May 17, 2024

Bhavana Tv

Its Your Channel

ದಿ ಕಾಶ್ಮೀರ ಪೈಲ್ಸ್ ಹೊನ್ನಾವರದಲ್ಲಿ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಿದ ಉದ್ಯಮಿ ಜಿ. ಜಿ. ಶಂಕರ

ಹೊನ್ನಾವರ : ಖ್ಯಾತ ನಿರ್ದೇಶಕ ವಿವೇಕ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರಿ ಪೈಲ್ಸ್ ಸಿನೇಮಾ ಉಚಿತ ವೀಕ್ಷಣೆಗೆ ತಾಲೂಕಿನ ಸೇಪ್ ಸ್ಟಾರ್ ಸೌಹಾರ್ದ ಸಹಕಾರ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಜಿ. ಜಿ. ಶಂಕರ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಮೂವತ್ತು ವರ್ಷದ ಹಿಂದೆ ಕಾಶ್ಮೀರದಲ್ಲಿ ನಡೆದ ನೈಜ ಘಟನೆ ಆಧಾರಿತ ಚಲನಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿದೆ. ಕಾಶ್ಮೀರಿ ಪಂಡಿತರ ಮಾರಣಹೋಮ ಹಾಗೂ ವಲಸೆ ಕುರಿತ ನೈಜ ಘಟನೆಯನ್ನು ಆಧರಿಸಿರುವ ಚಿತ್ರವನ್ನು ತಾಲೂಕಿನ ಜನತೆಗೆ ನೋಡಲು ಅವಕಾಶ ಮಾಡಿಕೊಡಲಾಗಿದೆ.

ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಜಿ. ಜಿ. ಶಂಕರ ಮಾತನಾಡಿ ಪಟ್ಟಣದ ಪದ್ಮಾಂಜಲಿ ಚಿತ್ರಮಂದಿರದಲ್ಲಿ ಮಾರ್ಚ ೧೮ ರಿಂದ ಒಂದುವಾರ ಪ್ರತಿದಿನ ಬೆಳಿಗ್ಗೆ ೮ ಗಂಟೆ ಹಾಗೂ ೧೧ ಗಂಟೆಗೆ ಎರಡು ಪ್ರದರ್ಶನಗಳಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಚಿತ್ರಮಂದಿರದಲ್ಲಿ ೫೬೦ ಆಸನಗಳಿದ್ದು ಹೊನ್ನಾವರ ತಾಲೂಕು ಮಾತ್ರವಲ್ಲದೇ ಬೇರೆ ತಾಲೂಕಿನವರು ವೀಕ್ಷಿಸಬಹುದು ಎಂದು ತಿಳಿಸಿದರು.

ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಅವರನ್ನು ಓಡಿಸುವ ಅಜೆಂಡಾವನ್ನು ಇಟ್ಟುಕೊಂಡು ಅವರ ಮಾರಣಹೋಮ ಮಾಡಿರುವ, ಅವರು ವಲಸೆ ಹೋಗಿರುವ ಸತ್ಯಘಟನೆ ಅಡಗಿಹೋಗಿತ್ತು. ವಿವೇಕ ಅಗ್ನಿಹೋತ್ರಿಯವರು ನಾಲ್ಕು ವರ್ಷ ಪರಿಶ್ರಮಪಟ್ಟು ಸತ್ಯಘಟನೆಯನ್ನು ಆಧರಿಸಿ ಸಿನೇಮಾ ತೆಗೆದಿದ್ದಾರೆ. ಕಪಿಲ್ ಶರ್ಮ ಅದನ್ನು ಪ್ರಮೋಟ್ ಮಾಡಲು ಒಪ್ಪಲಿಲ್ಲ ಎನ್ನುವುದು ಬೇಸರದ ಸಂಗತಿ ಎಂದರು.

ಇAತಹ ಧಾರುಣ ಇತಿಹಾಸ ಮತ್ತೆ ಮರುಕಳಿಸಬಾರದು. ಹಿಂದೆ ಜರುಗಿದ ಕಾಶ್ಮೀರಿ ಪಂಡಿತರ ಇತಿಹಾಸ ಜನರಿಗೆ ತಿಳಿದಿರಬೇಕು. ಸತ್ಯವನ್ನು ಜನರಿಗೆ ತಲುಪಿಸಬೇಕು ಎಂಬ ಆಶಯದೊಂದಿಗೆ ಕಷ್ಟವಾದರೂ ಈ ಸಿನೇಮಾವನ್ನು ಇಲ್ಲಿ ತಂದು ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮಹೇಶ ಕಲ್ಯಾಣಪುರ ಮಾತನಾಡಿ ಕಾಶ್ಮೀರಿ ಪಂಡಿತರ ಬಹುದೊಡ್ಡ ಹತ್ಯಾಕಾಂಡದ ಕುರಿತು ಸಿನೇಮಾ ರಿಲೀಸ್ ಆಗಿದೆ. ಜನರು ಇತಿಹಾಸವನ್ನು ತಿಳಿದುಕೊಂಡು ಜಾಗೃತರಾಗಬೇಕಾಗದಿದ್ದರೆ ಮುಂದೊAದು ದಿನ ಕೇರಳ ಪೈಲ್ಸ್, ಗೊವಾ ಪೈಲಸ್‌ಗಳಂತ ಸಿನೇಮಾಗಳನ್ನು ನೋಡಬೇಕಾದ ದಿನಗಳು ಬಂದರೂ ಅಚ್ಚರಿಪಡಬೇಕಿಲ್ಲ ಎಂದರು.

ಸದಾನAದ ಭಟ್ ಮಾತನಾಡಿ ಸತ್ಯ ತಡವಾಗಿ ಬೆಳಕಿಗೆ ಬಂದರೂ ಶಾಶ್ವತವಾಗಿ ನೆಲೆನಿಲ್ಲುತ್ತದೆ. ಸತ್ಯವನ್ನು ಅರ್ಥ ಮಾಡಿಕೊಂಡರೆ ರಾಷ್ಟ್ರಧರ್ಮ ಉಳಿಯುವುದು ಎಂದರು.

ಆರ್. ಎಸ್. ಎಸ್. ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ಭೂ ಸ್ವರ್ಗವೆಂದು ಕರೆಯಲ್ಪಡುವ ಕಾಶ್ಮೀರದಲ್ಲಿ ಆಗಿನ ಸರಕಾರಗಳು ನರಕ ಮಾಢಿದವು. ಕಾಶ್ಮೀರಿ ಪಂಡಿತರನ್ನು ಹೊರಹಾಕಲು ಅವರ ನರಮೇಧ ಮಾಡಿ ಓಡಿಹೋಗುವ ಸನ್ನಿವೇಶವನ್ನು ಅಲ್ಲಿಯವರು ಸೃಷ್ಠಿಸಿದರು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಶಿವರಾಜ ಮೇಸ್ತ ಮಾತನಾಡಿ ಸತ್ಯ ಇತಿಹಾಸವನ್ನು ತಿಳಿಸುವ ಈ ಸಿನೇಮಾವನ್ನು ಜನರಿಗೆ ಉಚಿತವಾಗಿ ತೋರಿಸಲು ಜಿ. ಜಿ. ಶಂಕರ ಮುಂದಾಗಿರುವುದು ಅಭಿನಂದನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುರೇಶ ಹೊನ್ನಾವರ, ದೀಪಕ ಶೇಟ್ ಕರ್ಕಿ, ಉಮೇಶ ಮೇಸ್ತ, ಹರಿಶ್ಚಂದ್ರ ನಾಯ್ಕ, ಬಾಲಕೃಷ್ಣ ಬಾಳೇರಿ ಮತ್ತಿತರರು ಉಪಸ್ಥಿತರಿದ್ದರು.

error: