May 17, 2024

Bhavana Tv

Its Your Channel

ಕರ್ಕಿಮೇಳವು ಜಿಲ್ಲೆಯ ಸಮಗ್ರ ಯಕ್ಷಗಾನ ಕೇಂದ್ರವಾಗಿತ್ತು- ಡಾ. ಜಿ.ಎಲ್. ಹೆಗಡೆ

ಹೊನ್ನಾವರ: ಒಬ್ಬ ಪ್ರಬುದ್ಧ ಕಲಾವಿದನಾಗಬೇಕಾದರೆ ಯಕ್ಷಗಾನ ಪರದೆಯ ಹಿಂದಿನ ಮತ್ತು ಮುಂದಿನ ಪಾತ್ರ ನಿರ್ವಹಿಸುವ ಅಹ9ತೆ ಹೊಂದಿರಬೇಕೆAದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಹೇಳಿದರು.

ಇತ್ತೀಚಿಗೆ ಜಿಲ್ಲಾ ಮತ್ತು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ ಪುರಸ್ಕೃತ ಸತ್ಯ ನಾರಾಯಣ ಹಾಸ್ಯಗಾರ ರನ್ನು ,ಕರ್ಕಿಯ ಅವರ ಮನೆಯಂಗಳದಲ್ಲಿಸನ್ಮಾನಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಯ ತಿಟ್ಟನ್ನು ಪ್ರಧಾನವಾಗಿ ಎತ್ತಿಹಿಡಿದ ಹಾಸ್ಯಗಾರ ಕುಟುಂಬದ ಯಕ್ಷ ಸೇವೆ ಎಂದಿಗೂ ಮರೆಯುವಂತಿಲ್ಲ. ಭವಿಷ್ಯತ್ತಿನ ಪರಿಧಿಯಲ್ಲಿ ಏನೆಲ್ಲ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಿದ ಸಾಧಕರಲ್ಲಿ ಹಾಸ್ಯಗಾರ ಮೇಳ ಪ್ರಮುಖವಾದದ್ದು.ಯಕ್ಷ ವರ್ಣ ವೈಭವದಲ್ಲಿ ಕರ್ಕಿ ಯಕ್ಷ ಪರಂಪರೆಯನ್ನು ದಾಖಲಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಾಗರಿಕ ಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಹಾಸ್ಯಗಾರ ಕುಟುಂಬದ ಬಹುತೇಕರು ಅಧ್ಯಾಪಕರಾಗಿ, ಕಲಾವಿದರಾಗಿ ನುಡಿದಂತೆ ನಡೆದು ಮಾದರಿಯಾದವರು. ತನ್ನತನವನ್ನು ಇಟ್ಟುಕೊಂಡು ಬದುಕುವ ಕಲೆ ಮೈಗೂಡಿಸಿಕೊಂಡ ಅಧ್ಯಾಪಕವರ್ಗ ಯಕ್ಷ ಪರಂಪರೆಯನ್ನು ಮುಂದುವರಿಸಿದ ಸಾಧಕರು. ಇಂತಹ ಸಾಧಕರ ಮನೆಯಂಗಳದಲ್ಲಿ ಸಾಧಕರನ್ನು ಗೌರವಿಸುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ಎಂ. ಹೆಗಡೆ ಮಾತನಾಡಿ, ಯಕ್ಷಗಾನಕ್ಕೆ ವಿಶೇಷತೆ ತಂದ ಹಾಸ್ಯಗಾರ ಕುಟುಂಬ ಸಂಸ್ಕೃತಿಗೆ ಹೆಸರಾಗಿದೆ. ಅನುವಂಶಿಕವಾಗಿ ಬಂದ ಕಲೆಯನ್ನು ಆರಾಧಿಸುವ ಮೂಲಕ ಉತ್ತಮ ಕಲಾವಿದರಾಗಿ ಕರ್ಕಿ ಮೇಳದ ಪ್ರಸಿದ್ಧಿಗೆ ಕಾರಣಿಕರ್ತರಾದವರು ಎಂದರು.

ನೌಕರರ ಸಂಘದ ಅಧ್ಯಕ್ಷ ಆರ್.ಟಿ. ನಾಯ್ಕ ಮಾತನಾಡಿ, ಸಾಧಕರನ್ನು ಗೌರವಿಸುವುದು ನಿಜವಾದ ಸಾಧನೆಗೆ ಸಂದ ಗೌರವ.ಜನಪದ ಕಲೆಯಾದ ಯಕ್ಷಗಾನ ಕರ್ಕಿ ಮೇಳದ ಸಾಧಕರಿಂದ ಇನ್ನಷ್ಟು ಪರಿಪಕ್ವ ಗೊಂಡಿದೆ ಎಂದರು.

ಸನ್ಮಾನ ಸ್ವೀಕರಿಸಿ ಸತ್ಯನಾರಾಯಣ ಹಾಸ್ಯಗಾರ ಮಾತನಾಡಿ, ನನ್ನ ಹಿರಿಯರಿಂದ ಕಲಿತ ಯಕ್ಷಗಾನ ಜನರಿಗೆ ಮನರಂಜನೆ ಒದಗಿಸುವುದು ಮತ್ತು ಅವರ ಉತ್ತಮ ಭಾವನೆ ಉತ್ತೇಜಿಸುವುದಾಗಿದೆ. ಯಕ್ಷಗಾನ ನಡೆಯುವ ಸಂದರ್ಭದಲ್ಲಿ ಹಿಮ್ಮೇಳ ಅಥವಾ ಮುಮ್ಮೇಳದ ಕಲಾವಿದರು ಬಾರದೇ ಇರುವ ಸಂದರ್ಭದಲ್ಲಿ ಆ ಸ್ಥಾನ ತುಂಬುವ ಕೆಲಸ ನನ್ನಿಂದ ಆಗಿದೆ. ಸಾಹಿತ್ಯ ಪರಿಷತ್ತಿನ ಗೌರವಕ್ಕೆ ಅಭಿನಂದಿಸುತ್ತೇನೆ ಎಂದರು.

ಯಕ್ಷಗಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಮಂಜುನಾಥ ಭಟ್,ಕಲಾವಿದರಾದ ಶ್ರೀಪಾದ ಹೆಗಡೆ,ಮೋಹನ ನಾಯ್ಕ ಕೂಜಳ್ಳಿ, ಗೋಪಾಲಕೃಷ್ಣ ಭಾಗವತ,ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ, ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷೆ ಸಾಧನಾ ಬರ್ಗಿ,ಶಿಕ್ಷಕ ಶಶಿಧರ್ ದೇವಾಡಿಗ ಮುಂತಾದವರು ಹಾಸ್ಯಗಾರರನ್ನು ಅಭಿನಂದಿಸಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ ನಾಯ್ಕ, ಶಿಕ್ಷಕ ಸಂಘದ ಶಂಕರ ನಾಯ್ಕ, ಪತ್ರಕರ್ತರಾದ ಎಚ್.ಎಂ. ಮಾರುತಿ, ನಾಗರಾಜ ನಾಯ್ಕ, ಶಿಕ್ಷಕರಾದ ನಾರಾಯಣ ಹೆಗಡೆ, ಬಿ.ಎನ್ ಹೆಗಡೆ. ಲೋಕೇಶ ಚಂದಾವರ, ಗೌರೀಶ ಭಂಡಾರಿ, ಜನಾರ್ಧನ ಕಾಣಕೊಣಕರ ಮುಂತಾದವರು ಉಪಸ್ಥಿತರಿದ್ದರು.

ಆರಂಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಪಿ.ಆರ್. ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುದೀಶ ನಾಯ್ಕ ವಂದಿಸಿದರು. ಪರಿಷತ್ತಿನ ಘಟಕಾಧ್ಯಕ್ಷ ಎಸ್.ಎಚ್.ಗೌಡ ನಿರೂಪಿಸಿದರು.

error: