May 4, 2024

Bhavana Tv

Its Your Channel

ಚತುಷ್ಪದ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣಕ್ಕೆ ಇರುವ ತಾಂತ್ರಿಕ ಅಡತಡೆ ಕುರಿತು ನಾಲ್ಕು ದಿನದ ಒಳಗಾಗಿ ಚರ್ಚಿಸುವುದಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ

ಹೊನ್ನಾವರ: ಪಟ್ಟಣದಲ್ಲಿ ಚತುಷ್ಪದ ಹೆದ್ದಾರಿಗೆ ಮೇಲ್ ಸೇತುವೆ ನಿರ್ಮಾಣಕ್ಕೆ ಇರುವ ತಾಂತ್ರಿಕ ಅಡತಡೆ ಕುರಿತು ಒಂದು ವಾರದ ಒಳಗೆ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳೊಂದಿಗೆ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ನಾಲ್ಕು ದಿನದ ಒಳಗಾಗಿ ಚರ್ಚಿಸುವುದಾಗಿ ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಅವರು ಹಳದೀಪುರದಲ್ಲಿ ಶನಿವಾರರಾತ್ರಿ ಭೇಟಿ ಆದ ಪಟ್ಟಣದ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ ಅವರೊಂದಿಗೆ ಮಾತನಾಡುತ್ತಿದ್ದರು.
ಪಟ್ಟಣದ ಕರ್ಕಿನಾಕೆ, ಎಲ್‌ಐಸಿ ಕಚೇರಿ, ಎಮ್ಮೆಪೈಲ್, ಜೋಗಮಠ-ಲಕ್ಷö್ಮಣತೀರ್ಥ ಪ್ರದೇಶ, ಗೇರಸೊಪ್ಪಾ(ಕಾಲೇಜು) ವೃತ್ತ, ಡಿಎಫ್‌ಓ ಬಂಗ್ಲೊ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತಿರುವು, ಹೋಟೆಲ್ ಹೈವೆ ವೃತ್ತ, ತಹಶೀಲ್ದಾರ ಕಚೇರಿ, ಶರಾವತಿ ವೃತ್ತ, ಶ್ರೀದೇವಿ ಆಸ್ಪತ್ರೆಯಿಂದ ಬಂದರಿಗೆ ಹೋಗುವ ರಸ್ತೆ ಅತ್ಯಂತ ಜನÀಜಂಗುಳಿ, ಅತಿ ವಾಹನ ಓಡಾಟ ಪ್ರದೇಶವಾಗಿದ್ದು ಜನ ಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ಮತ್ತು ದಾಟಲು ಭಯಪಡುವಂತಾಗಿದೆ.
ಮೊದಲು ಯೋಜನೆಯಲ್ಲಿ ಪಟ್ಟಣದಲ್ಲಿ ಮೇಲ್ ಸೇತುವೆ ನಿರ್ಮಿಸಲು ಹಾಗೂ ರಸ್ತೆ ಕಾಮಗಾರಿಗೆ 45 ಮೀ ಸ್ಥಳವನ್ನು ಮೀಸಲಾಗಿ ಇಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಹೆದ್ದಾರಿ ವಿಸ್ತೀರ್ಣವನ್ನು 35 ಮೀ ಗೆ ಇಳಿಸಿ ಮೇಲ್ ಸೇತುವೆ ನಿರ್ಮಾಣವನ್ನು ಯೋಜನೆಯಿಂದ ಕೈಬಿಡಲಾಗಿದೆ. ಇದರಿಂದಾಗಿ ತಾಲೂಕಿನ ನಿವಾಸಿಗಳಿಗೆ ಹಾಗೂ ರಸ್ತೆ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನಾನೂಕೂಲತೆ ಉಂಟಾಗಿದೆ. ಅಪಘಾತ ಸಂಖ್ಯೆಯು ಹೆಚ್ಚುತ್ತಿದ್ದು ಸಾವು-ನೋವುಗಳ ಪ್ರಮಾಣ ಜಾಸ್ತಿ ಆಗುತ್ತಿದೆ ಆದ್ದರಿಂದ ಮೊದಲಿನ ಯೋಜನೆಯಲ್ಲಿ ಇರುವಂತೆ ಹೆದ್ದಾರಿಗೆ ಪಟ್ಟಣದಲ್ಲಿ ಮೇಲ್ ಸೇತುವೆ ನಿರ್ಮಿಸಿ ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೇಲ್ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ, ಕಾರ್ಯದರ್ಶಿ ರಘು ಪೈ, ಸಂಚಾಲಕ ಲೋಕೇಶ ಮೇಸ್ತ, ಸಂಜಯ ಶೇಟ್, ರಾಜು ಭಂಡಾರಿ, ಸುರೇಶ ಹೊನ್ನಾವರ, ಅಜಿತ್ ನಾಯ್ಕ ಹಳದೀಪುರ, ವೇಂಕಟೇಶ ಮೇಸ್ತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: