May 11, 2024

Bhavana Tv

Its Your Channel

ನಾಮಧಾರಿ ಸಂಘದ ಪ್ರತಿಭಾ ಪುರಸ್ಕಾರಕ್ಕೆ  ಅರ್ಜಿ ಆಹ್ವಾನ

ಹೊನ್ನಾವರ:- ಹೊನ್ನಾವರ ತಾಲೂಕ ನಾಮಧಾರಿ ಅಭಿವೃದ್ಧಿ ಸಂಘದ (ರ. ನಂ.791/12-13) ವತಿಯಿಂದ ಹೊನ್ನಾವರ ತಾಲೂಕಿನ ನಾಮಧಾರಿ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಎರಡು ವರ್ಷಗಳ 2021/2022 ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಲು ಸಂಘವು ತೀರ್ಮಾನಿಸಿದೆ. ಎರಡೂ ವರ್ಷಗಳ 2021 ಹಾಗೂ 2022 ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಯಲ್ಲಿ ಶೇಕಡಾ 90% ಕಿಂತ ಹೆಚ್ಚು ಅಂಕ ಪಡೆದ ಹಾಗೂ ಪಿ. ಯು. ಸಿ. ದ್ವಿತೀಯ ವರ್ಗದಲ್ಲಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ) ಶೇಕಡಾ 85% ಕ್ಕಿಂತ ಹೆಚ್ಚಿಗೆ ಅಂಕ ಪಡೆದ ಹೊನ್ನಾವರ ತಾಲೂಕಿನ ನಾಮಧಾರಿ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ದಿನಾಂಕ 10/07/2022 ರ ಒಳಗೆ ಸಂಘಕ್ಕೆ ಅರ್ಜಿ ಸಲ್ಲಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ

ಸಂಘದ ಅರ್ಜಿ ನಮೂನೆ ಹೊನ್ನಾವರದ ನಾಮಧಾರಿ ವಿದ್ಯಾರ್ಥಿ ನಿಲಯದಲ್ಲಿ ಹಾಗೂ ಆಯಾ ಭಾಗದ ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಆಡಳಿತ ಸಮಿತಿ ಸದಸ್ಯರಲ್ಲಿ ಸಹ ಲಭ್ಯ ವಿರುತ್ತದೆ ಪೂರ್ತಿ ತುಂಬಿದ ಅರ್ಜಿಯನ್ನು ಅಂಕ ಪಟ್ಟಿಯ ದೃಡೀಕೃತ ನಕಲು ಪ್ರತಿ,ಪಡಿತರ ಚೀಟಿಯ ನಕಲು ಪ್ರತಿ ಹಾಗು ಧೃಡೀಕೃತ ಶಾಲಾ ವರ್ಗಾವಣಾ ಪತ್ರದ (ಟಿಸಿ) ನಕಲು ಪ್ರತಿಯೊಂದಿಗೆ ವಾಮನ ಎಸ್. ನಾಯ್ಕ (ಮಾಜಿ ಸೈನಿಕ) ಪ್ರಧಾನ ಕಾರ್ಯದರ್ಶಿ ತಾಲೂಕ ನಾಮಧಾರಿ ಅಭಿವೃದ್ಧಿ ಸಂಘ (ರೀ) ಹೊನ್ನಾವರ, ಸಾಕೀನ್- ಸಾರಸ್ವತಕೇರಿ, ಪೋಸ್ಟ್ : ಮಂಕಿ -581348. ಈ ವಿಳಾಸಕ್ಕೆ ಕಳುಹಿಸಕೊಡಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ 8217639109 (ಪ್ರ.ಕಾರ್ಯದರ್ಶಿ) ಅಥವಾ 9448995689 (ಅಧ್ಯಕ್ಷರು) ಇವರನ್ನು ಸಂಪರ್ಕಿಸಬಹುದಾಗಿದೆ.

error: