May 6, 2024

Bhavana Tv

Its Your Channel

ಪರಿಸರ ದಿನಾಚರಣೆಯ ಪ್ರಯುಕ್ತ “ಬೀಜ ಬಿತ್ತೋತ್ಸವ” ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಜನ್ನಕಡ್ಕಲ್ ಗ್ರಾಮದಲ್ಲಿ, ಅರಣ್ಯ ಇಲಾಖೆ ಹೊನ್ನಾವರ ವಲಯದ ಹಿರೇಬೈಲ್ ಶಾಖೆ ವತಿಯಿಂದ ಪರಿಸರ ದಿನಾಚರಣೆಯ ಪ್ರಯುಕ್ತ “ಬೀಜ ಬಿತ್ತೋತ್ಸವ” ಕಾರ್ಯಕ್ರಮ ನಡೆಯಿತು.

ಪರಿಸರದ ಕಾಳಜಿ ಜೊತೆಗೆ, ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುವುದು.
ಈ ವರ್ಷ ವಿಶೇಷವಾಗಿ ಕರ್ನಾಟಕ ಅರಣ್ಯ ಇಲಾಖೆಯು ‘ಬೀಜ ಬಿತ್ತೋತ್ಸವ’ ಕಾರ್ಯಕ್ರಮವನ್ನು, ಜೂನ್ 5 ರಿಂದ 12 ರ ತನಕ ಅಂದರೆ ಒಂದು ವಾರಗಳ ಕಾಲ ಆಯೋಜಿಸಿದೆ. ನಮ್ಮ ರಾಜ್ಯದ 50 ವಿಭಾಗಗಳ 228 ವಲಯಗಳಲ್ಲೂ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದಲ್ಲೇ ಅತೀ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಕಾರ್ಯಕ್ರಮ ಆಯೋಜಿಸಿದ್ದು, ನಾಲ್ಕು ಸಾವಿರ ಕೆ.ಜಿ. ಬೀಜಗಳ ಬಿತ್ತುವ ಗುರಿ ಹಾಕಿಕೊಳ್ಳಲಾಗಿದೆ. ಸ್ಥಳೀಯ ಜಾತಿಯ ಬೀಜಗಳನ್ನು ಸಂಗೃಹಿಸಿ “ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ.” ಎಂಬ ಘೋಷದೊಂದಿಗೆ… ಶಾಲೆಗಳು, ಯುವ ಸಂಘಟನೆ, ಸ್ವಯಂ ಸೇವಾ ಸಂಸ್ಥೆ ಮತ್ತು ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ನಿಗದಿತ ಪ್ರದೇಶಗಳಲ್ಲಿ ಬೀಜ ಬಿತ್ತುವ ಕಾರ್ಯಕ್ರಮವಿದು.

ಅದರಂತೆ ಜನ್ನಕಡ್ಕಲ್ ನಲ್ಲಿ ಈ “ಬೀಜ ಬಿತ್ತೋತ್ಸವ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಅರಣ್ಯ ಇಲಾಖೆಯವರ ಪ್ರಾಮಾಣಿಕ ಕರ್ತವ್ಯ ಹಾಗೂ ಜನಸ್ನೇಹಿ ವ್ಯಕ್ತಿತ್ವಕ್ಕೆ ಸಾಕ್ಷಿಯೆಂಬAತೆ ಪುಟಾಣಿಗಳಿಂದ ಹಿಡಿದು ವಯೋ ವೃದ್ಧರ ತನಕ ನೂರಾರು ಜನರು ಉತ್ಸಾಹದಿಂದ ಬೀಜ ಬಿತ್ತೋತ್ಸವ ದಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಧಿಕಾರಿ ಸುಬ್ರಹ್ಮಣ್ಯ ಗೌಡ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.

ಸ್ಥಳೀಯ ಪರಿಸರ ಪ್ರೇಮಿ ಮೋಹನ ನಾಯ್ಕ್ ಮಾತನಾಡಿ “ಹೆಚ್ಚು ಅರಣ್ಯ ಸಂಪತ್ತನ್ನು ಹೊಂದಿರುವ ನಮ್ಮ ಜನ್ನಕಡ್ಕಲ್ ನಲ್ಲಿ, ಮತ್ತಷ್ಟು ಜನುಪಯುಕ್ತ ಬೀಜಗಳನ್ನು ಬಿತ್ತಲಾಗಿದೆ. ಇವುಗಳನ್ನು ಮಕ್ಕಳಂತೆಯೇ, ನಮ್ಮ ಮಕ್ಕಳೊಂದಿಗೆ ಪೊಷಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ” ಎಂದರು.

ಈ ಸಂದರ್ಭದಲ್ಲಿ ಅರಣ್ಯ ರಕ್ಷಕ ಯಲ್ಲಪ್ಪ ಹಾಗೂ ಸಿಬ್ಬಂದಿಗಳಾದ ಕಮಲಾಕರ, ಗಣಪತಿ, ಗೋವಿಂದ, ಪರಮೇಶ್ವರ. ಮತ್ತು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನರಸಿಂಹ ನಾಯ್ಕ್ ಹಾಗೂ ಸದಸ್ಯರು, ಸಿಂಚನ ಮಹಿಳಾ ಸ್ವ-ಸಹಾಯ ಸಂಘದವರು, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಊರ ನಾಗರೀಕರೆಲ್ಲ ಪಾಲ್ಗೊಂಡು ಪರಿಸರ ಪ್ರೇಮ ಮೆರೆದರು.
ವರದಿ:ನರಸಿಂಹ ನಾಯ್ಕ್ ಹರಡಸೆ. ಹೊನ್ನಾವರ

error: