April 27, 2024

Bhavana Tv

Its Your Channel

ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ‘ಯುದ್ಧದ ಕಲ್ಪನೆ ಹಾಗೂ ವೈಜ್ಞಾನಿಕ ಸತ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ

ಹೊನ್ನಾವರ: ವಿಜ್ಞಾನದ ಆವಿಷ್ಕಾರಗಳು ಹಾಗೂ ಆಧುನಿಕ ತಂತ್ರಜ್ಞಾನ ರಚನಾತ್ಮಕ ಕಾರ್ಯಗಳಿಗೆ ಬಳಕೆಯಾಗಬೇಕು’ ಎಂದು ಹೊನ್ನಾವರ ಎಸ್.ಡಿ.ಎಂ. ಪದವಿ ಕಾಲೇಜಿನ ಭೌತಶಾಸ್ತç ವಿಭಾಗದ ಮುಖ್ಯಸ್ಥ ಡಾ.ಸುರೇಶ ಎಸ್.ಅಭಿಪ್ರಾಯಪಟ್ಟರು.
ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಯುದ್ಧದ ಕಲ್ಪನೆ ಹಾಗೂ ವೈಜ್ಞಾನಿಕ ಸತ್ಯ’ ವಿಷಯದ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಯುದ್ಧದ ಬಗೆಗಿನ ವರದಿ ಓದಲು ಹಾಗೂ ಕೇಳಲು ರೋಚಕವಾಗಿರುತ್ತದೆ.ಆದರೆ ಯುದ್ಧದ ಕಟು ವಾಸ್ತವ ಯುದ್ಧ ನಡೆದಾಗ ಅರಿವಿಗೆ ಬರುತ್ತದೆ.ಇಂದು ಯುದ್ಧ ಕೇವಲ ಯುದ್ಧಭೂಮಿಗೆ, ಬಿಲ್ಲು ಬಾಣ ಅಥವಾ ಮದ್ದು ಗುಂಡುಗಳಿಗೆ ಸೀಮಿತವಾಗಿಲ್ಲ.ಆಧುನಿಕ ತಂತ್ರಜ್ಞಾನ ಯುದ್ಧವನ್ನು ಭಯಾನಕವಾಗಿಸಿದೆ.ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವು ಜೀವಿಗಳ ನಾಶಕ್ಕೆ ಕಾರಣವಾಗುತ್ತದೆ.ಎರಡನೇ ಮಹಾಯುದ್ಧದಲ್ಲಿ ಹಿರೋಶಿಮಾ ಹಾಗೂ ನಾಗಾಸಾಕಿಯ ಮೇಲೆ ಹಾಕಲಾದ ಬಾಂಬ್‌ನಿAದ ಉಂಟಾದ ದುಷ್ಪರಿಣಾಮವನ್ನು ನಾವು ಇವತ್ತಿಗೂ ಕಾಣಬಹುದು.ಯುದ್ಧದ ಬಗೆಗಿನ ರಮ್ಯ ಕಲ್ಪನೆಯಿಂದ ಹೊರಬಂದು ವಾಸ್ತವಿಕ ಸಂಗತಿ ಅರಿತುಕೊಳ್ಳುವ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಶಾಂತಿಯನ್ನು ಪ್ರತಿಪಾದಿಸುವ ಅಗತ್ಯವಿದೆ’ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ‘ಬ್ಲೂಮ್’ ಅನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆಗೊಳಿಸಿದರು.
ಪ್ರಾಚಾರ್ಯರಾದ ಡಾ.ವಿಜಯಲಕ್ಷಿö್ಮ ಎಂ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂಗ್ಲಿಷ್ ಲಿಟರರಿ ಕ್ಲಬ್ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಬಿಎ ಅಂತಿಮ ತರಗತಿಯ ಇಂಗ್ಲಿಷ್ ಐಚ್ಛಿಕ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಯಿತು.
ನೇಹಾ ಭಟ್ಟ,ಗಾನಾ ಭಂಡಾರಿ,ಮೇಕ್ವಿನ್ ಜಾಯ್ ಪ್ರಾರ್ಥನಾ ಗೀತೆ ಹಾಡಿದರು.ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ.ಹೆಗಡೆ ಅತಿಥಿ ಪರಿಚಯ ಮಾಡಿದರು.ಇಂಗ್ಲಿಷ್ ಲಿಟರರಿ ಕ್ಲಬ್ ನ ಸಂಚಾಲಕಿ ಪ್ರೊ.ಕೆ.ಆರ್.ಶ್ರೀಲತಾ ಸ್ವಾಗತಿಸಿದರು.ಪ್ರೊ.ವೆಲೆನ್ಸಿ÷್ಲಯಾ ಡಿಸೋಜಾ ಹಾಗೂ ವರದಾ ಹೆಗಡೆ ನಿರೂಪಿಸಿದರು.ಕಾರ್ಯದರ್ಶಿ ಅನಿತಾ ನಾಯ್ಕ ವಂದಿಸಿದರು.

error: