May 17, 2024

Bhavana Tv

Its Your Channel

ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್ ನಲ್ಲಿ 8 ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಯೋಗಪಟುಗಳ ಮಾರ್ಗದರ್ಶನದಲ್ಲಿ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ಶಾಲಾ ವಿದ್ಯಾರ್ಥಿಗಳು ವಿವಿಧ ತಂಡಗಳಲ್ಲಿ ಯೋಗಾಸನವನ್ನು ಮಾರ್ಗದರ್ಶಕರ ಸಹಕಾರದಿಂದ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಯೋಗದ ಮಹತ್ವದ ಕುರಿತು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಯಿತು. ಸಂಘದ ಮಾರ್ಗದರ್ಶಕರಲ್ಲಿ ಒಬ್ಬರಾದ ರಾ. ಸ್ವಂ. ಸೇ. ಸಹಪ್ರಾಂತ ಪ್ರಚಾರಕರು ಶ್ರೀನಿವಾಸ ಜೀ, ಇವರು ಮಾತನಾಡಿ, ಕರ್ಮಯೋಗ, ಜ್ಞಾನಯೋಗ ಹಾಗೂ ಭಕ್ತಿಯೋಗಗಳ ಕುರಿತು ತಿಳುವಳಿಕೆ ನೀಡಿದರಲ್ಲದೇ, ದೈನಂದಿ ಜೀವನದಲ್ಲಿ ಯೋಗವನ್ನು ಅಭ್ಯಾಸ ಮಾಡುವುದು ಅಗತ್ಯವಾಗಿದ್ದು ಪ್ರತಿ ನಿತ್ಯ ಯೋಗಾಭ್ಯಾಸ ನಡೆಸಲು ಕರೆ ನೀಡಿದರು.

ಆರೋಗ್ಯ ಭಾರತೀ ಪ್ರಮುಖರು ಹಾಗೂ ಯೋಗ ತಜ್ಞರು ವಸಂತ ವಾಳ್ಕೆ, ಮತ್ತು ಅವರ ಧರ್ಮಪತ್ನಿ ಶ್ರೀಮತಿ ಶಾಂತಲಾ ವಾಳ್ಕೆ, ಸಂಘದ ತಾಲೂಕಾ ಪ್ರಮುಖರು ಹಾಗೂ ಹಿರಿಯ ಯೋಗ ಸಾಧಕರಾದ ನಾಗೇಶ ಕಾಮತ ವಿದ್ಯಾರ್ಥಿಗಳಿಗೆ ಸರಳ ಯೋಗಾಸನಗಳನ್ನು ಶಿಸ್ತುಬದ್ಧವಾಗಿ, ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಉತ್ಸುಕತೆಯಿಂದ ಯೋಗಾಭ್ಯಾಸ ಮಾಡಿದರು. ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ಕು.ಅಶ್ವಿನಿ ಮತ್ತು ಇತರ ಎಲ್ಲಾ ಪ್ರಶಿಕ್ಷಣಾರ್ಥಿಗಳು ಯೋಗ ದಿನಾಚರಣೆಯ ಕಾರ್ಯಕಲಾಪಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಯೋಗಪಟುಗಳನ್ನು ಶಿಕ್ಷಕ ಅಶೋಕ ನಾಯ್ಕ, ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದು ಯೋಗದಿನಾಚರಣೆಯ ಯಶಸ್ಸಿಗೆ ಸಾಕ್ಷಿಯಾದರು. ಶಾಲಾ ಮುಖ್ಯಾಧ್ಯಾಪಕರಾದ ಜಯಂತ ನಾಯಕ ಅವರ ಸಹಕಾರ ಪಡೆದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಲೋಕೇಶ ಚಂದಾವರಕರ ಹಾಗೂ ಯಶ್ವಂತ ಮೇಸ್ತ ಇವರು ಜಂಟಿಯಾಗಿ ವಿಶ್ವ ಯೋಗದಿನವನ್ನು ಅತ್ಯಂತ ಶಿಸ್ತುಬದ್ಧವಾಗಿ ಸಂಘಟಿಸಿದರು. ಶಾಲಾ ಶಿಕ್ಷಕರಾದ ಅನಿರುದ್ಧ, ಕೆ. ಭಟ್ಸ್ ಇವರು ವಿದ್ಯಾರ್ಥಿಗಳಿಗೆ ಅಷ್ಟಾಂಗಯೋಗದ ಬಗ್ಗೆ ತಿಳಿ ಹೇಳಿದರು.ಯೋಗಾಭ್ಯಾಸದ ನಂತರ ವಿದ್ಯಾರ್ಥಿಗಳಲ್ಲಿ ಧನ್ಯತಾಭಾವ ಎದ್ದು ಕಾಣುತ್ತಿದ್ದುದು ವಿಶೇಷವಾಗಿತ್ತು.

error: