April 28, 2024

Bhavana Tv

Its Your Channel

ಬೆಳ್ಳುಕುರ್ವಾ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ, ಗ್ರೀನ ಬೋರ್ಡ ಮತ್ತು ಪಿಠೋಪಕರಣಗಳ ಉದ್ಘಾಟನಾ ಕಾರ್ಯಕ್ರಮ

ಹೊನ್ನಾವರದ ಸ.ಹಿ.ಪ್ರಾ.ಶಾಲೆ ಬೆಳ್ಳುಕುರ್ವಾ ಇಲ್ಲಿ ಇಂಟರನೆಟ್ ಸಂಪರ್ಕ, ಸ್ಮಾರ್ಟ ಟಿ.ವಿ ಅಳವಡಿಸಿದ ಸ್ಮಾರ್ಟ್ ಕ್ಲಾಸ ಮತ್ತು ವಿದ್ಯಾರ್ಥಿಗಳಿಗೆ ಡೆಸ್ಕ ಬೆಂಚು ಹಾಗೂ ಎರಡು ತರಗತಿ ಕೋಣೆಗಳಿಗೆ ಗ್ರೀನ್ ಬೋರ್ಡ ಅಳವಡಿಕೆ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ ಮಾವಿನಕುರ್ವಾದ ಅಧ್ಯಕ್ಷರಾದ ಹಾಗೂ ಸ್ಮಾಟ್ ಟಿ.ವಿ ದೇಣಿಗೆ ನೀಡಿದ ಜಿ.ಜಿ ಶಂಕರ ರವರು ಮಾತನಾಡಿ ಇವತ್ತಿನ ದಿನಗಳಲ್ಲಿ ಶಿಕ್ಷಣದ ಪರಿಭಾಷೆ ಬದಲಾಗಿದೆ. ನಾವೆಲ್ಲ ಕಲಿಯುವಾಗ ಒಂದು ಕಪ್ಪು ಸ್ಲೆಟ್ ಮತ್ತು ಬಳಪ ಇವಿಷ್ಟು ಇತ್ತು. ಆದರೆ ಇವತ್ತಿನ ದಿನ ಇಂಟರ್‌ನೆಟ್ ಯುಗ, ಇಂದಿನ ಮಕ್ಕಳು ತುಂಬಾ ಮುಂದುವರೆದ ಮಕ್ಕಳು, ಕೋವಿಡ್ ಸಮಯದಲ್ಲಿ ಮಕ್ಕಳು ಓನಲೈನ್ ಪಾಠದ ಮೂಲಕ ಸ್ಮಾಟ್ ಪೋನಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಯಲ್ಲಿಯು ಇಂಟರನೆಟ್ ಸಂಪರ್ಕ ಮತ್ತು ಸ್ಮಾರ್ಟ್ ಕ್ಲಾಸ ಅತ್ಯಂತ ಅಗತ್ಯವಾಗಿದೆ. ಇದರಿಂದ ಕಲಿಕಾ ಗುಣಮಟ್ಟ ಮತ್ತು ಕಲಿಕೆಯ ವೇಗ ಹೆಚ್ಚುತ್ತದೆ. ಇವತ್ತು ಸರಕಾರ ಹೊಸ ಹೊಸ ರೀತಿಯ ಪಠ್ಯಕ್ರಮ ಹಾಗೂ ಕಲಿಕಾ ವಿಧಾನಗಳನ್ನು ಪರಿಚಯಿಸುತ್ತಿದೆ. ಇವೆಲ್ಲದರ ಅನ್ವಯಕ್ಕೆ ಇಂಟರ್‌ನೆಟ್ ಅತ್ಯಗತ್ಯ. ಇವತ್ತು ಶಿಕ್ಷಣ ಇಲಾಖೆ ಸಂವೇದ, ಇ-ಕ್ಲಾಸ್‌ಗಳ ಮುಖಾಂತರ ಯುಟ್ಯೂಬ್ ನಲ್ಲಿಯು ಶಿಕ್ಷಣದ ವಿವಿಧ ಪಠ್ಯಕ್ರಮಗಳ ಭೋಧನೆಯನ್ನು ಅತ್ಯಂತ ಸುಲಭ ಹಾಗೂ ಮಕ್ಕಳಿಗೆ ಆಕರ್ಷಣಿಯವಾಗಿ ಆಸಕ್ತಿಯಿಂದ ಕಲಿಯುವಂತೆ ಮಾಡುತ್ತದೆ. ಇದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ತುಂಬಾ ಸಹಕಾರಿಯಾಗಿದೆ. ನಮ್ಮ ಮಾವಿಮಕುರ್ವಾ ಗ್ರಾಮದ ಬೆಳ್ಳುಕುರ್ವಾ ಶಾಲೆ ಶೈಕ್ಷಣಿಕವಾಗಿ ಹಾಗೂ ಭೌತಿಕವಾಗಿ ಸಕಲ ಸೌಲಭ್ಯಗಳನ್ನು ಹೊಂದಿದ ಅತ್ಯಂತ ಸುಸಜ್ಜಿತ ಶಾಲೆ. ಈ ಶಾಲೆ ವ್ಯಾಪ್ತಿಯ ಯಾವುದೇ ಒಂದು ಮಗುವು ಕೂಡ ಖಾಸಗಿ ಶಾಲೆಗೆ ಹೋಗದಂತೆ ಅದು ತನ್ನನ್ನು ಆಕರ್ಷಿಸಿಕೊಂಡಿದೆ. ಇಲ್ಲಿ 76 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ಮುಖ್ಯಾಧ್ಯಾಪಕರಾದ ಎಂ.ಜಿ ನಾಯ್ಕ ಮತ್ತು ಅವರ ಶಿಕ್ಷಕ ವೃಂದ, ಇದಕ್ಕಾಗಿ ಪಂಚಾಯತ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ಎಂದು ಹೇಳಿದರು. ಈ ದಿನ ದಾನಿಗಳ ಮತ್ತು ಧರ್ಮಸ್ಥಳ ಸೇವಾ ಸಂಸ್ಥೆ ನೆರವಿನಿಂದ ಇಂಟರ್‌ನೆಟ್ ಸಂಪರ್ಕ, ಸ್ಮಾರ್ಟ ಟಿವಿ, ಡೆಸ್ಕು ಬೆಂಚುಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ಎರಡು ಕ್ಲಾಸ ರೋಮ್ ಗಳಿಗೆ ಗ್ರೀನ ಬೋರ್ಡ ಅಳವಡಿಕೆಯನ್ನು ಮಾಡಿದ್ದಾರೆ. ಇದು ತುಂಬಾ ಸಂತೋಷದ ವಿಚಾರ ಇವತ್ತು ಸರಕಾರಿ ಶಾಲೆಗಳಲ್ಲಿ ಅತ್ಯಂತ ಗುಣ ಮಟ್ಟದ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಪಾಸಾದ ಪ್ರತಿಭಾವಂತ ಶಿಕ್ಷಕರು ಇರುತ್ತಾರೆ. ಎಲ್ಲರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಿ ಎಂದು ಕರೆ ನೀಡಿದರು. ತನ್ನ ಪಂಚಾಯತ ವ್ಯಾಪ್ತಿಯಲ್ಲಿ ಶಿಕ್ಷಣ, ಕುಡಿಯುವ ನೀರು, ಶೌಚಾಲಯ, ರಸ್ತೆ ಇವುಗಳಿಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡುತ್ತಿದ್ದೇವೆ. ಮಕ್ಕಳು ನಮ್ಮೆದುರಿನ ಆಸ್ತಿ, ತಾವು ಹಣ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನು ಉತ್ತಮ ಶಿಕ್ಷಣವಂತರನ್ನಾಗಿ ಮಾಡಿ ಅದೊಂದು ಬೆಲೆ ಕಟ್ಟಲಾಗದ ಆಸ್ತಿ ಆ ದಿಸೆಯಲ್ಲಿ ತಮ್ಮಲ್ಲೆರ ಪ್ರಯತ್ನ ಸಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಲೆಗೆ ಎರಡು ಗ್ರೀನ ಬೋರ್ಡ ಅಳವಡಿಕೆಗೆ ಸಹಾಯ ನೀಡಿದ ಹಳೆ ವಿದ್ಯಾರ್ಥಿ ಹಾಗೂ ಎನ್.ಈ.ಎಸ್. ಹೊನ್ನಾವರ ಶಿಕ್ಷಕರಾದ ದಯಾನಂದ ಎನ್. ಗೌಡ ಇವರು ಮಾತನಾಡಿ, ಇದು ತಾನು ಕಲಿತ ಶಾಲೆ ಶಿಕ್ಷಕರು ತನ್ನನ್ನು ಸಂಪರ್ಕಿಸಿ ಸಹಾಯ ಕೇಳಿದಾಗ ಪ್ರೀತಿಯಿಂದ ಹೆಮ್ಮೆಯಿಂದ ಕೊಟ್ಟಿದ್ದೇನೆ. ಗ್ರೀನ ಬೋರ್ಡ್ + ವೈಟ್ ಬೋರ್ಡ್ ಎರಡು ರೀತಿಯಲ್ಲಿ ಇದನ್ನು ಬಳಸಬಹುದು. ಇವತ್ತಿನ ಮುಂದುವರೆದ ಜಗತ್ತಿನಲ್ಲಿ ನಾವು ಆಧುನಿಕವಾಗಿ ಬದಲಾಗಬೇಕಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶ ಸರಕಾರಿ ಶಾಲೆಗಳನ್ನು ಈ ರೀತಿ ದಾನಿಗಳು ಸಹಾಯ ಸಹಕಾರ ನೀಡಿ ಅದನ್ನು ಉನ್ನತಿಕರಿಸಬೇಕಾಗಿದೆ. ಶಾಲೆಯು ಕೂಡ ಸಕಲ ಸೌಲಭ್ಯಗಳನ್ನು ಹೊಂದಿದಾಗ ಮಾತ್ರ ಶೈಕ್ಷಣಿಕವಾಗಿ ಹಾಗೂ ಕಲಿಕೆಯಗುಣಮಟ್ಟ ಉತ್ತಮವಾಗಲು ಸಾಧ್ಯ. ನಮ್ಮೂರಿನ ಎಲ್ಲ ಪಾಲಕ – ಪೋಷಕರು, ಹಳೆ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಾಯ ಹಸ್ತ ಚಾಚಿ ತಮ್ಮೂರಿನ ಶಾಲೆಯನ್ನು ಯಾವುದೇ ಶ್ರೀಮಂತ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಧರ್ಮಸ್ಥಳ ಸೇವಾ ಪ್ರತಿನಿಧಿ ಶ್ರೀಮತಿ ಮಂಜುಳಾ ಗೌಡ ರವರು ಮಾತನಾಡಿ ನಮ್ಮ ಸೇವಾ ಸಂಸ್ಥೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚಿನ ಅನುದಾನ ಸಹಾಯ ಹಸ್ತವನ್ನು ನೀಡುತ್ತಾ ಬಂದಿದೆ. ನಾವು ಯಾವುದೇ ಶಾಲೆಗಳಿಗೆ ಪಿಠೋಪಕರಣದ ಅವಶ್ಯಕತೆ ಇದ್ದರೆ 80% ರಷ್ಟು ಹಣವನ್ನು ನಮ್ಮ ಸೇವಾ ಸಂಸ್ಥೆ ನೀಡುತ್ತದೆ. ಉಳಿದ 20% ಹಣವನ್ನು ಶಾಲಾ ಎಸ್.ಡಿ.ಎಮ್.ಸಿ ಅಥವಾ ದಾನಿಗಳು ನೀಡಿರುತ್ತಾರೆ. ಬೆಳ್ಳುಕುರ್ವಾ ಶಾಲೆಗೆ ಅತ್ಯಂತ ಉತ್ತಮ ಗುಣಮಟ್ಟ 39800/- ರೂ ಬೆಲೆಯ ಡೆಸ್ಕ ಬೆಂಚುಗಳನ್ನು ಎಸ್.ಡಿ.ಎಮ್.ಸಿ ವಿನಂತಿ ಮೇರೆಗೆ ನೀಡಿದ್ದೇವೆ. ಎಂದು ಹೇಳಿದರು.
ನಂತರ ಕ್ಲಸ್ಟರ ಸಿ.ಆರ್.ಪಿ ಎಸ್. ಎಮ್ ಭಟ್ ರವರು ಮಾತನಾಡಿ ನಮ್ಮ ಕ್ಲಸ್ಟರಿನಲ್ಲಿಯೇ ಎಲ್ಲ ಭೌತಿಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಹೊಂದಿರುವ ಸುಂದರ ಶಾಲೆ ಬೆಳ್ಳುಕುರ್ವಾ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಾದೇವ ಗೌಡ ರವರು ಮಾತನಾಡಿ ಶಾಲೆಯ ಸರ್ವತೋಮುಖ ಪ್ರಗತಿಗೆ ನಾವೆಲ್ಲರೂ ಕಟಿಬದ್ದರಾಗಿದ್ದೇವೆ. ನಮ್ಮ ಶಾಲೆ ನಮ್ಮೂರಿನ ಶಿಕ್ಷಣದ ಬಗ್ಗೆ ಚಿಂತನೆ ಮಾಡುವ ಅತ್ಯುತ್ತಮವಾದ ಶಿಕ್ಷಕರನ್ನು ಹೊಂದಿದೆ ಎಂದು ಹೇಳಿ ಶಿಕ್ಷಕರನ್ನು ಅಭಿನಂದಿಸಿದರು. ಶಾಲೆಯ ಪ್ರಗತಿಗೆ ಜನಪ್ರತಿನಿಧಿಗಳ, ಪಾಲಕರ, ಹಳೆವಿದ್ಯಾರ್ಥಿಗಳ ಸಹಕಾರ ಕೋರಿದರು.
ಸಭೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರಾದ ಸುಮನಾ ನಾರಾಯಣ ಗೌಡ, ಸವಿತಾ ನಾಯ್ಕ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಮಮತಾ ನಾಯ್ಕ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ಎಂ.ಜಿ. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಆಯ್.ಎಚ್. ಗೌಡ ವಂದಿಸಿದರು. ಶಿಕ್ಷಕಿಯರಾದ ಸುವರ್ಣ ಗೊನ್ಸಾಲ್ವಿಸ್ ಮತ್ತು ಪ್ಲೋವರಿನಾ ರೊಡ್ರಗೀಸ್ ನಿರೂಪಿಸಿದರು.
ಸಭೆಯಲ್ಲಿ ಎಸ್.ಡಿ.ಎಮ್.ಸಿ ಸದಸ್ಯರು ಪಾಲಕರು – ಪೋಷಕರು ಹಾಜರಿದ್ದರು.

error: