May 19, 2024

Bhavana Tv

Its Your Channel

ಜುಲೈ 17ರಂದು ಶೃಂಗೇರಿಯಲ್ಲಿ ಕೊಂಕಣಿ ಖಾರ್ವಿ ಸಮಾಜದ 22ನೇ ವರ್ಷದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ

ಹೊನ್ನಾವರ : ಕೊಂಕಣಿ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಆಶ್ರಯದಲ್ಲಿ ಜುಲೈ 17ರಂದು ರವಿವಾರ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಹಾಗೂ ಜಗದ್ಗರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಗಳ ಪವಿತ್ರ ಚಾತುರ್ಮಾಸ್ಯದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಲಿದೆ.


ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ ಬಂದಿದ್ದು, ಕಳೆದ 21 ವರ್ಷಗಳಿಂದ ಗುರುದರ್ಶನ ಸಮಿತಿಯ ಆಶ್ರಯದಲ್ಲಿ ಸಾಮೂಹಿಕ ಗುರುದರ್ಶನ ಮಾಡುತ್ತಾ ಬಂದಿದ್ದಾರೆ. ಉಭಯ ಶ್ರೀಗಳ ಅನುಗ್ರಹ, ಮಾರ್ಗದರ್ಶನ, ಪಾದಸ್ಪರ್ಶದಿಂದ ಇಂದಿನ ದಿನಗಳಲ್ಲಿ ನಮ್ಮ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದಾಗಿದ್ದು, ಅನೇಕ ದೇವಸ್ಥಾನಗಳು ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನೆಗೊಂಡಿವೆ.
ಆದ್ದರಿAದ ಜಗದ್ಗುರುಗಳ ಆದೇಶದಂತೆ ಧರ್ಮಾಧಿಕಾರಿ ವೇದಮೂರ್ತೀ ಲೋಕೇಶ ಅಡಿಗರವರ ಮಾರ್ಗದರ್ಶನ ಹಾಗೂ ನೇತ್ರತ್ವದದಲ್ಲಿ ಜುಲೈ 17ರವಿವಾರರಂದು ಬೆಳಿಗ್ಗೆ 10 ಗಂಟೆಗೆ ಶೃಂಗೇರಿ ಗುರು ಪೀಠದಲ್ಲಿ ಕೊಂಕಣಿಖಾರ್ವಿ ಸಮಾಜದವರಿಂದ ಜಗದ್ಗುರುಗಳ ಪವಿತ್ರ ಚಾತುರ್ಮಾಸ್ಯದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ನಡೆಯಲಿದೆ.
ಗುರುದರ್ಶನ ಸಮಿತಿ ಆಶ್ರಯದಲ್ಲಿ ಈ ವರ್ಷ ಯಶಸ್ವಿ 22ನೇ ವರ್ಷದ ಕಾರ್ಯಕ್ರಮ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆ ಮುಂಬೈ, ಗೋವಾ, ಬೆಂಗಳೂರು, ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ.
ಈ ಸಮಾರಂಭಕ್ಕೆ ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಅಧ್ಯಕ್ಷ ವಸಂತ ಖಾರ್ವಿ ಭಟ್ಕಳ, ಹಾಗೂ ಉಪಾಧ್ಯಕ್ಷ ಉಮೇಶ ಜಿ. ಮೇಸ್ತ, ಕಾರ್ಯದರ್ಶೀ ವೆಂಕಟೇಶ ಮೇಸ್ತ ಹೊನ್ನಾವರ ತಿಳಿಸಿದ್ದಾರೆ.

error: