May 16, 2024

Bhavana Tv

Its Your Channel

ಹೊನ್ನಾವರ: ಕಣ್ಮನ ಸೆಳೆದ ‘ ನೂಪುರ ನಾದ ‘

ಹೊನ್ನಾವರ: ಶಿರಸಿಯ ಸುಪ್ರಸಿದ್ಧ ನಾಟ್ಯಾಂಜಲಿ ಕಲಾಕೇಂದ್ರ ಹೊನ್ನಾವರ ಶಾಖೆಯ ಮುಖ್ಯಶಿಕ್ಷಕಿ ವಿದುಷಿ ವಿನುತಾ ರಾಘವೇಂದ್ರ ಹೆಗಡೆ ಹಾಗೂ ಕೇಂದ್ರದ ವಿದ್ಯಾರ್ಥಿಗಳಿಂದ ನೂಪೂರ ನಾದಕಾರ್ಯಕ್ರಮ ನಡೆಯಿತು. ಸಹಶಿಕ್ಷಕರು ಹಾಗೂ ಪಾಲಕ ವೃಂದದ ಸಹಕಾರದಲ್ಲಿ ನಡೆದಕಲಾ ಕೇಂದ್ರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್‌ರವರು ನಾಟ್ಯಂಜಲಿ ಕಲಾಕೇಂದ್ರದ ಕಾರ್ಯಕ್ರಮಗಳ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು.
ಶಿವಾನಿ ಟ್ರೇಡರ್ಸ್ ಮಾಲಿಕ ಕೃಷ್ಣಮೂರ್ತಿ ಭಟ್‌ರವರು ಮಾತನಾಡಿ ಕಾರ್ಯಕ್ರಮದಲ್ಲಿ ಚಿಣ್ಣರಲೋಕ ಸೃಷ್ಟಿಯಾಗಿದೆ. ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಉತ್ತಮ ಕಾರ್ಯಕ್ರಮದ ವಾತವರಣ ಸೃಷ್ಟಿಯಾಗಿದೆಎಂದರು.
ಭಾವನಾ ಟಿವಿ ವರದಿಗಾರರಾದ ವೆಂಕಟೇಶ ಮೇಸ್ತರವರು ನೂಪೂರನಾದ ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡಿದರು.

ವೇದಿಕೆಯಲ್ಲಿ ಲಯನ್ಸ ಟ್ರಷ್ಟ ಕಾರ್ಯದರ್ಶಿ ಡಾ, ಎ ವಿ ಶ್ಯಾನಭಾಗ, ಅರವಿಂದ ಭಟ್ಟ ವಿದುಷಿ ವಿನುತಾ ಹೆಗಡೆ ಉಪಸ್ಥಿತದ್ದರು.

ಅಗಲಿದ ನೃತ್ಯ ವಿದುಷಿ ಶ್ರೀಮತಿ ಸೌಮ್ಯ ಅರವಿಂದ್ ಅವರ ಸ್ಮಾರಕ ‘ ಸೌಮ್ಯ ಸಿರಿ ‘ ವಾರ್ಷಿಕ ಪ್ರಶಸ್ತಿಯನ್ನು ಕೇಂದ್ರದ ಅತ್ಯುತ್ತಮ ವಿದ್ಯಾರ್ಥಿ ಕುಮಾರಿ ಸಾನ್ವಿರಾವ್ ಅವರಿಗೆ ಅತಿಥಿಗಳ ಉಪಸ್ಥಿತಿಯಲ್ಲಿ ನೀಡಿ ಸನ್ಮಾನಿಸಲಾಯಿತು. ವಿದುಷಿ ವಿನುತಾ ಹೆಗಡೆ ಹಾಗೂ ವಿವಿಧಗ್ರಾಮಾಂತರ ನಾಟ್ಯ ಕೇಂದ್ರಗಳ ಗುರುಗಳಿಗೆ ಶಿಷ್ಯರು ಸೇರಿ ಗುರುವಂದನೆ ಸಲ್ಲಿಸಿದರು. ರಾಘವೇಂದ್ರ ಹೆಗಡೆ ಸ್ವಾಗತಿಸಿದರು. ಹರ್ಷಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರೆ ರಾಜೇಶ್ವರಿ ಭಟ್ ವಂದಿಸಿದರು.
ವಿದುಷಿ ವಿನುತಾ ಹೆಗಡೆ ಹಾಗೂ ಕುಮಾರಿ ವಾಣಿಅವರ ನೇತೃತ್ವದಲ್ಲಿ ಸೊಗಸಾಗಿ ಮೂಡಿ ಬಂದ ಚಕ್ರವ್ಯೂಹ ನೃತ್ಯರೂಪಕ ಹಾಗೂ ವಿದ್ಯಾರ್ಥಿಗಳ ಭರತನಾಟ್ಯದಅಲರಿಪು, ಜತಿಸ್ವರ, ಶ್ಲೋಕ, ದೇವರನಾಮಗಳು, ವರ್ಣಂ, ದೇವಿಕೃತಿ ಮುಂತಾದ ನೃತ್ಯ ಬಂಧಗಳ ಆಕರ್ಷಕ ಪ್ರದರ್ಶನ ನೋಡುಗರ ಮನ ಸೆಳೆದವು.

error: