May 12, 2024

Bhavana Tv

Its Your Channel

ರಾಜ್ಯ ಸರ್ಕಾರ ಲೋಕಾಯುಕ್ತರನ್ನು ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸಿದ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ

ಹೊನ್ನಾವರ : ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸ್ಥಾನವು ತೆರವಾಗಿ ನಾಲ್ಕು ತಿಂಗಳು ಗತಿಸಿದರೂ ಈ ತನಕ ರಾಜ್ಯ ಸರ್ಕಾರ ಲೋಕಾಯುಕ್ತರನ್ನು ನೇಮಕ ಮಾಡದೇ ಇರುವುದು ಅತ್ಯಂತ ವಿಷಾದಕರ ಸಂಗತಿ ಎಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾದ್ಯಮಕ್ಕೆ ತಿಳಿಸಿದ್ದಾರೆ.

ಲೋಕಾಯುಕ್ತರ ಸ್ಥಾನ ತೆರವಾಗುವ ಮುನ್ನವೇ ಆ ಸ್ಥಾನಕ್ಕಾಗಿ ನೂತನ ಆಯುಕ್ತರನ್ನು ನೇಮಕ ಮಾಡುವುದು ಆಡಳಿತದ ಶಿಷ್ಠಾಚಾರವಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರ ಎಚ್ಚುತ ಲೋಕಾಯುಕ್ತಕ್ಕೆ ನ್ಯಾಯಮೂರ್ತಿಗಳನ್ನು ಒಂದು ತಿಂಗಳಲ್ಲಿ ನೇಮಕ ಮಾಡಬೇಕು. ಎ.ಸಿ.ಬಿಯನ್ನು (ಬ್ರಷ್ಠಾಚಾರ ನಿಗ್ರಹದಳ) ರದ್ದು ಪಡಿಸಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಶಕ್ತಿಯನ್ನು ನೀಡಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಪತ್ರಿಕೆಗೆ ತಿಳಿಸಿದ್ದಾರೆ.

ಭ್ರಷ್ಠಾಚಾರವೆಂಬುದು ನಾಗರಿಕತೆ ಪ್ರಾರಂಭವಾಗಿನಿAದಲೇ ಜನ್ಮತಾಳಿದೆ. ಮತ್ತು ಬ್ರಷ್ಠಾಚಾರವಿಲ್ಲದ ಸ್ಥಳವಿಲ್ಲ.  ಬ್ರಷ್ಠಾಚಾರಕ್ಕೆ ಜಾತಿ, ಧರ್ಮ, ಪಕ್ಷ, ಪಂಗಡ ಯಾವುದೇ ಲೇಪವು ಇಲ್ಲದಿರುವುದು ಅಷ್ಟೇ ಸತ್ಯ. ಬ್ರಷ್ಠಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ 80ರ ದಶಕದಲ್ಲೇ ಅಂದಿನ ಮುಖ್ಯಮಂತ್ರಿ ಮೌಲ್ಯಾಧಾರಿತ ರಾಜಕಾರಣಿ ಮಾನ್ಯ ರಾಮಕೃಷ್ಣ ಹೆಗಡೆಯವರು ಲೋಕಾಯುಕ್ತ ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು ಈ ಸಂಸ್ಥೆಯನ್ನು ಮುಚ್ಚಿಹಾಕಲು ಯಾವುದೇ ರಾಜಕೀಯ ಪಕ್ಷವಾಗಲಿ, ಆಡಳಿತ ಪಕ್ಷವಾಗಲಿ ಹುನ್ನಾರ ನಡೆಸಿದರೆ ಅದರ ಕಹಿಫಲವನ್ನು ಆ ಪಕ್ಷ ಅನುಭವಿಸಲೇ ಬೇಕಾಗುತ್ತದೆ. ಮತ್ತು ನಾಡಿನಲ್ಲಿ ಅರಾಜಕತೆ, ಬ್ರಷ್ಠಾಚಾರ, ಲಂಚವತಾರ ತಾಂಡವ ನೃತ್ಯಗಯ್ಯುವುದರಲ್ಲಿ ಸಂದೇಹವಿಲ್ಲ. ಮುಂದಿನ ದಿನಗಳಲ್ಲಿ ನಾಡಿನ ಪ್ರಜ್ಞಾವಂತ ನಾಗರಿಕರು ದಂಗೆ ಏಳುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ದೇವರಾಜ ಅರಸು ವಿಚಾರ ವೇದಿಕೆ ಉಗ್ರ ಹೋರಾಟಕ್ಕೂ ಬದ್ದವಾಗಿದೆ. 

ಆದಕಾರಣ ರಾಮ ರಾಜ್ಯ ಸಾಕಾರಕ್ಕಾಗಿ, ಅಚ್ಛೆದಿನಕ್ಕಾಗಿ, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕಾಗಿ ಆಡಳಿತರೂಡ ನಮ್ಮ ಬಿ.ಜೆ.ಪಿ ಸರ್ಕಾರ ಕೂಡಲೇ ಲೋಕಾಯುಕ್ತಕ್ಕೆ ಸೂಕ್ತ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಮತ್ತು ಎ.ಸಿ.ಬಿಯನ್ನು ರದ್ದು ಪಡಿಸಿ ಬ್ರಷ್ಠಾಚಾರ ತಡೆಗಟ್ಟುವಲ್ಲಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಶಕ್ತಿ ತುಂಬಬೇಕಾಗಿ ವಿನಂತಿ. ನಮ್ಮ ಜಿಲ್ಲೆಯ ನೇತಾರರು, ರಾಷ್ಟಿçÃಯ ನಾಯಕರು ಆದ ರಾಮಕೃಷ್ಣ ಹೆಗಡೆಯವರು ಕಟ್ಟಿದ ಲೋಕಾಯುಕ್ತವನ್ನು ಜೀವಂತÀ ಉಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಮಾನ್ಯರಾಜ್ಯಪಾಲರಿಗೂ, ಮುಖ್ಯಮಂತ್ರಿಗಳಿಗೂ ಲಿಖೀತ ಮನವಿ ಸಲ್ಲಿಸಲಾಗಿದೆ ಹಾಗೂ ರಾಷ್ಟçದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಅವಗಹನೆಗಾಗಿ ಯಥಾ ಪ್ರತಿಯನ್ನು ಮತ್ತು ಲೋಕಾಯುಕ್ತ ಕುರಿತು ಮಾಧ್ಯಮದಲ್ಲಿ ಪ್ರಕಟನೆಗೊಂಡ ದಾಖಲೆಗಳನ್ನು ಲಗತ್ತಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ. ದೇವರಾಜು ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ತಿಳಿಸಿದ್ದಾರೆ.
error: