May 17, 2024

Bhavana Tv

Its Your Channel

ಅಳ್ಳಂಕಿ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ.

ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯಂದು , ಗಡಿ ಭದ್ರತಾ ಪಡೆಯಲ್ಲಿ ದೇಶ ಸೇವೆ ಗೈದು ಬಂದ ವಿನಾಯಕ ನಾಯ್ಕ ಗೇರುಸೊಪ್ಪ ಇವರನ್ನು ಅಭಿಮಾನದಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ವಿನಾಯಕ ನಾಯ್ಕ ಇವರು ತಾವು ಪಾಕಿಸ್ತಾನ ಹಾಗೂ ಬಾಂಗ್ಲಾ ಗಡಿಯಲ್ಲಿ ಸೇವೆಯಲ್ಲಿದ್ದಾಗ ಎದುರಿಸಿದ ರೋಚಕ ಕ್ಷಣಗಳನ್ನು ನೆನಪಿಸಿಕೊಂಡರಲ್ಲದೇ ಭವಿಷ್ಯದ ಭಾರತವನ್ನು ಸಶಕ್ತವಾಗಿ ಕಟ್ಟುವಲ್ಲಿ ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕಾದ ಹಾಗೂ ಶ್ರಮಜೀವಿಗಳಾಗಬೇಕಾದ ಅಗತ್ಯ ವನ್ನು ತುಂಬಾ ಪರಿಣಾಮಕಾರಿಯಾಗಿ ವಿವರಿಸಿದರು.
ಡಾ.ರಾಧಾಕೃಷ್ಣನ್ ರ ಕುರಿತು ಪದ್ಮಾವತಿ ನಾಯ್ಕ ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ ಹೆರಂಗಡಿ ಗ್ರಾ.ಪಂ. ಅಧ್ಯಕ್ಷ ಪ್ರಮೋದ ನಾಯ್ಕ ಅವರು ಮುಂದಿನ ದಿನಗಳಲ್ಲಿ ವಿನಾಯಕರ ಜ್ಞಾನ – ಅನುಭವದ ಸೇವೆ ಅಳ್ಳಂಕಿ ಕಾಲೇಜಿಗೂ ಲಭಿಸುವಂತಾಗಲಿ ಎಂದು ಆಶಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಎಸ್ . ಹೆಗಡೆ , ” ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ವಿನಾಯಕ ಅವರು ಎಷ್ಟು ಶ್ರಮಜೀವಿಯಾಗಿದ್ದರೆಂಬುದನ್ನು ನೆನಪಿಸಿಕೊಂಡು , ಇಂಥ ವಿದ್ಯಾರ್ಥಿಗಳೇ ನಮ್ಮ ಕಾಲೇಜಿನ ನಿಜವಾದ ಸ್ಥಿರಾಸ್ತಿ ” ಎಂದು ನುಡಿದರು.

ಮಾನಸಾ ನಾಯ್ಕ ಸ್ವಾಗತಿಸಿದರು. ಶೇಖರ ನಾಯ್ಕ ವಂದಿಸಿದರು. ಶ್ರೀನಿಧಿ ಕಾರ್ಯಕ್ರಮ ವನ್ನು ನಿರೂಪಿಸಿದರು.

error: