May 17, 2024

Bhavana Tv

Its Your Channel

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ 2022-23 ನೇ ಸಾಲಿನ ದಳ ನೋಂದಣಿ ಮತ್ತು ವಾರ್ಷಿಕ ಸಮಾವೇಶ ಕಾರ್ಯಕ್ರಮ

..ಹೊನ್ನಾವರ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕಾರವಾರ, ಸ್ಥಳಿಯ ಸಂಸ್ಥೆ ಹೊನ್ನಾವರದ ಆಶ್ರಯದಲ್ಲಿ 2022-23 ನೇ ಸಾಲಿನ ದಳ ನೋಂದಣಿ ಮತ್ತು ವಾರ್ಷಿಕ ಸಮಾವೇಶ ಕಾರ್ಯಕ್ರಮ ದಿನಾಂಕ: 08-08-2022 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಜಿ.ಜಿ. ಸಭಾಹಿತ್ ಜಿಲ್ಲಾ ಆಯುಕ್ತರು ಮಾತನಾಡಿ ಜಿಲ್ಲೆಯಲ್ಲಿಯ ಹೊನ್ನಾವರ ಸ್ಕೌಟ್ಸ್ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದು ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಇದು ಸಹಾಯಕ ಎಂದರು. ಮುಖ್ಯ ಅತಿಥಿಗಳಾದ ಜಿ ಎಸ್ ನಾಯ್ಕ ಬಿಇಓ ಮಾತನಾಡಿ ಇಲಾಖೆಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಗತಿಗೆ ಏನೇನು ಸೌಲಭ್ಯಗಳು ನಿಮಗೆ ಬೇಕಾಗಿದೆಯೋ ಅದನ್ನು ಒದಗಿಸಲು ನಾನು ಸಿದ್ಧ ಅಭಿವೃದ್ಧಿಗಾಗಿ ಎಲ್ಲಾ ಸಹಾಯ ಸಹಕಾರ ನಾನು ನೀಡುತ್ತೇನೆ ಎಂದರು.
ಮುಖ್ಯ ಅತಿಥಿಗಳಾದ ಎಮ್ ಜಿ. ನಾಯ್ಕ ಶಿಕ್ಷಕ ಸಂಘದ ಅಧ್ಯಕ್ಷರು ಮಾತನಾಡಿ ನಮ್ಮ ಸಂಘÀದಿAದ ಏನೆಲ್ಲ ಸಹಾಯ ಬೇಕೋ ಮಾಡಿಕೊಡುತ್ತೇನೆ. ಇದೊಂದು ಮಕ್ಕಳ ಸೃಜನಶೀಲ, ಮತ್ತು ಭೌತಿಕ ಚಟುವಟಿಕೆ ಆಗಿದ್ದು ಉಳಿಸಿ ಬೆಳೆಸ ಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಿ ಡಿ ಫರ್ನಾಂಡಿಸ್ ಆರ್ ಟಿ .ಹೆಬ್ಬಾರ,ASOC ಕರಿಸಿದ್ದಪ್ಪ ಭಾಗವಹಿಸಿದ್ದರು. ಅಧ್ಯಕ್ಷರಾದ ಶ್ರೀಕೃಷ್ಣ ಮೂರ್ತಿ ಭಟ್ಟ ಶಿವಾನಿ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಉತ್ತಮ ಕಾರ್ಯಕ್ರಮ. ಮಕ್ಕಳಲ್ಲಿ ಮತ್ತು ಶಿಕ್ಷಕರಲ್ಲಿ ಚೈತನ್ಯ ತುಂಬುವ ಕಾರ್ಯಕ್ರಮ ಇದನ್ನು ಬೆಳೆಸಿ ಇನ್ನು ಹೆಚ್ಚಿನ ಮಟ್ಟಕ್ಕೆ ಒಯ್ಯಬೇಕು ಎಂದರು. ಕಾರ್ಯಕ್ರಮದಲ್ಲಿ ಜಿ ಎಸ್ ನಾಯ್ಕ, ಎಮ್ ಜಿ ನಾಯ್ಕ , ಕರಿಸಿದ್ದಪ್ಪ, ಎಸ್. ಎಲ್ ಹೆಗಡೆ, ಶಾರದಾ ಹೆಗಡೆಯವರನ್ನು ಸನ್ಮಾನಿಸಲಾಯಿತು.
ಹೊನ್ನಾವರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಮ್ ಎನ್ ಗೌಡ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು.
ಎಸ್.ಎಲ್.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ರೋಹಿದಾಸ ನಾಯ್ಕ ವಂದಿಸಿದರು. ನಂತರ ಸ್ಕೌಟ್ಸ್ ಶಿಕ್ಷಕರುಗಳಿಗೆ ಸ್ಕೌಟ ಚಟುವಟಿಕೆ ಮಕ್ಕಳ ರಾಜ್ಯ ಪುರಸ್ಕಾರ, ರಾಷ್ಟç ಧ್ವಜ ಹಾರಿಸುವುದು ಮುಂತಾದ ಚಟುವಟಿಕೆಗಳ ಕುರಿತು 4-30 ರವರೆಗೆ ವಿವರಿಸಲಾಯಿತು.

error: