May 17, 2024

Bhavana Tv

Its Your Channel

ಯಶವಂತ ಮೇಸ್ತರಿಗೆ ತಾಲೂಕ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ

ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲ್ ಕನ್ನಡ ಮಾಧ್ಯಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಯಶವಂತ ಮೇಸ್ತ ರಿಗೆ 2022 ಸಾಲಿನ ತಾಲೂಕ ಮಟ್ಟದ ಉತ್ತಮ ಸ್ಕೌಟ್ ಮಾಸ್ಟರ್ ಪ್ರಶಸ್ತಿ ಲಭಿಸುತ್ತದೆ.

ಇವರು ಕಳೆದ 26 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಶಾಲೆಯ, ಶಿಕ್ಷಣ ಇಲಾಖೆಯ ಹಲವಾರು ಕ್ರೀಡಾ ಚಟುವಟಿಕೆಯಲ್ಲಿ ನಿರತರಾಗಿರುವ ಜೊತೆಗೆ ಕಳೆದ 20 ವರ್ಷಗಳಿಂದ ಶಾಲೆಯಲ್ಲಿ ಸ್ಕೌಟ್ ವಿಭಾಗವನ್ನು ಸಂಘಟಿಸಿ 15 ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪುರಸ್ಕಾರವನ್ನು ಹಾಗೂ ನಲವತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರಕ್ಕೂ ಮಾರ್ಗದರ್ಶನವನ್ನು ಮಾಡಿ ವಿದ್ಯಾರ್ಥಿಗಳ ಸಾಧನೆಗೆಪ್ರೇರಕರಾಗಿರುತ್ತಾರೆ.

ಸರ್ಕಾರದ ಪ್ರಮುಖಯೋಜನೆಗಳಾದ ಸ್ವಚ್ಛಭಾರತ ಅಭಿಯಾನ,ಅಂತರಾಷ್ಟ್ರೀಯ ಯೋಗ ದಿನಾಚರಣೆ,ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ. ಕೋವಿಡ್ ಅವಧಿಯಲ್ಲಿ ತಾಲೂಕ ಮಟ್ಟದ ಉತ್ತಮ ಕೋವಿಡ್ ವಾರಿರ‍್ಸ್ ಗುರುತಿಸಲ್ಪಟ್ಟಿದ್ದಾರೆ
ಸ್ಕೌಟ್ ಆ್ಯಂಡ್ ಗೈಡ್ಸ್ ನವರು ಆಯೋಜಿಸುವ ಎಲ್ಲಾ ಕ್ಯಾಂಪುಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿರುತ್ತಾರೆ. ಹೊನ್ನಾವರ ತಾಲೂಕಿನ ಉತ್ತಮ ಕಲಾಕಾರರಾಗಿಗುರುತಿಸಿಕೊಂಡಿರುತ್ತಾರೆ. ಉತ್ತಮ ಶಿಕ್ಷಕಆಯ್ಕೆ ಮಾಡಿರುವುದಕ್ಕಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಘುನಾಥ ಪೈ ಹಾಗೂ ಸದಸ್ಯರು ಮುಖ್ಯಾಧ್ಯಾಪಕರು ಶಿಕ್ಷಕರು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ

error: