May 3, 2024

Bhavana Tv

Its Your Channel

ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆ ವಿಸ್ತರಿಸಲಾದ ಕಟ್ಟಡ ಉದ್ಘಾಟಿಸಿದ ಶ್ರೀ ಶ್ರೀ ಶ್ರೀ ಗಂಗಾಧರೇOದ್ರ ಸರಸ್ವತಿಸ್ವಾಮೀಜಿ

ಹೊನ್ನಾವರ ತಾಲೂಕಿನ ಮಂಕಿಯ ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆ ವಿಸ್ತರಿಸಲಾದ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಶ್ರೀ ಶ್ರೀ ಗಂಗಾಧರೇoದ್ರ ಸರಸ್ವತಿಸ್ವಾಮೀಜಿಯವರು ನೇರವೇರಿಸಿದರು.

ದಿವ್ಯ ಸಾನಿದ್ಯ ವಹಿಸಿದ ಸ್ವರ್ಣವಲ್ಲಿ ಶ್ರೀಗಳು ಆರ್ಶೀವಚನ ನೀಡಿ ನಮ್ಮ ಮನಸ್ಸನ್ನು ನಾವು ಸಹನೆಯಿಂದ ಇಟ್ಟಿಕೊಳ್ಳುವುದು ಹೇಗೆ ಎನ್ನುವುದನ್ನು ನಾವು ಕಲಿಸಬೇಕಿದೆ. ಮಾನಸಿಕವಾಗಿ ಸದೃಡವಾದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ಮಕ್ಕಳಿಗೆ ಯೋಗಾಸನ ಮತ್ತು ಪ್ರಾಣಾಯಾಮ ಕಲಿಸಬೇಕಿದೆ. ಇದರ ಜೊತೆಗೆ ಭಾರತೀಯ ಶಾಸ್ತ್ರೀಯ ಸಂಗೀತಗಳು ಮನಸ್ಸಿಗೆ ನೆಮ್ಮದಿ ನೀಡಲಿದೆ ಇದನ್ನು ಶಾಲೆಯಲ್ಲಿ ಪಠೈತರವಾಗಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಭಟ್ಕಳ ಸಹಾಯಕ ಆಯುಕ್ತರಾದ ಮಮತಾದೇವಿ ಜಿ ಎಸ್ ಮಾತನಾಡಿ ವಿದ್ಯಾರ್ಜನೆ ಮಾಡುವ ಜವಬ್ದಾರಿ ದೊಡ್ಡದಾಗಿದ್ದು ಮಂಕಿ ಹೋಬಳಿಯಲ್ಲಿ ಉತ್ತಮ ಶಿಕ್ಷಣದ ಮೂಲಕ ಜನಮನ್ನಣೆಯಲ್ಲಿದ್ದು ಮುಂದಿನ ದಿನದಲ್ಲಿ ಇಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳ ಸಾಧನೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಎ.ಆರ್.ನಾಯ್ಕ ವಹಿಸಿದ್ದರು.

ವೇದಿಕೆಯಲ್ಲಿ ಐ.ಎ.ಎಸ್ ಅಧಿಕಾರಿ ಅವಿನಾಶ್ ಶಿಂದೆ, ಡಿ.ಡಿಪಿ.ಐ ಹರೀಶ ಎಲ್. ಗಾವಂಕರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್ ಹೆಗಡೆ, ಗೋಲ್ ಇಂಟರ್‌ನ್ಯಾಶನಲ್ ಶಾಲೆಯ ನಿರ್ದೇಶಕಿಯಾದ ದೀಪಾ ಎನ್. ರಾವ್, ನಿರ್ದೇಶಕ ಬಸವರಾಜ ಗೌಡ, ಪ್ರಾಂಶುಪಾಲರಾದ ರಮೇಶ ಯರಗಟ್ಟಿ, ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಭಾರತದ ಹಿರಿಮೆ ಗರಿಮೆ ನಮ್ಮ ಸಂಸ್ಕೃತಿ ಹಾಗೂ ಸಾಹಿತ್ಯ, ಸಂಗೀತ, ಭಕ್ತಿಪಂಥ, ನಮ್ಮ ದೇಶವನ್ನು ಆಳಿರುವ ಮಹಾರಾಜರುಗಳು, ಅವರು ಬಿಟ್ಟುಹೋಗಿರುವ ಶ್ರೀಮಂತ ಪರಂಪರೆ, ಪ್ರಪಂಚಕ್ಕೆ ಭಾರತ ದೇಶ ವಿವಿಧ ಕ್ಷೇತ್ರಗಳಲ್ಲಿ ನೀಡಿರುವ ಕೊಡುಗೆಗಳನ್ನು ಹಾಗೂ ಭಾರತದ ವೈಶಿಷ್ಟ್ಯಗಳನ್ನು ನೃತ್ಯರೂಪಕ ‘ನಮಸ್ತೆ ಇಂಡಿಯಾ’ ಮುಖಾಂತರ ವೇದಿಕೆಯಲ್ಲಿ ಅನಾವರಣಗೊಳಿಸಿದರು.

error: