May 3, 2024

Bhavana Tv

Its Your Channel

08-3-2022 ಎಸ್. ಡಿ. ಎಮ್. ಪದವಿ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ

ಹೊನ್ನಾವರ,:- ದಿನಾOಕ 08-03-2022 ಮಂಗಳವಾರ ಮುಂಜಾನೆ 10 ಗಂಟೆಗೆ ಎಸ್.ಡಿ.ಎಂ. ಪದವಿ ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್‌ನ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರು ಮೂಲದ ‘ದಿಯಾ ಸಿಸ್ಟಮ್ಸ್’ ಕಂಪನಿಯವರು ತಾಂತ್ರಿಕ ಹುದ್ದೆಗಳಿಗಾಗಿ ಆಯ್ಕೆ ನಡೆಸಲಿದ್ದಾರೆ. ಇದಕ್ಕೆ 2018, 2019, 2020, 2021 ರ ಅವಧಿಯಲ್ಲಿ ಬಿ.ಎಸ್ಸಿ., ಬಿ.ಸಿ.ಎ., ಎಂ.ಎಸ್ಸಿ., ಎಂ.ಸಿ.ಎ. ಮತ್ತು ಬಿ.ಇ. ಪದವಿಯೊಟ್ಟಿಗೆ ಕಂಪ್ಯೂಟರ್ ಜ್ಞಾನ ಹೊಂದಿದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.
ಆಯ್ಕೆಯು Aptitude Test, Essay Writing, H.R. ಸಂದರ್ಶನಗಳನ್ನು ಒಳಗೊಂಡಿರುತ್ತದೆ. ಆಸಕ್ತ ಅರ್ಹ ಪದವಿದರರು ತಮ್ಮ ರೆಸ್ಯೂಮ್, ಫೋಟೋ, ಆಧಾರ ಪ್ರತಿಯೊಂದಿಗೆ ಸಮಯಕ್ಕೆ ಸರಿಯಾಗಿ ಹಾಜರಿರಲು ಸೂಚಿಸಲಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಆಫರ್ ಲೆಟರ್ ನೀಡಲಾಗುತ್ತದೆ. ವಾರ್ಷಿಕ ಸಂಬಳ ರೂ. 2.50 ಲಕ್ಷದಿಂದ 3.50 ಲಕ್ಷ ಇರುತ್ತದೆಯೆಂದು ಕಂಪನಿಯವರು ತಿಳಿಸಿರುತ್ತಾರೆ. ಆಸಕ್ತ ವಿದ್ಯಾರ್ಥಿಗಳು ಈ ಕೆಳಗೆ ನೀಡಿದ ನಂಬರ್‌ಗೆ ಎಸ್.ಎಂ.ಎಸ್./ ಕರೆ ಮೂಲಕ ದಿನಾಂಕ 07-03-2022 ರ ಸಂಜೆ 5.30 ರೊಳಗೆ ನೋಂದಾಯಿಸಿಕೊಳ್ಳಲು ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ನಾಯ್ಕ ತಿಳಿಸಿರುತ್ತಾರೆ.
ನೋಂದಣಿಗೆ ಸಂಪಕಿಸಬೇಕಾಗಿ ವಿವರ:

ಡಾ. ಡಿ. ಎಲ್. ಹೆಬ್ಬಾರ, ಪ್ಲೇಸ್‌ಮೆಂಟ್ ಆಫೀಸರ್ – 9448435061
ಡಾ. ಪಿ. ಎಂ. ಹೊನ್ನಾವರ, ಐ.ಕ್ಯೂ.ಎ.ಸಿ. ಕೋಆರ್ಡಿನೇಟರ್ – 9448153586

error: