May 16, 2024

Bhavana Tv

Its Your Channel

ಲಯನ್ಸ್ ಕ್ಲಬ್ ವತಿಯಿಂದ ಬೆಳ್ಳುಕುರ್ವಾ ಶಾಲೆಗೆ ನೋಟ್ ಬುಕ್ ವಿತರಣೆ

ಹೊನ್ನಾವರ ಬೆಳ್ಳು ಕುರ್ವಾ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಹೊನ್ನಾವರ ಇವರು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಹೊನ್ನಾವರದ ಖಜಾಂಚಿಗಳಾದ ಲಯನ್ ಎಂ. ಜೆ. ಎಫ್, ಎಸ್.ಜೆ. ಕೈರನ್ ರವರು ಮಾತನಾಡಿ ಗ್ರಾಮೀಣ ಪರಿಸರದ ಬಡ ಮಕ್ಕಳಿಗೆ ನೋಟ್ ಬುಕ್ ನೀಡುವ ಕಾರ್ಯಕ್ರಮವನ್ನು ಈ ವರ್ಷ ಅನೇಕ ಶಾಲೆಗಳಲ್ಲಿ ಮಾಡಿದ್ದೇವೆ. ಶಿಕ್ಷಣ ಅತ್ಯಂತ ಮುಖ್ಯವಾದದ್ದು ಮಕ್ಕಳು ಶಿಕ್ಷಣದ ಜೊತೆ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಗುರು ಹಿರಿಯರನ್ನು ಗೌರವಿಸುವುದು. ದೇಶವನ್ನು ಪ್ರೀತಿಸುವುದು ಎಲ್ಲಾ ಜಾತಿ ಧರ್ಮ ಪಂಗಡವನ್ನು ಗೌರವದಿಂದ ಕಾಣುವುದು ಪ್ರತಿಫಲಾಕ್ಷೆಯಿಲ್ಲದೆ ಸಂಕಷ್ಟದಲ್ಲಿರುವವರಿಗೆ ತಮ್ಮ ಕೈಲಾದ ಸಹಾಯ ಮಾಡುವುದು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜ್ಞಾವಂತ ನಾಗರಿಕರಾಗಿ ಸಮಾಜದಲ್ಲಿ ಬೆಳೆಯುವುದು ಅತಿ ಮುಖ್ಯವಾದದ್ದು “ಏನಾದರು ಆಗು ಮೊದಲು ಮಾನವನಾಗು” ಎನ್ನುವ ಗುಣ ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷರಾದ ಲಯನ್ ವಿನೋದನಾಯ್ಕ ಮಾವಿನಹೊಳೆ ಇವರು
ಮಾತನನಾಡಿ ಈ ವರ್ಷದ ನಮ್ಮ ಎಲ್ಲಾ ಸೇವಾ ಕಾರ್ಯಗಳನ್ನು ಗ್ರಾಮೀಣಪ್ರದೇಶಗಳಲ್ಲಿ ಹಮ್ಮಿಕೊಂಡಿದ್ದೇವೆ. ನಮ್ಮ ಈ ವರ್ಷದ ಲಯನ್ಸ್ನ ಧ್ಯೇಯ ವಾಕ್ಯ “ನಮ್ಮ ನಡೆ ಹಳ್ಳಿ ಕಡೆ” ಲಯನ್ಸ್ ಕ್ಲಬ್‌ನ ಎಲ್ಲಾ ಸೇವಾ ಚಟುವಟಿಕೆಗಳು ಅನೇಕ ದಾನಿಗಳಿಂದ ಕ್ಲಬ್‌ನ ಸದಸ್ಯರಿಂದ ಹಣ ಕ್ರೋಡಿಕರಿಸಿ ನಾವು ಅಸಹಾಯಕರಿಗೆ, ಮಹಿಳಾ ಸಬಲೀಕರಣಕ್ಕೆ, ಶಿಕ್ಷಣಕ್ಕೆ, ವೈದ್ಯಕೀಯ ಕಾರಣಗಳಿಗೆ ನಾವು ಸಹಾಯ ಹಸ್ತವನ್ನು ಚಾಚುತ್ತಿದ್ದೇವೆ. ಈ ವರ್ಷ 6 ಗ್ರಾಮೀಣ ಭಾಗದ ಶಾಲೆಗಳಿಗೆ ನೋಟ್‌ಬುಕ್ ವಿತರಣೆ ಮಾಡಿದ್ದೇವೆ. ಬೆಳ್ಳುಕುರ್ವಾ ಶಾಲೆಯ 90 ಮಕ್ಕಳಿಗೆ ಇಂದು ನೋಟ್ ಬುಕ್ ನೀಡಿದ್ದೇವೆ. ಇದೊಂದು ಉತ್ತಮವಾದ ಶಾಲೆ. ಇಲ್ಲಿಯ ಮಕ್ಕಳು ತುಂಬಾ ಪ್ರತಿಭಾವಂತರಾಗಿದ್ದಾರೆ. ಇಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ. ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಯನ್ ಎನ್. ಜಿ. ಭಟ್ಟರವರು ಲಯನ್ಸ್ನ ಕಾರ್ಯ ಚಟುವಟಿಕೆಗಳ ಕುರಿತು ಹಾಗೂ ಶಿಕಣದ ಮಹತ್ವದ ಕುರಿತು ಮಾತನಾಡಿದರು.

ವೇದಿಕೆಯಲ್ಲಿ ಜೋನ್ ಚೇರ ಪರ್ಸನ್ ಲಯನ್ ರಾಜೇಶ ಸಾಳೆಹಿತ್ತಲ, ಲಯನ್ ಶಾಂತಾರಾಮ ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಾದೇವ ಗೌಡ ಉಪಾಧ್ಯಕ್ಷೆ ಮಮತಾ ನಾಯ್ಕ ಹಾಗೂ ಶಿಕ್ಷಕಿ ಪ್ಲೋರಿನ್ ರೊಡ್ರಗೀಸ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕರಾದ ಎಂ. ಜಿ. ನಾಯ್ಕ ಸ್ವಾಗತಿಸಿದರು. ಶಿಕ್ಷಕರಾದ ಆಯ್. ಎಚ್. ಗೌಡ ವಂದಿಸಿದರು. ಸುವರ್ಣ ಗೊನ್ಸಾಲ್ವಿಸ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದ್ಯರು ಪಾಲಕರು ಹಾಜರಿದ್ದರು

error: