May 19, 2024

Bhavana Tv

Its Your Channel

ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆ ನಾಶ ಮಾಡುವ ಯೋಜನೆಗಳನ್ನು ತಂದು ಬಂಡವಾಳ ಶಾಹಿಗಳ ಉದ್ದಾರ ಮಾಡುತ್ತಿದೆ : ಎನ್ ಎಫ್ ಎಫ್ ಅಧ್ಯಕ್ಷರ ಆರೋಪ

ಹೊನ್ನಾವರ : ಸರ್ಕಾರ ಸಾಂಪ್ರದಾಯಿಕ ಮೀನುಗಾರಿಕೆ ನಾಶಮಾಡುವ ಯೋಜನೆಗಳನ್ನು ತಂದು ಬಂಡವಾಳ ಶಾಹಿಗಳನ್ನು ಉದ್ದಾರ ಮಾಡುತ್ತಿದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಗಳ ಒಕ್ಕೂಟ ಎನ್ ಎಫ್ ಎಫ್ ಅಧ್ಯಕ್ಷ ಲಿಯೋ ಕೊಲಾಸೊ ರವರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಹೊನ್ನಾವರ ಕಾಸರಕೋಡ ವಾಣಿಜ್ಯ ಬಂದರು ನಿರ್ಮಾಣದ ಪ್ರದೇಶಕ್ಕೆ ಭೇಟಿ ನೀಡಿ ಅನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಎನ್‌ಎಫ್‌ಎಫ್ ಸಂಸ್ಥೆ ದೇಶಾದ್ಯಂತ ರಥಯಾತ್ರೆ ಮಾಡಿ ಮೀನುಗಾರರ ಸಮಸ್ಯೆಗಳನ್ನು ಅಧ್ಯಯನ ಮಾಡುತ್ತಿದೆ. ಸಾಂಪ್ರದಾಯಿಕ ಮೀನುಗಾರರು ತೀವ್ರ ಸಂಕಷ್ಟದಲ್ಲಿದ್ಧಾರೆ. ಆದ್ದರಿಂದ ಮೀನುಗಾರರಲ್ಲಿ ಅರಿವು ಮೂಡಿಸಿ ನಮ್ಮ ಹಕ್ಕನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಕಾಸರಕೋಡಿನಲ್ಲಿ ಸರಿಯಾದ ಯಾವುದೇ ಅನುಮತಿ ಪಡೆಯದೆ ಸರ್ಕಾರ ಅಕ್ರಮವಾಗಿ ಕಾಮಗಾರಿ ನಡೆಸಲು ಮುಂದಾಗಿದೆ. ಇಲ್ಲಿ ನೂರಾರು ವರ್ಷಗಳಿಂದ ಮೀನುಗಾರರು ವಾಸಮಾಡುತ್ತಿದ್ದಾರೆ. ಇಲ್ಲಿಯ ಮೀನುಗಾರರಿಗೆ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ. ಈ ಸಮಸ್ಯೆಯ ಬಗ್ಗೆ ದೆಹಲಿಯಲ್ಲಿ ನಿಯೋಗ ತೆರಳಿ ಹೋರಾಟ ನಡೆಸಲಿದ್ದೇವೆ ಎಂದರು.

ಸAಘಟನೆಯ ಪ್ರಧಾನ ಕಾರ್ಯದರ್ಶಿ ವೊಲ್ಸೊಸೊ ಸಿಮಾನ್ಸ ಮಾತನಾಡಿ ಸರ್ಕಾರ ವಾಣಿಜ್ಯ ಬಂದರನ್ನು ಕೈಬಿಡಬೇಕು. ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಆದರು ಸರ್ಕಾರ ಅಧಿಕಾರ ಬಳಸಿ ಕೆಲಸ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಮಹಿಳಾ ಸೇವಾ ಸಂಸ್ಥೆಗಳ ಸಂಘಟನೆಯವರು ಮಾತನಾಡಿ ಇಲ್ಲಿ ಸಾವಿರಾರು ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಅವರ ಹಕ್ಕುಗಳನ್ನು ದಮನ ಮಾಡಲಾಗಿದೆ. ಈ ಬಗ್ಗೆ ನಾವು ಸಂಘಟನೆ ಸುಭದ್ರಗೊಳಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎನ್ ಎಫ್ ಎಫ್ ನ ಉಪಾಧ್ಯಕ್ಷ ರಾಮಕೃಷ್ಣ ತಾಂಡೇಲ್, ಕಾರ್ಯದರ್ಶಿ ಜ್ಯೋತಿ ಮೆಹಾರ್, ಪದಾಧಿಕಾರಿಗಳಾದ ಉಜ್ವಲ್ ಪಾಟೀಲ್, ಲಕ್ಷ್ಮೀ ಆಂದ್ರ, ಶ್ರೀಧರ ತಮಿಳುನಾಡು , ರಜನಿ ರಾವ್ ಸಂತೋಷ್, ವಕೀಲರಾದ ಸ್ರೀಜಾ ಚಕ್ರವರ್ತಿ, ಸ್ಥಳೀಯ ಮೀನುಗಾರ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು. ಚಂದ್ರಕಾAತ ಕೋಚರೆಕರ ಸ್ವಾಗತಿಸಿ ವಂದಿಸಿದರು.


ವರದಿ: ವೆಂಕಟೇಶ್ ಮೇಸ್ತ ಹೊನ್ನಾವರ

error: