May 3, 2024

Bhavana Tv

Its Your Channel

ಹೊನ್ನಾವರ ನ್ಯಾಯಾಲಯ ಆವರಣದಲ್ಲಿ ನಡೆದ ಲೋಕ ಅದಾಲತ್

ಹೊನ್ನಾವರ: ಹೊನ್ನಾವರ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 848 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು ರೂ. 1,58,35,000/-(ಒಂದು ಕೋಟಿ ಐವತ್ತೇಂಟು ಲಕ್ಷ ಮುವತ್ತೆöÊದು ಸಾವಿರ) ಮೊತ್ತದ ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ಹಣವನ್ನು ವಿತರಿಸಲು ತೀರ್ಮಾನಿಸಲಾಯಿತು. ಹಾಗೂ ರೂ. 25,000/- (ಇಪ್ಪತೈದು ಸಾವಿರ) ಕ್ಕೂ ಮೇಲ್ಪಟ್ಟು ದಂಡವನ್ನು ವಸೂಲಿ ನಡೆಯಿತು.
ಹೊನ್ನಾವರ ಹಿರಿಯ ಸಿವಿಲ್ ಜಡ್ಜ ನ್ಯಾಯಾಲಯದಲ್ಲಿ 12 ಮೋಟಾರು ವಾಹನ ಅಪಘಾತ ವಿಮಾ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡು ರೂ. 1,58,35,000/- ಪರಿಹಾರ ನೀಡಲು ತಿರ್ಮಾನಿಸಲಾಯಿತು. 3 ಅಮಲ್ಜಾರಿ ಪ್ರಕರಣ, 1 ಸಿವಿಲ್ ಪ್ರಕರಣ ಇಟ್ಟು 16 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಜಿ ಹಾಗೂ ಸಂಧಾನಕಾರರಾಗಿ ನ್ಯಾಯವಾದಿ ವಿ.ಎಂ ಭಂಡಾರಿ ಉಪಸ್ಥಿತರಿದ್ದರು.
ಪ್ರಿನ್ಸಿಪಲ್ ಸಿವಿಲ್ ಜಡ್ಜ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ 667 ಕ್ರಿಮಿನಲ್, 8 ಸಿವಿಲ್ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 13 ಸಿವಿಲ್ ಪ್ರಕರಣಗಳು, 147 ಕ್ರಿಮಿನಲ್ ಪ್ರಕರಣಗಳು, ರಾಜಿ ಮೂಲಕ ಇತ್ಯರ್ಥಗೊಂಡವು. ನ್ಯಾಯಾಧೀಶ ಚಂದ್ರಶೇಖರ ಬಣಕಾರ್ ಹಾಗೂ ಸಂಧಾನಕಾರರಾಗಿ ಸುರೇಶ ಚಂದಾವರ ವಕೀಲರು ಉಪಸ್ಥಿತರಿದ್ದರು.

error: