May 19, 2024

Bhavana Tv

Its Your Channel

ಮಂಕಿಯಲ್ಲಿ ಮೀನುಗಾರರಿಂದ ಸಮುದ್ರ ಪೂಜೆ

ಹೊನ್ನಾವರ: ಶೃಂಗೇರಿ ಜಗದ್ಗುರುಗಳ ಅನುಗ್ರಹದಂತೆ ಪ್ರತಿ ವರ್ಷ ನಡೆಯುವ ಮಳೆಗಾಲದ ಆರಂಭದ ಮೀನುಗಾರಿಕೆಯ ಮಹೂರ್ತ ಹಾಗೂ ಸಮುದ್ರ ಪೂಜೆ ಕಾರ್ಯಕ್ರಮ ತಾಲ್ಲೂಕಿನ ಮಂಕಿ ಮಡಿಯ ಸಮುದ್ರ ದಂಡೆಯ ಮೇಲೆ ನಡೆಯಿತು. ಮಂಕಿ ಗ್ರಾಮದಲ್ಲಿರುವ ಸಾವಿರಾರು ಮೀನುಗಾರರ ಕುಟುಂಬಗಳು ಅನಾಧಿಕಾಲದಿಂದಲೂ ಶೃಂಗೇರಿ ಜಗದ್ಗುರುಗಳನ್ನು ಆರಾಧಿಸುತ್ತಾ ಬಂದಿವೆ. ಪ್ರತಿವರ್ಷವೂ ಮಳೆಗಾಲದ ಆರಂಭದ ಸಮಯದಲ್ಲಿ ಶೃಂಗೇರಿ ಜಗದ್ಗುರುಗಳ ಆಶೀವಾ9ದ ಪಡೆದು ಸಮುದ್ರ ಪೂಜೆ ಮಾಡಿ ಅವರು ನೀಡಿದ ಮಹೂರ್ತದಂದು ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಆರಂಭಿಸುತ್ತಾರೆ. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಮಂಕಿ ಇದರ ಆಶ್ರಯದಲ್ಲಿ ವೇದಮೂತಿ9 ಹೇಮಂತ್ ಭಟ್ಟರವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಆರಂಭದಲ್ಲಿ ದೇವಿಕಾನ ದುರ್ಗಾಪರಮೇಶ್ವರಿ ದೇವಸ್ಥಾನ,ಕೆಂಡಮಹಾಸತಿ ದೇವಸ್ಥಾನ, ಶ್ರೀ ಭದ್ರಾಂಭಿಕೇಶ್ವರ ದೇವಸ್ಥಾನ ಹಾಗೂ ಮಳಿಯಾಳಿ ಜಟಕೇಶ್ಚರ ದೇವಸ್ಥಾನದಲ್ಲಿ ಪೂಜೆಗಳು ನಡೆದವು. ನವಗ್ರಹ ಶಾಂತಿ, ಅಭಿಷೇಕ ಹಾಗೂ ಸಮುದ್ರಪೂಜೆ ನಡೆಯಿತು.
ಈ ಸಂದರ್ಭದಲ್ಲಿ ವೇದಮೂರ್ತಿ ಹೇಮಂತ್ ಭಟ್ಟರವರು ಸಮುದ್ರಪೂಜೆಯ ಮಹತ್ವವನ್ನು ತಿಳಿಸಿ ಧಾಮಿ9ಕ ಕಾಯ9ಕ್ರಮಗಳನ್ನು ನಡೆಸಿಕೊಟ್ಟರು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಮಂಕಿ ಇದರ ಅಧ್ಯಕ್ಷ ಅಣ್ಣಪ್ಪ ಎಸ್ ಖಾರ್ವಿಯವರು ಮಾತನಾಡಿ ನಾಡದೋಣಿ ಸಂಘವು ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ನಾಡದೋನಿ ಸಂಘದ ಪದಾಧಿಕಾರಿಗಳು,ಕೊಂಕಣಿ ಖರ‍್ವಿ ಸಮಾಜ,ಹಾಗೂ ಹರಿಕಾಂತ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ವರದಿ ವೆಂಕಟೇಶ ಮೇಸ್ತ ಹೊನ್ನಾವರ

error: