May 15, 2024

Bhavana Tv

Its Your Channel

ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ವತಿಯಿಂದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಕ ಶೇಟ್ ಗೆ ಸನ್ಮಾನ

   ಹೊನ್ನಾವರದ ಸುವರ್ಣಕಾರರ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ದೀಪಕ ರಾಮಚಂದ್ರ ಶೇಟ್, ಚಿತ್ತಾರ, ಮಂಕಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಇವರು ಕೇಂದ್ರ ಲೋಕಸೇವಾ ಆಯೋಗ ನಡೆಸಿರುವ ಪರೀಕ್ಷೆಯಲ್ಲಿ 311 ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿ ಸಾಧನೆಗೈದುದಕ್ಕಾಗಿ ಸಂಘದ ವತಿಯಿಂದ ಗೌರವಿಸುವ ಸಲುವಾಗಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಕೂಡಿ ಸನ್ಮಾನಿತರಿಗೆ ಫಲ ತಾಂಬೂಲ, ನೆನಪಿನ ಕಾಣಿಕೆ, ಸನ್ಮಾನ ಪತ್ರ ಹಾಗೂ ಶಾಲು ಹೊದಿಸಿ ಹಾರ ಹಾಕುವುದರ ಮೂಲಕ ಗೌರವಿಸಿ ಸನ್ಮಾನಿಸಿದರು. ದೈವಜ್ಞ ಯುವಕ ಸಂಘ, ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನ, ಹೊನ್ನಾವರ ಇವರು ಕೂಡ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಜುನಾಥ ಪಿ. ಶೇಟರವರು ವಹಿಸಿದ್ದರು. ಸನ್ಮಾನ ಸ್ವೀಕರಿಸಿದ ದೀಪಕ ಆರ್. ಶೇಟರವರು ತಮ್ಮIAS ಪರೀಕ್ಷೆಗೆ ನಡೆಸಿದ ಪೂರ್ವ ತಯಾರಿಯ ಕುರಿತು ಸವಿಸ್ತಾರವಾಗಿ ವಿವರಿಸಿದರು. ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಮಟ್ಟದ ವ್ಯಾಸಂಗ ಪಡೆದು ಅತ್ಯುನ್ನತ ಹುದ್ದೆಗಳನ್ನು ಪಡೆಯುವಂತಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮಾಧವ ಕೆ. ಶೇಟ ಅಧ್ಯಕ್ಷರು ಶ್ರೀ ವಿಠ್ಠಲ ರುಖುಮಾಯಿ ದೇವಸ್ಥಾನ, ಹೊನ್ನಾವರ, ಕೃಷ್ಣಕುಮಾರ ಎಲ್. ಶೇಟ, ಅಧ್ಯಕ್ಷರು, ಹೊನ್ನಾವರ ತಾಲೂಕಾ ದೈವಜ್ಞ ವಾಹಿನಿ, ಗಣೇಶ ಪಿ. ಶೇಟ, ಅಧ್ಯಕ್ಷರು, ದೈವಜ್ಞ ಯುವಕ ಸಂಘ, ಹೊನ್ನಾವರ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಶುಭ ಸಂದರ್ಭದಲ್ಲಿ ದೀಪಕ ಆರ್. ಶೇಟರವರ ತಂದೆ ತಾಯಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷರಾದ ಮಂಜುನಾಥ ಪಿ. ಶೇಟರವರು ಮಾತನಾಡಿ ದೀಪಕ ಆರ್. ಶೇಟರವರ ಮುಂದಿನ ಭವಿಷ್ಯವು ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು. ಸಂಘದ ಸಿಬ್ಬಂದಿ ಅಕ್ಷತಾ ರಾಯ್ಕರ ಪ್ರಾರ್ಥಿಸಿದರೆ ಮುಖ್ಯ ಕಾರ್ಯನಿರ್ವಾಹಕರಾದ ಬಾಲಚಂದ್ರ ಶೇಟರವರು ಸ್ವಾಗತಿಸಿದರು. ಸಂಘದ ಸಿಬ್ಬಂದಿಗಳಾದ ಸೂರಜ ವೆರ್ಣೇಕರ ನಿರೂಪಿಸಿದರೆ ಪ್ರಶಾಂತ ಶೇಟರವರು ಅತಿಥಿ ಪರಿಚಯವನ್ನು ನಡೆಸಿಕೊಟ್ಟರು. ಉಪಾಧ್ಯಕ್ಷರಾದ ರವೀಂದ್ರ ಎಂ. ಶೇಟರವರು ವಂದನಾರ್ಪಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ನಿರ್ದೇಶಕಿಯರು, ಸಿಬ್ಬಂದಿ ವರ್ಗದವರು, ಶೇರುದಾರ ಸದಸ್ಯರು, ಸಮಾಜ ಬಾಂಧವರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

error: