May 18, 2024

Bhavana Tv

Its Your Channel

ಯಕ್ಷಾಂಗಣಕ್ಕೆ ಸೆಲ್ಕೋ ಸೌರ ದೀಪ ಕೊಡುಗೆಯ ಉದ್ಘಾಟನಾ ಸಮಾರಂಭ ಹಾಗೂ ದಿ. ಪ್ರೋ. ಎಂ. ಎ. ಹೆಗಡೆ ದಂಟಕಲ್ ಇವರ ಸಂಸ್ಮರಣೆ ಮತ್ತು ತಾಳಮದ್ದಲೆ

ಹೊನ್ನಾವರ :- ಭಾನುವಾರ ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀಮಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಯಕ್ಷಾಂಗಣಕ್ಕೆ ಸೆಲ್ಕೋ ಸೌರದೀಪ ಕೊಡುಗೆಯ ಉದ್ಘಾಟನಾ ಕಾರ್ಯಕ್ರಮವನ್ನು ಸಾಯಂಕಾಲ 4.00 ಗಂಟೆಗೆ ಯಕ್ಷಾಂಗಣ ಗುಣವಂತೆಯಲ್ಲಿ ನೆರೆವೇರಿಸಲಾಯಿತು.

ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಯಕ್ಷಾಂಗಣದ ಸೌರದೀಪವನ್ನು ಬೆಳಗಿಸುವ ಮೂಲಕ ಸುನೀಲ್ ನಾಯ್ಕ ಶಾಸಕರು, ಭಟ್ಕಳರವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಕಲೆ ಸಂಸ್ಕöÈತಿಯಲ್ಲಿ ಉತ್ತರ ಕನ್ನಡ ಬರಡು ಎಂಬ ಹೆಸರನ್ನು ಅಳಿಸಿ ಹಾಕಿದವರು ಶ್ರೀ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಲಿ ಕೆರೆಮನೆ ಇವರು. ಇದು ಹೆಮ್ಮೆಯ ಸಂಗತಿ. ನಮ್ಮ ಜಿಲ್ಲೆಗಷ್ಟೆ ಸೀಮಿತವಾಗಿರದೆ ಅನ್ಯರಾಜ್ಯದ ವಿದ್ಯಾರ್ಥಿಗಳಿಗೆ ನಮ್ಮ ಯಕ್ಷಗಾನದ ತರಬೇತಿ ನೀಡುತ್ತಿರುವದು ನಮಗೆ ಹೆಮ್ಮೆ ಎಂದರು. ಯಕ್ಷಗಾನ ದಿಗ್ಗಜರು ಉತ್ತರ ಕನ್ನಡದಲ್ಲಿಯೇ ಹೆಚ್ಚಾಗಿರುವದು ಸಂತೋಷ. ಇವರ ಈ ಸಾಧನೆಯನ್ನು ಮೆಚ್ಚಿ ಯಕ್ಷಾಂಗಣಕ್ಕೆ ಬೇಕಾಗುವ ಸಹಾಯವನ್ನು ಮಾಡುವದಾಗಿ ಬರವಸೆ ನೀಡಿದರು. ಸೆಲ್ಕೋ ದೀಪದ ಫಲಕ್ ಅನಾವರಣ ಮಾಡಿದ ಮಮತಾದೇವಿ ಜಿ.ಎಸ್, ಕೆ.ಎ.ಎಸ್. ಸಹಾಯಕ ಆಯುಕ್ತರು, ಭಟ್ಕಳ ಇವರು ಮಾತನಾಡುತ್ತ ಕೇವಲ ದಿನದ ಕಾರ್ಯದಲ್ಲಿಯೇ ಮುಳುಗಿರುತ್ತದ್ದ ನಮಗೆ ಇಂತಹ ಕಾರ್ಯಕ್ರಮದ ಫಲಕ ಅನಾವರಣ ಮಾಡುವ ಭಾಗ್ಯ ನನಗೆ ದೊರಕಿರುವದು ಅತ್ಯಂತ ಸಂತೋಷವಾಗಿದೆ. ಇಂತಹ ಸೇವಾ ಕಾರ್ಯಗಳಿಗೆ ನಮ್ಮಿಂದಾಗುವ ಎಲ್ಲಾ ಸಹಕಾರವನ್ನೂ ನೀಡುವದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೋಹನ ಭಾಸ್ಕರ ಹೆಗಡೆ, ಸಿ. ಇ. ಒ, ಸೆಲ್ಕೋ ಸೋಲಾರ್ ಲೈಟ್ ಪ್ರೆöÊ. ಲಿಮಿಟೆಡ್, ಬೆಂಗಳೂರು ಇವರು ಮಾತನಾಡುತ್ತಾ ಡಾ. ಮಹಾಬಲ ಹೆಗಡೆ, ಕೆರೆಮನೆ, ಶಂಭು ಹೆಗಡೆ, ಕೆರೆಮನೆ ಶ್ರೀ ಶಿವರಾಮ ಹೆಗಡೆ, ಕೆರೆಮನೆ ಶ್ರೀ ಗಜಾನನ ಹೆಗಡೆ ಎಲ್ಲರನ್ನೂ ಸ್ಮರಿಸಿದರು. ಯಕ್ಷಗಾನಕ್ಕೆ ಇವರ ಕೊಡುಗೆ ಅಪಾರ. ಇಂತಹ ಶ್ರೀ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಾಂಗಣಕ್ಕೆ ಸೆಲ್ಕೋ ಸೌರದೀಪವನ್ನು ಕೊಡುಗೆಯಾಗಿ ನೀಡುತ್ತಿರುವದು ನಮ್ಮ ಭಾಗ್ಯವೆಂದು ಹೇಳಿದರು. ಕೆರೆಮನೆ ಯಕ್ಷಗಾನ ಕಲಾವಿದರಾರೂ ಆರ್ಥಿಕವಾಗಿ ಶ್ರೀಮಂತರಲ್ಲ. ಆದರೆ ನಮ್ಮ ಕಲೆ ಸಂಸ್ಕöÈತಿಯನ್ನು ಉಳಿಸಿ ಬೆಳೆಸುವದರಲ್ಲಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದನ್ನು ನೆನಪಿಸಿ ಮುಂದಿನ ತಲೆಮಾರಿನವರು ಅದನ್ನೇ ಮುಂದುವರಿಸಿಕೊAಡು ಹೋಗುತ್ತಿರುವದು ಹೆಮ್ಮೆಯ ಸಂಗತಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ನಾಗರಾಜ ಜೋಶಿ ಸೋಂದಾ, ಕಾರ್ಯದರ್ಶಿ, ದಿ. ಪ್ರೋ. ಎಂ. ಎ. ಹೆಗಡೆ ಸಂಸ್ಮರಣಾ ಸಮಿತಿ, ಸ್ವರ್ಣವಲ್ಲಿ ಇವರು ದಿ. ಎಂ. ಎ. ಹೆಗಡೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ ಪ್ರೋ. ಎಂ. ಎ. ಹೆಗಡೆಯವರು ಯಕ್ಷಾಗಾನಕ್ಕೆ ಕೊಡುಗೆ ಅಪಾರ ಅಲ್ಲದೆ ಅನೇಕ ಯಕ್ಷಗಾನಗಳನ್ನು ರಚಿಸಿರುವದು ಹೆಮ್ಮೆಯ ವಿಷಯವೆಂದರು. ಅಲ್ಲದೆ ವೇದಿಕೆಯಲ್ಲಿ ಜಗದೀಶ ಪೈ, ಮಹಾಪ್ರಬಂಧಕರು, ಸೆಲ್ಕೋ ಸೋಲಾರ ಲೈಟ್ ಪ್ರೆöÊ. ಲಿಮಿಟೆಡ್, ಗುರುಪ್ರಕಾಶ ಶೆಟ್ಟಿ, ಉಪ ಮಹಾಪ್ರಬಂಧಕರು, ಸೆಲ್ಕೋ ಸೋಲಾರ ಲೈಟ್ ಪ್ರೆöÊ. ಲಿಮಿಟೆಡ್ ಹಾಗೂ . ಶಂಕರ ಐತಾಳ, ಅಧ್ಯಕ್ಷರು, ಗೀತಾ ಎಚ್. ಎಸ್. ಎನ್. ಫೌಂದೇಶನ್, ಕೋಟೇಶ್ವರ ಉಪಸ್ಥಿತರಿದ್ದರು. ನಂತರ ವೇದಿಕೆಯಲ್ಲಿರುವ ಎಲ್ಲಾ ಗಣ್ಯರೂ ಪ್ರೋ. ಎಂ. ಎ. ಹೆಗಡೆಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಅವರನ್ನು ಸ್ಮರಿಸಿದರು. ಕೊನೆಯಲ್ಲಿ ಅಧ್ಯಕ್ಷರಾದ ಲಕ್ಷಿ÷್ಮÃನಾರಾಯಣ ಕಾಶಿ, ಶಿವಮೊಗ್ಗ, ದಿ. ಎಮ್. ಎ. ಹೆಗಡೆ ಸಂಸ್ಮರಣಾ ಸಮಿತಿ, ಸ್ವರ್ಣವಲ್ಲಿ ಇವರು ತಮ್ಮ ಅಧಕ್ಷೀಯ ಭಾಷಣದಲ್ಲಿ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಗುರುಭಕ್ತಿ ಎಲ್ಲಾ ಕಲಾವಿದರಿಗೆ ಸಲ್ಲುವ ಭಕ್ತಿ, ಊರೆಲ್ಲ ಕತ್ತಲೆ ಆವರಿಸಿದಾಗ ರಂಗಸ್ಥಳವನ್ನು ಬೆಳಗಿಸಿ, ನೋಡುಗರ ಅಂತರAಗ ಬೆಳಗಿಸುವ ಕಾರ್ಯವನ್ನು ಕೆರೆಮನೆ ಯಕ್ಷಾಂಗಣದಲ್ಲಿ ಅದನ್ನು ಬೆಳಗಿಸಲು ದೀಪದಾನ ಮಾಡಿದ ಮೋಹನ ಹೆಗಡೆ ಹಾಗೂ ಬಡವರ ಮನೆಯ ಅಂಗಳದಲ್ಲಿ ದೀಪ ಬೆಳಗಿಸಿದ ಸೆಲ್ಕೋ ಈಗ ಕಲೆಯ ಬೆಳಕನ್ನು ಎಲ್ಲರ ಅಂತರAಗವನ್ನು ಬೆಳಗಿಸಿ ಕಲಾ ಕೌತುಕವನ್ನು ಸೃಷ್ಠಿಸಿದರು ಎಂದರು. ಈ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಈ ಕೆರೆಮನೆ ಯಕ್ಷಗಾನ ಮಂಡಳಿಗೆ ಶಾಸಕರ ಹಾಗೂ ಜನತೆಯ ಸಹಕಾರ ಹಾಗೂ ಸಹಾಯದ ಅವಶ್ಯಕತೆ ಇದೆ. ಅದನ್ನು ನೀಡುವ ನಂಬಿಕೆಯೂ ಇದೆ ಎಂಬ ಆಶಯವೂ ಇದೆ ಎಂದರು.
ನಂತರ ಹಲಸಿನ ಹಳ್ಳಿ ನರಸಿಂಹ ಶಾಸ್ತಿçಗಳು ವಿರಚಿಸಿದ ವಾಮನ ಚರಿತೆ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವನ್ನು ನಡೆಸಲಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆ ವಾದಕರಾಗಿ ಮೂರೂರು ನರಸಿಂಹ ಹೆಗಡೆ ಹಾಗೂ ಚಂಡೆವಾದಕರಾಗಿ ಮೂರೂರು ಗಜಾನನ ಹೆಗಡೆ ಹಾಗೂ ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ಟ, ಕೆರೆಕೈ, ಎಂ. ಎನ್. ಹೆಗಡೆ, ಹಳವಳ್ಳಿ, ಯಲ್ಲಾಪುರ, ಹಾಗೂ ಸರ್ಪಂಗಳ ಈಶ್ವರ ಭಟ್ಟ ರವರು ತಾಳಮದ್ದಲೆಯನ್ನು ಚಂದಗಾಣಿಸಿ ಕೊಟ್ಟರು. ಜನ ಸಮೂಹ ಆಗಾಗ ಚಪ್ಪಾಳೆ ತಟ್ಟಿ ಕಲಾವಿದರಿಗೆ ಸ್ಪಂದಿಸಿದರು. ಈ ಕಾರ್ಯಕ್ರಮಕ್ಕೆ 100ಕ್ಕಿಂತ ಹೆಚ್ಚು ಕಲಾಸ್ತರು ಭಾಗವಹಿಸಿದ್ದರು.
ಕೆರೆಮನೆ ಶಿವಾನಂದ ಹೆಗಡೆಯವರು ಎಲ್ಲಾ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿ ಸ್ವಾಗತಿಸಿದರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸೆಲ್ಕೋ ಸೋಲಾರದ 2012ರ ಸೋಲಾರ್ ವಾಟರ್ ಹೀಟರ್ ಕೊಡುಗೆ ಮತ್ತು ಈಗ ಯಕ್ಷಾಂಗಣಕ್ಕೆ ನೀಡುತ್ತಿರುವ ಸೋಲಾರ ದೀಪದ ಕೊಡುಗೆಯನ್ನು ಸ್ಮರಿಸುತ್ತಾ ಗಣ್ಯರನ್ನು ವೇದಿಕೆಗೆ ಅಹ್ವಾನಿಸಿದರು.
ಶ್ರೀಧರ ಹೆಗಡೆ ಕೆರೆಮನೆಯವರು ವಂದನಾರ್ಪಣೆಯನ್ನು ಮಾಡಿದರು. ಎಲ್. ಎಂ. ಹೆಗಡೆಯವರು ಕಾರ್ಯಕ್ರಮವನ್ನು ನಿರೂಪಿಸಿದರು.

error: