May 15, 2024

Bhavana Tv

Its Your Channel

ಪೋಷಕರ ಬಳಿ ಲಂಚ ಪಡೆದು ಅನಧೀಕೃತವಾಗಿ ಆರ್.ಟಿ.ಇ ಸೀಟ್ ಹಂಚಿಕೆ ,ಅಧಿಕಾರಿಗಳ ವಿರುದ್ದಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮನವಿ

ಹೊನ್ನಾವರ: ಪೋಷಕರ ಬಳಿ ಲಂಚ ಪಡೆದು ಅನಧೀಕೃತವಾಗಿ ಆರ್.ಟಿ.ಇ ಸೀಟ್ ಹಂಚಿಕೆ ಮಾಡಿರುವ ಕುರಿತು ಸಂಬ0ಧಪಟ್ಟ ಅಧಿಕಾರಿಗಳ ವಿರುದ್ದಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಕರುನಾಡ ವಿಜಯ ಸೇನೆ ಹೊನ್ನಾವರ ಘಟಕ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜಿಲ್ಲಾ ಗೌರವಾಅಧ್ಯಕ್ಷರಾದ ವಿನೋದ್ ನಾಯ್ಕ ರಾಯಲಕೇರಿ ಹಾಗು ಜಿಲ್ಲಾ ಅಧ್ಯಕ್ಷರಾದ ವಿನಾಯಕ ಆಚಾರಿ ರವರ ನೇತೃತ್ವದಲ್ಲಿ ಕಾನೂನು ಬಾಹಿರವಾಗಿ ಜಿಲ್ಲೆಯಲ್ಲಿ ಅನಾನುಕೂಲ ಪರಿಸ್ಥಿತಿ ಮತ್ತು ದುರ್ಬಲ ವರ್ಗದ ವಲಸೆ ಮಕ್ಕಳ ಕೋಟಾದ ಅಡಿಯಲ್ಲಿ ಸುಮಾರು ಮಕ್ಕಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬ0ಧಪಟ್ಟ ಅಧಿಕಾರಿಗಳು ಪೋಷಕರ ಬಳಿ ಲಂಚ ಪಡೆದು ಅನಧೀಕೃತವಾಗಿ ಆರ್.ಟಿ.ಇ ಸೀಟ್ ಹಂಚಿಕೆ ಮಾಡಿರುವ ಕುರಿತು ಸಂಬ0ದಪಟ್ಟ ಅಧಿಕಾರಿಗಳ ವಿರುದ್ದಸೂಕ್ತ ಕಾನೂನು ಕ್ರಮ ಜರುಗಿಸಿ 2012 ರಿಂದ ಇದುವರೆಗೂ ರಾಜ್ಯದಲ್ಲಿ ವಲಸೆ ಅನಾನುಕೂಲ ಪರಿಸ್ಥಿತಿ ಮತ್ತು ದುರ್ಬಲ ವಿಭಾಗದ ಕೋಟಾದ ಆರ್.ಟಿ.ಇ ಸೀಟ್ ಹಂಚಿಕೆಯಾಗಿರುವ ಬಗ್ಗೆ ಸಂಪೂರ್ಣ ತನಿಖೆ ಮಾಡುವ ಬಗ್ಗೆ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದಲ್ಲಿ ಮನವಿಯನನ್ನು ಕೊಡಲಾಯಿತು ಮನವಿಯನ್ನು ಪ್ರಮೋದ್ ನಾಯ್ಕ ಶಿಕ್ಷಣ ಸಂಯೋಜಕರು ಸ್ವೀಕರಿಸಿದರು…
ಜಿಲ್ಲಾ ವಕ್ತಾರ ಶ್ರೀರಾಮ್ ಅವರು ಮಾತನಾಡಿತಪ್ಪುಗಳನ್ನು ಆದಷ್ಟು ಬೇಗ ಸರಿಪಡಿಸಬೇಕು ಎಂದು ಹೇಳಿದರುಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರುನಾಡ ವಿಜಯ ಸೇನೆ ರಾಜ್ಯದಾದ್ಯಂತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಉಗ್ರ ಹೋರಾಟವನ್ನು ಮಾಡುವುದು ಎಂದು ತಿಳಿಸಿದ್ದಾರೆ,
ಈ ಸಮಯದಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಶ್ರೀನಿವಾಸ ನಾಯ್ಕ, ತಾಲೂಕು ಯುವಘಟಕದ ಅಧ್ಯಕ್ಷರಾದ ರಾಘವೇಂದ್ರ, ತಾಲೂಕು ಯುವ ಘಟಕ ಉಪಾಧ್ಯಕ್ಷರಾದ ನಿತಿನ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ. ಜಿ ಮ್ ರಾಹುಲ್, ಉಪಾಧ್ಯಕ್ಷರಾದ ಸಂದೇಶ್ ನಾಯ್ಕ ಉಪಸ್ಥಿತರಿದ್ದರು

error: