June 30, 2022

Bhavana Tv

Its Your Channel

ಹೊನ್ನಾವರ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ‘ಜನ ಸೇವೆಗಾಗಿ ನಾವು ನೀವು’ ಅಧಿಕಾರಿಗಳ ಸಭೆ

ಹೊನ್ನಾವರ: ಶಿಶುವಿನ ಮರಣದ ಪ್ರಮಾಣ ಕಡಿಮೆಯಾಗುವಲ್ಲಿ ಹೆಚ್ಚಿನ ಮುತುವಜಿ9 ವಹಿಸಬೇಕಾದ ಅವಶ್ಯಕತೆಯಿದೆ ಎಂದು ಯೋಜನಾ ಇಲಾಖೆಯ ಜಂಟಿ ನಿದೇ9ಶಕಿ ಲತಾದೇವಿ ಸಿ.ಎಸ್. ಇವರು ಹೊನ್ನಾವರ ಆರೋಗ್ಯ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ‘ಜನ ಸೇವೆಗಾಗಿ ನಾವು ನೀವು’ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯು ಪ್ರೌಢಶಾಲಾ ವಿದ್ಯಾಥಿ9ಗಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಅಲ್ಲದೇ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ ಪೂರೈಕೆ ಹಾಗೂ ಕಟ್ಟಡಗಳು ಸುಸ್ಥಿರವಾಗಿರುವಂತೆ ನೋಡಿಕೊಳ್ಳಬೇಕೆಂದರು.
ಸಭೆಯಲ್ಲಿ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪಶು ಸಂಗೋಪನಾ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಯೋಜನೆಗಳ ಅನುಷ್ಠಾನಗಳ ಬಗ್ಗೆ ಅವರು ವಿವರ ಪಡೆದರು. ಎಲ್ಲ ಅನುದಾನಗಳನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರು.
ತಾಲೂಕಾ ಪಂಚಾಯತ ಆಡಳಿತ ಅಧಿಕಾರಿ ವಿನೋದ ಅಣ್ವೆಕರ್ ಮಾತನಾಡಿ, ಹೊನ್ನಾವರ ತಾಲೂಕಾ

ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಎಲ್ಲಾ ಅನುದಾನಗಳು ಸಮಪ9ಕವಾಗಿ ಬಳಕೆಯಾಗಿವೆ ಎಂದು ತಿಳಿಸಿದರು.
ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ನಾಯ್ಕ್ರವರು ಮಾತನಾಡಿ, ಜನ ಸೇವೆಗಾಗಿ ನಾವು ನೀವು ಕಾರ್ಯಕ್ರಮದ ಮೂಲಕ ನಾಗರಿಕರಿಗೆ ಹೆಚ್ಚಿನ ಸೇವೆ ನೀಡಲು ಪ್ರಯತ್ನಿಸಲಾಗಿದೆ. ಆಡಳಿತಾಧಿಕಾರಿ ವಿನೋಧ ಅಣ್ವೇಕರ್‌ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳನ್ನು ಉತ್ತಮವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ವಿನೋದ ಅಣ್ವೇಕರ್‌ರವರು, ಹಿಂದಿನ ಸಾಮಾನ್ಯ ಸಭೆಯಲ್ಲಿ ತಿಳಿಸಿದಂತೆ ತಮ್ಮ ಸ್ವಂತ ಖರ್ಚಿನಿಂದ ಅಂಗನವಾಡಿ ಕೇಂದ್ರಗಳಿಗೆ ತೆಂಗಿನ ಸಸಿ ಹಾಗೂ ಮಾವಿನ ಗಿಡಗಳನ್ನು ವಿತರಿಸಿದರು.

ವರದಿ:- ವೆಂಕಟೇಶ ಮೇಸ್ತ..

error: