May 11, 2024

Bhavana Tv

Its Your Channel

ಡಾ. ಆರ್. ವಿ. ಭಂಡಾರಿಯವರು ಬರೆದ ಕವನವನ್ನು ಪರಿಷ್ಕೃತ ಪಠ್ಯದಲ್ಲಿ ಅಳವಡಿಸಿಕೊಳ್ಳಲು ನೀಡಿದ ಪರವಾನಗಿ ಹಿಂಪಡೆದ ಕುಟುಂಬಸ್ಥರು

ಹೊನ್ನಾವರ: ಡಾ. ಆರ್. ವಿ. ಭಂಡಾರಿಯವರು ಬರೆದ ಕವನವನ್ನು ಪರಿಷ್ಕೃತ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಪರವಾನಗಿ ಹಿಂಪಡೆದಿರುವ ಪತ್ರವನ್ನು ಶ್ರೀ ಬಿ. ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು ಇವರಿಗೆ ಅಂಚೆ ಮೂಲಕ ಮತ್ತು ಈ ಮೇಲ್ ಮೂಲಕ ಇಂದು ಕುಟುಂಬದ ಪರವಾಗಿ ಕಳಿಸಲಾಗಿದೆ.

ತಮಗೆಲ್ಲ ಗೊತ್ತಿರುವಂತೆ, ನಾಡಿನ ಜನತೆಯ ಸಾಕ್ಷಿ ಪ್ರಜ್ಞೆಯಂತಿದ್ದ ಡಾ. ಆರ್. ವಿ. ಭಂಡಾರಿಯವರು ಅರವತ್ತರ ದಶಕದಲ್ಲಿಯೇ ಎರಡು ಸ್ನಾತಕೋತ್ತರ ಉನ್ನತ ಪದವಿಗಳನ್ನು ನಂತರ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಕೊನೆಯವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತೀರಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಸಲ್ಲಿಸಿದರು. ಮೂವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದವರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಮನಸ್ಸನ್ನು ಅರಳಿಸುವ ಪರಿಯನ್ನು ವೈಜ್ಞಾನಿಕವಾಗಿ ಅರ್ಥ ಮಾಡಿಕೊಂಡವರು. ನೂರಾರು ಪುಸ್ತಕ ಬರೆದು ಮಕ್ಕಳ ಸಾಹಿತ್ಯ, ವಿಮರ್ಶೆ, ಕತೆ, ಕಾದಂಬರಿ, ವೈಚಾರಿಕ, ಮಾನವಿಕ ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದವರು. ಪ್ರಸಿದ್ಧ ತಾಳಮದ್ದಲೆ ಅರ್ಥಧಾರಿಗಳೂ ಆಗಿದ್ದರು. ಸಾಕ್ಷರತಾ ಆಂದೋಲನವನ್ನು ಒಳಗೊಂಡು ಶೈಕ್ಷಣಿಕ ಎಲ್ಲಾ ಕೆಲಸಗಳಲ್ಲಿ ಇದ್ದವರು. ಅಂದು ಸಾಹಿತ್ಯ ಅಕಾಡೆಮಿ, ಕನ್ನಡ ಜಾಗೃತಿ ಸಮಿತಿ, ಗ್ರಂಥಾಲಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಲವತ್ತು ದಶಕಗಳ ಕಾಲ ವಿವಿಧ ಸರ್ಕಾರಗಳ ಅವಧಿಯಲ್ಲಿ ಪಠ್ಯ ಪುಸ್ತಕ ರಚನೆಗೆ ತನ್ನ ಪ್ರಬುದ್ಧ ಸಲಹೆಗಳನ್ನು, ಅಗತ್ಯವಿದ್ದಲ್ಲಿ ಸೂಕ್ತ ಮಾರ್ಪಾಡುಗಳನ್ನು ಸೂಚಿಸುವಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ ಅವಧಿಯಲ್ಲಿ ತಿಳಿ ಕನ್ನಡ, ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ, ಪರಿಷ್ಕೃತ, (ಎರಡನೇ ಭಾಷೆ, ಕನ್ನಡ ಪಠ್ಯಪುಸ್ತಕ) ಎಂಟನೆಯ ತರಗತಿಯ ಪರಿವಿಡಿಯ ಪದ್ಯಭಾಗದ 2 ನೇ ಕವನ ಪುಟ ಸಂಖ್ಯೆ 69-71 ರಲ್ಲಿರುವ ಆರ್. ವಿ. ಭಂಡಾರಿಯವರು ಬರೆದ “ಹಾರಿದ ಹಕ್ಕಿಗಳು” ಕವನವನ್ನು ಪಠ್ಯದಲ್ಲಿ ಬಳಸಲು ನೀಡಿದ ಪರವಾನಗಿಯನ್ನು ಡಾ. ಆರ್. ವಿ. ಭಂಡಾರಿಯವರ ಕುಟುಂಬದ ಪರವಾಗಿ ನೀಡಲಾಗಿತ್ತು.
ಬದಲಾದ ಪರಿಸ್ಥಿತಿಯಲ್ಲಿ ಈ ಪಠ್ಯವನ್ನು ಹಿಂಪಡೆಯಲು ಪತ್ರ ಕಳಿಸಲಾಗಿದೆ ಎಂದು ಕುಟುಂಬದ ಪರವಾಗಿ ಮಾಧ್ಯಮಕ್ಕೆ ಯಮುನಾ ಗಾಂವ್ಕರ್ ತಿಳಿಸಿದ್ದಾರೆ

error: