಪರಿಸರ ಉಳಿಸಿ,ನಿಮ್ಮ ಸ್ವಚ್ಚತೆ ನಿಮ್ಮ ಹಕ್ಕು ಎಂಬ ಮುಂತಾದ ಘೋಷಣಾ ಫಲಕ ಹಿಡಿದು ವಾದ್ಯಗೋಷ್ಠಿ ಮೂಲಕ ಜಾಥಾ ಕೈಗೊಳ್ಳಲಾಯಿತು. ಶುಕ್ರವಾರದಂದು ಕರಾವಳಿ ಪ್ರೌಢಶಾಲಾ ಆವರಣ,ಶಂಭುಲಿAಗೇಶ್ವರ ದೇವಾಲಯ ಆವಾರ ಹಾಗೂ ಮಾರ್ಗ ಮದ್ಯದ ರಸ್ತೆ ಬದಿಯಲ್ಲಿ,ರಾಷ್ಟ್ರೀಯ ಹೆದ್ದಾರಿ 66ರ ಎಡಬಲದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಎತ್ತಿ ಸ್ವಚ್ಚಗೊಳಿಸಿದರು. ಈ ಸಂದರ್ಭದಲ್ಲಿ ಕರಾವಳಿ ಪ್ರೌಢಶಾಲಾ ವಿದ್ಯಾರ್ಥಿಗಳು,ಗ್ರಾಮ ಪಂಚಾಯತನ ಜನಪ್ರತಿನಿಧಿಗಳು, ಕರವೇ ಸಂಘಟನೆ ಪ್ರಮುಖರು ಪಾಲ್ಗೊಂಡಿದ್ದರು.

ನAತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆಳಗಿನೂರು ಗ್ರಾಮ ಪಂಚಾಯತ ಅಧ್ಯಕ್ಷ ಗಂಗಾಧರ ಗೌಡ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚ ಸುಂದರವಾಗಿಟ್ಟುಕೊಳ್ಳಬೇಕೆನ್ನೊ ಉದ್ದೇಶದಿಂದ ಸ್ವಚ್ಛತೆ ನಡೆಸಿದ್ದಾರೆ. ಇಂತಹ ಕಾರ್ಯಕ್ರಮಗಳು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ಪರಿಸರದಲ್ಲಿ ಗಿಡನೆಡುವ ಹಾಗೂ ತ್ಯಾಜ್ಯಮುಕ್ತ ಗ್ರಾಮವನ್ನಾಗಿ ಮಾಡುವ ದೃಷ್ಟಿಯಿಂದ ಜನರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ನಡೆಸಿದ್ದಾರೆ. ಸ್ವಚ್ಛ ಪರಿಸರ ವಾಗಿಸಲು ನಮ್ಮೆಲ್ಲರ ಸಂಪೂರ್ಣ ಸಹಕಾರ ನೀಡಿದ್ದೇವೆ.ಮುಂದೆಯೂ ಇಂತಹ ಕಾರ್ಯಕ್ರಮಗಳು ನಿರಂತರವಾಗಿರಲಿ ಎಂದರು.

ಪರಿಸರ ರಕ್ಷಣೆ ಎಂದರೆ ಕೇವಲ ಪರಿಸರಕ್ಕೆ ಸಿಮೀತವೆಂದೆಣಿಸಬಾರದು, ನಮ್ಮ ರಕ್ಷಣೆ ಎನ್ನುವ ಮನೋಭಾವ ರೂಢಿಸಿಕೊಳ್ಳಬೇಕು.ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೆಳಗಿನೂರು ಗ್ರಾಮ ಪಂಚಾಯತ ಸದಸ್ಯ ಅಣ್ಣಪ್ಪ ಗೌಡ ಮಾತನಾಡಿದರು.

ಕರವೇ ತಾಲೂಕಾಧ್ಯಕ್ಷ ಮಂಜುನಾಥಗೌಡ, ಸ್ವಚ್ಛತೆ ಎಂಬುದು ಕೇವಲ ವೇದಿಕೆಯ ಮೇಲಿನ ಭಾಷಣಕ್ಕೆ ಸೀಮಿತವಾಗಿರಬಾರದು ಅದು ಕೃತಿಯಲ್ಲಿ ಮೂಡಬೇಕು. ಸ್ವಚ್ಛತೆ ಎಂಬ ಪಾಠ ಕೇವಲ ಪುಸ್ತಕದ ಪಠ್ಯಕ್ಕೆ ಸೀಮಿತವಾಗಿರಬಾರದು.ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಚತೆ ಕೈಗೊಳ್ಳಬೇಕು ಎಂದರು.

ಇಕೋ ಕ್ಲಬ್ ಸಂಘಟಕರಾದ ಎಸ್. ವಿ ಕಾಣೆಕರ್ ಮಾತನಾಡಿ, ಸ್ವಚ್ಚತಾ ಕಾರ್ಯಕ್ರಮಕ್ಕಾಗಿ ಮಕ್ಕಳು ಒಂದು ವಾರ ಮುಂಚಿತವಾಗಿ ಅಗತ್ಯ ಸಲಕರಣೆಗಳೊಂದಿಗೆ ಸಜ್ಜಾಗಿದ್ದರು. ಇಂದಿನ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ. ಇದೇ ರೀತಿ ಆದರೆ ನಮ್ಮ ಗ್ರಾಮ ಸ್ವಚ್ಛ ಗ್ರಾಮವಾಗಿರುತ್ತದೆ ಎಂದರು. ನೈಸರ್ಗಿಕವಾಗಿ ಸಿಗುವಂತಹ ಆಮ್ಲಜನಕ ಇಂದು ಮಾಲಿನ್ಯದಿಂದ ಕಲುಷಿತಗೊಂಡಿದ್ದ ಪರಿಣಾಮ ಪರಿಶುಧ್ದ ಗಾಳಿಯನ್ನು ಪಡೆಯಲು ವಿಫಲರಾಗುತ್ತಿದ್ದೇವೆ. ಕರೋನಾ ಸಂದರ್ಭದಲ್ಲಿ ಆಕ್ಸಿಜನ್ ಅವಶ್ಯಕತೆ ಎಷ್ಟಿತ್ತೆಂಬುದು ಎಲ್ಲರಿಗೂ ಅರಿವಾಗಿದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಗಾಳಿಯು ಲಭಿಸುತ್ತದೆ. ಎಲ್ಲರು ಸ್ವಚ್ಚತೆಗೆ ಆಧ್ಯತೆ ನೀಡಿ ಎಂದು ಕರೆ ನೀಡಿದರು.

ಊರಿನ ಪ್ರಮಖರಾದ ಮಾದೇವ ಪಂಡಿತ,ಕರಾವಳಿ ಪ್ರಾಢಶಾಲಾ ಮುಖ್ಯೋಪಾಧ್ಯಾಯರಾದ.ಎಮ್. ಎಚ್ ನಾಯ್ಕ್, ಶಿಕ್ಷಕರಾದ ಪಿ. ಜಿ ಲಿಂಗೋಜಿ, ವಿ. ಎಚ್ ನಾಯ್ಕ್, ಎಸ್. ಎಮ್. ಗೌಡ, ವಿನೋದ್ , ಸಿಬ್ಬಂದಿಗಳು, ವಿದ್ಯಾರ್ಥಿಗಳು,ಕರವೇ ವಿದ್ಯಾರ್ಥಿ ಘಟಕದ ಅಧ್ಯಕ್ಷ ನಿಖಿಲ್ ನಾಯ್ಕ,ತರುಣ್ ನಾಯ್ಕ,ಶಿವಪ್ರಸಾದ ಗೌಡ ಮತ್ತಿತರರು ಹಾಜರಿದ್ದರು.

error: