May 4, 2024

Bhavana Tv

Its Your Channel

ಹೊನ್ನಾವರಅರ್ಬನ್ ಬ್ಯಾಂಕ್ : 103 ನೇ ವಾರ್ಷಿಕ ಮಹಾಸಭೆ

ಹೊನ್ನಾವರ ನಗರ ಸಹಕಾರಿ ಬ್ಯಾಂಕಿನ 103ನೇ ವಾರ್ಷಿಕ ಸರ್ವಸಾಧಾರಣ ಸಭೆಯು ನ್ಯೂಇಂಗ್ಲೀಷ ಸ್ಕೂಲ್, ಹೊನ್ನಾವರ ಆವಾರದಲ್ಲಿ ಜರುಗಿತು. ಬ್ಯಾಂಕಿನ ಅಧ್ಯಕ್ಷರಾದ ರಾಘವ ವಿಷ್ಣು ಬಾಳೇರಿಯವರು ಸಭೆಯಅಧ್ಯಕ್ಷತೆಯನ್ನು ವಹಿಸಿದ್ದರು.

1919ರಿಂದ ಬ್ಯಾಂಕಿAಗ್‌ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಪ್ರತಿಷ್ಠಿತ ದಿ ಹೊನ್ನಾವರಅರ್ಬನ್‌ಕೋ-ಒಪರೇಟಿವ್ ಬ್ಯಾಂಕ್ ಲಿ., ಹೊನ್ನಾವರ 2021-22 ನೇ ಸಾಲಿನಲ್ಲಿರೂ. 2ಕೋಟಿ29 ಲಕ್ಷ ನಿರ್ವಹಣಾ ಲಾಭ ಗಳಿಸಿದ್ದು, ಸರಕಾರಕ್ಕೆಆದಾಯತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ 2021-22 ನೇ ಸಾಲಿನಲಿ ರೂ. 1 ಕೋಟಿ 52 ಲಕ್ಷ ನಿಕ್ಕಿ ಲಾಭ ಗಳಿಸಿದೆ ಎಂದು ಬ್ಯಾಂಕಿನಅಧ್ಯಕ್ಷ ಶ್ರೀ ರಾಘವ ವಿಷ್ಣು ಬಾಳೇರಿಯವರು ವಾರ್ಷಿಕ ಸರ್ವಸದಸ್ಯರ ಸಾಧಾರಣ ಸಭೆಯಲ್ಲಿ ತಿಳಿಸಿದರು.

ಬ್ಯಾಂಕಿನಠೇವು ಸಂಗ್ರಹಣೆ ರೂ.209.50 ಕೋಟಿತಲುಪಿದ್ದು, ಸಾಲ-ಮುಂಗಡಗಳು ರೂ.131.51 ಕೋಟಿಗಳಿಗೆ ತಲುಪಿವೆ. ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು ರೂ.22.48 ಕೋಟಿಗಳಾಗಿದ್ದು, ಒಟ್ಟೂದುಡಿಯುವ ಭಂಡವಾಳ ರೂ.238.02 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟೂ ರೂ.89.18 ಕೋಟಿ ಹಣವನ್ನು ಬ್ಯಾಂಕುಕೇAದ್ರ ಸರ್ಕಾರದ ಸಾಲಪತ್ರಗಳಲ್ಲಿ, ಓoಟಿ-Sಐಖಬೋಂಡ್‌ಗಳಲ್ಲಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿರುವದು ಬ್ಯಾಂಕಿನಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.341.01 ಕೋಟಿಒಟ್ಟೂ ವ್ಯವಹಾರವನ್ನು ನಡೆಸಿದೆ. ಬ್ಯಾಂಕಿನಅಖAಖಭಾರತೀಯರಿಜರ್ವ ಬ್ಯಾಂಕ್ ಸೂಚಿಸಿರುವ 9% ಕ್ಕಿಂತ ಸಾಕಷ್ಟು ಹೆಚ್ಚು ಅಂದರೆ 12.44 ಇದ್ದು, ಇದು ಬ್ಯಾಂಕಿನಆರ್ಥಿಕ ಸುಭದ್ರತೆಯ ಸಂಕೇತವಾಗಿದೆ. ಒಟ್ಟೂ 24907 ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ.7.16 ಕೆÆÃಟಿಗಳಿಗÉ ಶÉÃರು ಭಂಡವಾಳ ವÀÀÈದ್ಧಿಸಿಕೊಂಡಿದೆ. ಬ್ಯಾಂಕು ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿ ಮುಂದುವರೆದಿದೆ. ವರದಿ ವರ್ಷದಲ್ಲಿ ಕೋವಿಡ್-19ರ ನಿಮಿತ್ತಗ್ರಾಹಕರ ವ್ಯವಹಾರಗಳು ಸಾಕಷ್ಟು ವ್ಯತ್ಯಯವಾದವು. ಆದಾಗ್ಯೂ ಬೇಂಕಿನ ಸಾಲ ವಸೂಲಾತಿ ಪ್ರಮಾಣ 97.11% ಇರುತ್ತದೆಎಂದು ತಿಳಿಸಲು ಹರ್ಷವೆನಿಸುತ್ತದೆಎಂತಅವರು ತಿಳಿಸಿದ್ದಾರೆ. ಬ್ಯಾಂಕು ಪ್ರಸಕ್ತ ಸಾಲಿನ ಬಗ್ಗೆ ಶೇರು ಸದಸ್ಯರಿಗೆ 8 % ಡಿವಿಡೆಂಡ್ ಘೋಷಿಸಿದೆ. ಈ ಬಗ್ಗೆಯೇ ಬ್ಯಾಂಕುರೂ. 56.10 ಲಕ್ಷ ವ್ಯಯಿಸಲಿದೆ.

ಬ್ಯಾಂಕು ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿಗ್ರಾಂ ಬಂಗಾರಕ್ಕೆಗರಿಷ್ಠ ರೂ. 3,300/- ಬಂಗಾರದಾಗಿನೆ ಸಾಲವನ್ನು ಶೇ. 7.95 ರಿಂದ ಶೇ. 11 ರವರೆಗಿನ ಬಡ್ಡಿದರಗಳಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ವಿಶೇಷ ಸಾಲ ಯೋಜನೆಗಳಾದ ಕಾರು ಸಾಲ 7.15% ಹಾಗೂ ವ್ಯವಹಾರ ಉದ್ದಿಮೆಗಳಿಗೆ 9.25% ರ ಬಡ್ಡಿದರಗಳಲ್ಲಿ ಸಾಲವನ್ನು ನೀಡಲಾಗುತ್ತಿವೆ.

ಬ್ಯಾಂಕುಕೋರ್ ಬ್ಯಾಂಕಿAಗ್‌ತAತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕಿನಗ್ರಾಹಕರಿಗೆತAತ್ರಜ್ಞಾನ ಪೂರಿತಅತ್ಯಾಧುನಿಕ ಬ್ಯಾಂಕಿAಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್, ಸಿ.ಟಿ.ಎಸ್.ಕ್ಲಿಯರಿಂಗ್, ಎಸ್.ಎಂ.ಎಸ್. ಅಲರ್ಟ್ ಸರ್ವೀಸ್, ರುಪೇಕಾರ್ಡ್, ಇ-ಸ್ಟಾಂಪಿAಗ್ ಮುಂತಾದ ನವೀನ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಪ್ರಚುರಪಡಿಸಿದೆ. ಬ್ಯಾಂಕು ಸ್ವಂತಎ.ಟಿ.ಎಮ್. ಹೊಂದಿದೆ. ಹಾಗೂ ಬ್ಯಾಂಕುಡಿಜಿಟಲ್ ಬ್ಯಾಂಕಿAಗ್ ಹಾಗೂ ಇ-ಪೇಮೆಂಟ್‌ಗಳಿಗೆ ಹೆಚ್ಚಿನಒತ್ತು ನೀಡುತ್ತಿದೆ. ಮೊಬೈಲ್ ಬ್ಯಾಂಕಿAಗ್ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿಇದೆ.

ಬ್ಯಾಂಕು ಸಮಾಜಮುಖಿಯಾಗಿತನ್ನಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದಜಿಲ್ಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪರಿಪಾಠ ಹಾಕಿಕೊಂಡಿದೆ. ವಿಕಲಚೇತನ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿದೆ. ಬ್ಯಾಂಕುತನ್ನ ಸಂಸ್ಥಾಪಕರಾದ ದಿ. ಎಮ್. ಎ. ಕಿಣಿ ಹಾಗೂ ದಿ. ಎಲ್. ಕೆ. ಶ್ಯಾನಭಾಗ ಶ್ರೋಫ್‌ರವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಸಹಕಾರಿ ವಲಯದತರಬೇತಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಬ್ಯಾಂಕು ಅಗತ್ಯವುಳ್ಳವರಿಗೆ ಸಹಾಯ ಮಾಡಿದೆ. ದೇಶದ ಸ್ವಾತಂತ್ರö್ಯದಅಮೃತ ಮಹೋತ್ಸವದ ಪ್ರಯುಕ್ತ ಬ್ಯಾಂಕು ನ್ಯೂಇಂಗ್ಲೀಷ ಸ್ಕೂಲ್, ಹೊನ್ನಾವರದಆವಾರದಲ್ಲಿ ವನಮಹೋತ್ಸವಕಾರ್ಯಕ್ರಮ ಹಮ್ಮಿಕೊಂಡಿತ್ತು ಎಂದು ಬ್ಯಾಂಕಿನ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: