May 19, 2024

Bhavana Tv

Its Your Channel

ಹೊನ್ನಾವರ ಲಯನ್ಸ ಕ್ಲಬ್ ಪದಗ್ರಹಣ ಸಮಾರಂಭ

ಹೊನ್ನಾವರ: ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಹೊನ್ನಾವರ ಲಯನ್ಸ ಕ್ಲಬ್ ಇದರ 2022-23ನೇ ಸಾಲಿನ ಅಧ್ಯಕ್ಷರಾಗಿ ಕೆ.ಸಿ.ವರ್ಗಿಸ್ ಹಾಗೂ ಕಾರ್ಯದರ್ಶಿಯಾಗಿ ರಾಜೇಶ ಸಾಳೇಹಿತ್ತಲ್ ರವರು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಇನಸ್ಟಾಲೇಶನ ಆಫೀಶರ ಆಗಿ ಆಗಮಿಸಿದ ಡಾ. ನೀಲಕಂಠ ಎಮ್ ಹೆಗಡೆಯವರು ಪ್ರಮಾಣ ವಚನ ಭೋದಿಸಿ ಲಯನ್ಸ್ ಸಂಸ್ಥೆಯ ಸೇವೆಗಳ ಬಗ್ಗೆ ಹಾಗೂ ಪದಾಧಿಕಾರಿಗಳ ಕರ್ತವ್ಯ ವಿವರಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಕೀರ್ತಿ ಜೆ. ನಾಯ್ಕರವರು ಮಾತನಾಡಿ ಲಯನ್ಸ್ ಸೇವೆಗಾಗಿ ಇರುವ ಸಂಸ್ಥೆ, ನಾವು ಸಮಾಜದಲ್ಲಿ ಕೊಡುವ ಸ್ಥಾನದಲ್ಲಿ ಇರಬೇಕು. ನಾವು ಸೇವೆಮಾಡಲು ಬೇರೆವರಿಗೆ ಕಾಯದೆ ನಿಸ್ವಾರ್ಥ ಸೇವೆ ಮಾಡಬೇಕು ಎನ್ನುತ್ತಾ. ಹೊನ್ನಾವರ ಲಯನ್ಸ್ ಸಂಸ್ಥೆ ಮಾದರಿಯಾಗಿ ಕೆಲಸ ಮಾಡುತ್ತಿದೆ ಎಂದರು. ನೂತನ ಅಧ್ಯಕ್ಷ ಕೆ.ಸಿ ವರ್ಗಿಸ್ ರವರು ಮಾತನಾಡಿ ಈ ಸಾಲಿನಲ್ಲಿ ಉತ್ತಮ ಸೇವೆ ಮಾಡಲು ಸಂಪೂರ್ಣ ಸಹಕಾರ ನೀಡಬೇಕೆಂದರು.
ನಿಕಟಪೂರ್ವ ಅಧ್ಯಕ್ಷ ವಿನೋದ ನಾಯ್ಕ ಮಾವಿನಹೊಳೆಯವರು ಮಾತನಾಡಿ ಲಯನ್ಸ್ ಸಂಸ್ಥೆಯ ಸೇವೆ ಹಾಗೂ ಉತ್ತಮ ಕಾರ್ಯಗಳಿಗೆ ಆಕರ್ಷಿತನಾಗಿ ಸದಸ್ಯನಾಗಿದ್ದು ಆರಂಭದಲ್ಲಿಯೇ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದೀರಿ. ನಿಮ್ಮೆಲ್ಲರ ಸಹಕಾರದಿಂದ ನೂರಕ್ಕೂ ಹೆಚ್ಚಿನ ಕಾರ್ಯಕ್ರಮ ಮಾಡಲು ಸಾಧ್ಯವಾಯಿತು ಎಂದರು.
ವೇದಿಕೆಯಲ್ಲಿ ನೂತನ ,ಕಾರ್ಯದರ್ಶಿ ರಾಜೇಶ ಸಾಳೇಹಿತ್ತಲ್, ಖಜಾಂಚಿ ರೋಶನ್ ಸೇಟ್, ಎಸ್ ಜೆ ಖೈರನ್, ಉದಯ ನಾಯ್ಕ, ಲಿಯೋ ಕ್ಲಬ್ ಅಧ್ಯಕ್ಷೆ ಧನ್ಯಾ ಭಟ್,ಕಾರ್ಯದರ್ಶಿ ಸಂದೇಶ ನಾಯ್ಕ, ಖಜಾಂಚಿ ಚೈತ್ರಾ ಭಟ್ಡ , ಮುರ್ಡೇಶ್ವರ ಕ್ಲಬ್‌ನ ನಾಗರಾಜ ಭಟ್, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಕಳೆದ ಸಾಲಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಡಾ ಸುರೇಶ ನಾಯ್ಕ,ಎಂ.ಜಿ. ನಾಯ್ಕ ಕಾರ್ಯಕ್ರಮ ನಿರ್ವಸಿದರು.
ವರದಿ: ವೆಂಕಟೇಶ್ ಮೇಸ್ತ ಹೊನ್ನಾವರ

error: