May 18, 2024

Bhavana Tv

Its Your Channel

ತೆರಿಗೆ ಭಾರವಿಲ್ಲದ ರಾಜ್ಯ ಬಜೆಟ್, ಶಿಕ್ಷಣ ಕ್ಷೇತ್ರದಲ್ಲಿ ದಿಟ್ಟ ಕ್ರಮ- ಎಸ್. ಡಿ. ಎಮ್. ಪದವಿ ಕಾಲೇಜಿನ ಸಹ-ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಡಿ. ಎಲ್. ಹೆಬ್ಬಾರ ಅಭಿಪ್ರಾಯ

ಹೊನ್ನಾವರ: ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಮಂಡಿಸಿದ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಜನರಿಗೆ ಯಾವುದೇ ತೆರಿಗೆ ಭಾರವಾಗಲಿ ಅಥವಾ ಚುನಾವಣಾ ಆಮೀಷುಗಳನ್ನಾಗಲಿ ಘೋಷಿಸಿಲ್ಲ. ಕಳೆದ ವರ್ಷಕ್ಕಿಂತ 19000 ಕೋಟಿ ಮೊತ್ತವನ್ನು ಹೆಚ್ಚಿಸುವ ಮೂಲಕ ಒಟ್ಟೂ ಬಜೆಟ್ ಗಾತ್ರವನ್ನು 2,65,720ಕೋಟಿಗೆ ಹೆಚ್ಚಿಸಿರುತ್ತಾರೆ ಹಾಗೂ ರಾಜ್ಯದ ಆರ್ಥಿಕ ಬೆಳವಣಿಗೆಯ ನಿರೀಕ್ಷಿತ ದರವನ್ನು ಶೇಕಡಾ 9.5ಕ್ಕೆ ನಿಗದಿಗೊಳಿಸಲಾಗಿದೆ. ಕೃಷಿ ವಲಯಕ್ಕೆ 33,700 ಕೋಟಿ ಅನುದಾನ ನೀಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನ ನಡೆಸಲಾಗಿದೆ.ಶಿಕ್ಷಣ ಕ್ಷೇತ್ರಕ್ಕೆ 31,980 ಕೋಟಿ ಅನುದಾನ ನೀಡಿ ರಾಜ್ಯದಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ. ಐಐಟಿ ಮಾದರಿಯಲ್ಲಿ ರಾಜ್ಯದ ಕೆಲ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ತಾಲೂಕಾ ಮಟ್ಟದಲ್ಲಿ ನೀಟ್ ಪರೀಕ್ಷೆ ತರಬೇತಿ ಸೌಲಭ್ಯ, ಬೆಂಗಳೂರಿನ ಐಐಎಮ್‌ನಲ್ಲ್ಲಿ ಉದ್ಯಮ ಕೌಶಲ್ಯ ಅಭಿವೃದ್ಧಿ, 2.5 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಶಿಕ್ಷಣ, ಮಕ್ಕಳಿಗೆ ನಲಿ-ಕಲಿ ಹಂತದಿAದಲೇ ‘ಲ್ಯಾಬ್-ಇನ್-ಕಿಟ್’ ಮುಂತಾದ ಯೋಜನೆಗಳು ಶಿಕ್ಷಣ ಕ್ಷೇತ್ರದಲ್ಲಿ ದಿಟ್ಟ ಕ್ರಮಗಳಾಗಿವೆ.
ರಾಜ್ಯದ 2,275 ಹೆದ್ದಾರಿಗಳ ಅಭಿವೃದ್ಧಿಗೆ 3,500 ಕೋಟಿ ನೀಡಿರುವುದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 1,600 ಕೋಟಿ, ಮೆಟ್ರೋ ಮತ್ತು ರೈಲ್ವೆಗಳ ವಿಸ್ತರಣೆಗಳು ದೀರ್ಘಾವಧಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಾಂದಿಯಾಗಿದೆ.
ಪೌರಕಾರ್ಮಿಕರಿಗೆ ಸಂಕಷ್ಟ ಭತ್ತೆ, ಸರ್ವರಿಗೆ ಸೂರು ಯೋಜನೆಯಲ್ಲಿ 5 ಲಕ್ಷ ಮನೆಗಳ ನಿರ್ಮಾಣ, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರ ವೇತನ ಹೆಚ್ಚಳ, ಕ್ಷೀರ ಬ್ಯಾಂಕ ಸ್ಥಾಪನೆ, ಹನಿ ನೀರಾವರಿ ಸಬ್ಸಿಡಿ ಹೆಚ್ಚಳ, ಎಮ್.ಜಿ. ನರೇಗಾ ಯೋಜನೆಗೆ ಆಧ್ಯತೆ, ಗ್ರಾಮೀಣ ಪ್ರದೇಶದ ಮನೆಗಳಿಗೆ ನಲ್ಲಿ ನೀರಿನ ಪೂರೈಕೆ ಮುಂತಾದವುಗಳು ಬಡವರ ಪರ ಧೋರಣೆಗಳಾಗಿವೆ.
ಸಣ್ಣ-ಸೂಕ್ಷö್ಮ ಕೈಗಾರಿಕೆಗಳ ಆದ್ಯತೆ, ಜವಳಿ ಪಾರ್ಕ ಸ್ಥಾಪನೆ, ಮಹಿಳಾ ಉದ್ದಿಮೆದಾರರಿಗೆ 10 ಲಕ್ಷ ವರೆಗೆ ನೇರ ಸಾಲ ಸೌಲಭ್ಯ,
ಇನ್‌ವೆಸ್ಟ್ ಇನ್‌ಕರ್ನಾಟಕ ಯೋಜನೆಗಳು ಉದ್ಯಮ ವಲಯದ ಚೇತರಿಕೆಗೆ ಕಾರಣವಾಗಿದೆ.
ನಮ್ಮ ಜಿಲ್ಲೆಗೆ ಸಂಬAಧಿಸಿದAತೆ ಕಾರವಾರದಲ್ಲಿ ಮೀನುಗಾರಿಕಾ ತgಬೇತಿ ಸಂಸ್ಥೆ, ಕರಾವಳಿ ಪ್ರವಾಸೋಧ್ಯಮ ಅಭಿವೃದ್ದಿ ಯೋಜನೆ, ಕೇಣಿ-ಬೆಲೆಕೇರಿಯಲ್ಲಿ ಗ್ರೀನ್‌ಪೀಲ್ಡ್ ಬಂದರು, ತದಡಿ ಅಘನಾಶಿನಿ ದೋಣಿ ಸಂಪರ್ಕ ಮುಂತಾದವುಗಳು ನಮಗೆ ಸಿಕ್ಕ ಆಧ್ಯತೆಗಳಾಗಿವೆ.
ಆದರೆ, ಬಜೆಟ್‌ನಲ್ಲಿ ಎನ್.ಪಿ.ಎಸ್. ನೌಕರರ ಬಗ್ಗೆ ಚಕಾರ ಎತ್ತದಿರುವುದು, ರಾಜ್ಯ ಸರ್ಕಾರಿ ನೌಕರರ ವೇತನ ಪರೀಷ್ಕರಣೆU ೆಆಯೋಗಘೋಷಣೆ ಆಗದಿರುವುದು ಹಾಗೂ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕ್ರಮ ಕೈಗೊಳ್ಳದಿರುವುದು ಈ ವರ್ಗಗಳ ಅಸಮಾಧಾನಕ್ಕೆಕಾರಣವಾಗಿದೆ.

error: