May 4, 2024

Bhavana Tv

Its Your Channel

ತಾಲೂಕಾ ಮಟ್ಟದ ಗೀತ ಗಾಯನ ಸ್ಪರ್ಧೆ

ಹೊನ್ನಾವರ: ಭಾರತ್ ಸ್ಕೌಟ್&ಗೈಡ್ಸ್ ಕರ್ನಾಟಕ. ಜಿಲ್ಲಾ ಸಂಸ್ಥೆ ಕಾರವಾರ ಹೊನ್ನಾವರ ಸ್ಥಳೀಯ ಸಂಸ್ಥೆಯ ಆಶ್ರಯದಲ್ಲಿ ‘ತಾಲ್ಲೂಕು ಮಟ್ಟದ ಗೀತಗಾಯನ’ ಸ್ಪರ್ಧೆ ಸ್ಥಳೀಯ ಎಂ .ಪಿ .ಇ ಸೊಸೈಟಿಯ ಸಿ.ಬಿ.ಎಸ್.ಇ ಸ್ಕೂಲ್ ಹೊನ್ನಾವರದಲ್ಲಿ ನಡೆಯಿತು .

ಹೊನ್ನಾವರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಜಿ.ಎಸ್.ನಾಯ್ಕರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಸ್ಕೌಟ್&ಗೈಡ್ಸ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳು ಸೇರಿ , ದೇಶದ ಸತ್ಪ್ರಜೆಗಳಾಗಬೇಕು . ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕರೆಯಿತ್ತರು.

ಅಧ್ಯಕ್ಷತೆ ವಹಿಸಿದ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿ ಯವರು ಮಾತನಾಡಿ ಸ್ಕೌಟ್&ಗೈಡ್ಸ್ ನ ಧ್ಯೇಯೋದ್ದೇಶಗಳನ್ನು ಎಲ್ಲಾ ಶಿಕ್ಷಕರು ಮೊದಲು ಅಳವಡಿಸಿಕೊಂಡು, ಮಕ್ಕಳಲ್ಲಿ ಅವುಗಳನ್ನು ತುಂಬಬೇಕುಎAದರು.

ಸ್ಕೌಟ್&ಗೈಡ್ಸ್ ನ ಜಿಲ್ಲಾ ಕಾರ್ಯದರ್ಶಿಯವರಾದ ಬಿ. ಡಿ. ಫರ್ನಾಂಡಿಸ್ ರವರು ಸ್ಕೌಟ್&ಗೈಡ್ಸ್ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎಂ.ಎನ್ .ಗೌಡ ಎಲ್ಲರನ್ನು ವಂದಿಸಿದರು.
ಕಬ್ ವಿಭಾಗದಲ್ಲಿ :-ಸೆಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಮನ ಪ್ರಥಮ , ಮಾರ್ತೋಮಾ ಸಿ.ಬಿ.ಎಸ್.ಇ ಸ್ಕೂಲ್ ನ ರೋಹನ್ ದ್ವಿತೀಯ, ಮಾರ್ತೋಮಾ ಇಂಗ್ಲಿಷ್ ಮೀಡಿಯಂನ ರೋಹಿತ ತೃತೀಯ.
ಬುಲ್ ಬುಲ್ ವಿಭಾಗದಲ್ಲಿ :- ಇಂಗ್ಲೀಷ್ ಮೀಡಿಯಂನ ಪಿಡಲ್ ಪ್ರಥಮ , ಮಾ .ಹಿ .ಪ್ರಾ ಶಾಲೆ ಮಾವಿನಕುರ್ವಾದ ಚೇತನಾ ದ್ವಿತೀಯ , ಮಾರ್ಥೋಮಾ ಇಂಗ್ಲೀಷ್ ಮೀಡಿಯಂನ ಫೆಲಿಸಿಯಾ ತೃತೀಯ .
ಸ್ಕೌಟ್ ವಿಭಾಗದಲ್ಲಿ :- ಎಮ್‌ಪಿಇ ಸೊಸೈಟಿ ಸೆಂಟ್ರಲ್ ಸ್ಕೂಲ್ ತಂಡ ಪ್ರಥಮ , ಮಾರ್ಥೋಮಾ ಸಿ.ಬಿ.ಎಸ್.ಇ ಸ್ಕೂಲ್ ತಂಡ ದ್ವಿತೀಯ , ಮಾರ್ಥೋಮಾ ಇಂಗ್ಲಿಷ್ ಮೀಡಿಯಂನ ತಂಡ ತೃತೀಯ .

ಗೈಡ್ಸ್ ವಿಭಾಗದಲ್ಲಿ :- ಮಾರ್ಥೋಮಾ ಇಂಗ್ಲಿಷ್ ಮೀಡಿಯಂ ತಂಡ ಪ್ರಥಮ , ಮಾರ್ಥೋಮಾ ಸೆಂಟ್ರಲ್ ಸ್ಕೂಲ್ ತಂಡ ದ್ವಿತೀಯ , ಎಚ್ ಪಿ ಎಸ್ ಕೆಳಗಿನೂರು ಸ್ಕೂಲ್ ತಂಡ ತೃತೀಯ .

ವೇದಿಕೆಯಲ್ಲಿ ಸಿ.ಬಿ.ಎಸ್.ಇ ಸ್ಕೂಲ್ ನ ಪ್ರಾಂಶುಪಾಲರಾದ ಕಾಂತಿ ಭಟ್ಟ, ಎ ಎಸ್ ಓ ಸಿ ಕರಿಸಿದ್ದಪ್ಪ, ಜಿಲ್ಲಾ ಸಂಸ್ಥೆ ಖಜಾಂಚಿ .ಆರ್. ಟಿ ಹೆಬ್ಬಾರ್ , ಸ್ಕೌಟ್ ಶಿಕ್ಷಕ ಸುಜಯ್ ಭಟ್ಟ ಉಪಸ್ಥಿತರಿದ್ದರು ಕಾಂತಿ ಭಟ್ ರವರು ಎಲ್ಲರನ್ನು ಸ್ವಾಗತಿಸಿದರು. ಗೈಡ್ ಶಿಕ್ಷಕಿ ಶ್ರೀಮತಿ ವನಿತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು

error: