May 17, 2024

Bhavana Tv

Its Your Channel

ರಾಯಲ್‌ಕೇರಿಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ೩೫ನೇ ವರ್ಷದ ಗಣೇಶೋತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮ

ಹೊನ್ನಾವರ: ಪಟ್ಟಣದ ರಾಯಲ್‌ಕೇರಿಯ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ೩೫ನೇ ವರ್ಷದ ಗಣೇಶೋತ್ಸವ ನಿಮಿತ್ತ ಪ್ರತಿದಿನ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ಗಣೇಶ ಚತುರ್ಥಿಯ ನಾಲ್ಕನೇ ದಿನವಾದ ಶನಿವಾರ ಸಾಮೂಹಿಕ ಸತ್ಯಗಣಪತಿ ಕಥೆ,ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಪ್ರತಿವರ್ಷ ವಿಭಿನ್ನ ರೀತಿಯಲ್ಲಿ,ಜನಮನಸೂರೆಗೊಳ್ಳುವ ರೀತಿಯಲ್ಲಿ ಗಣೇಶೋತ್ಸವ ಆಚರಿಸುವುದು ಇಲ್ಲಿಯ ವಿಶೇಷತೆಯಾಗಿದೆ. ಈ ಬಾರಿ ಥರ್ಮಕೋಲ್ ನಿಂದ ನಿರ್ಮಿತವಾದ ಅದ್ದೂರಿ ದೇವಾಲಯ ಮಾದರಿ ಸೆಟ್ ಅಳವಡಿಸಿದ್ದಾರೆ. ತದೇಕ ಚಿತ್ತದಿಂದ,ಅಭಯ ಹಸ್ತ ಪ್ರತೀಕನಾಗಿ ಕಾಣುವ ಗಣಪನ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸುತ್ತಿರುವುದು ವಿಶೇಷವಾಗಿದೆ. ಬಲಬದಿಯಲ್ಲಿ ತಿರುಪತಿ ವೆಂಕಟೇಶ್ವರ ಹಾಗೂ ಎಡಬದಿಯಲ್ಲಿ ಕೃಷ್ಣ-ರಾಧೆಯ ಮೂರ್ತಿ ನಿರ್ಮಿಸಿದ್ದಾರೆ. ಹೊರಭಾಗದಲ್ಲಿ ಶಿವ ಹಾಗೂ ಬಸವನ ಮೂರ್ತಿ ನಿರ್ಮಿಸಿದ್ದಾರೆ. ಇಲ್ಲಿನ ವಿಶೇಷತೆಗೆ ಮನಸೋತ ಭಕ್ತವೃಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಮಂಗಳಮೂರ್ತಿಯ ದರ್ಶನ ಪಡೆದಿದ್ದಾರೆ. ಕೆಲವರು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವ ದ್ರಶ್ಯ ಕಂಡುಬAತು.

ಈ ಸಮಿತಿಯ ಸದಸ್ಯರಲ್ಲಿ ಓರ್ವರಾದ ರವಿ ನಾಯ್ಕ ರಾಯಲಕೇರಿ ಮಾತನಾಡಿ ಪ್ರತಿಬಾರಿಯೂ ವಿಶೇಷ ಕಾರ್ಯಕ್ರಮದ ಮೂಲಕ ಗಣೇಶೊತ್ಸವ ಆಚರಿಸುತ್ತಿದ್ದು, ಈ ಬಾರಿ ೩೫ ವರ್ಷದ ಕಾರಣದಿಂದ ಏಳು ದಿನಗಳ ಕಾಲ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿದಿನವು ಧಾರ್ಮಿಕ ಹಾಗುಜ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಸಮಿತಿಯ ಸದಸ್ಯರು ಸಾರ್ವಜನಿಕರು ಪೊತ್ಸಾಗ ನೀಡುತ್ತಾ ಬಂದಿರುದರಿAದ ಮಾದರಿ ಗಣೇಶೊತ್ಸವ ಆಚರಿಸಲಾಗುತ್ತಿದೆ ಎಂದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: