April 29, 2024

Bhavana Tv

Its Your Channel

ಸಾಧಕ ಶಿಕ್ಷಕರಿಗೆ ಎಂ.ಪಿ.ಇ.ಸೊಸೈಟಿ ವತಿಯಿಂದ ಸನ್ಮಾನ

ಹೊನ್ನಾವರ: ಶೈಕ್ಷಣಿಕ- ಸಾಂಸ್ಕೃತಿಕ -ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕರಿಗೆ ,ವಿಶೇಷ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವು, ಹೊನ್ನಾವರದ ಎಸ್. ಡಿ .ಎಂ .ಪದವಿ ಮಹಾವಿದ್ಯಾಲಯದ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆಯಿತು .

ಹೊನ್ನಾವರದ ದಿ ಮಲ್ನಾಡ್ ಪ್ರೋಗ್ರೆಸಿವ್ ಎಜುಕೇಶನ್ ಸೊಸೈಟಿ ಯ ವತಿಯಿಂದ, ಒPಇS ಸಮೂಹ ವಿದ್ಯಾಸಂಸ್ಥೆಗಳಾದ, ಕೇಂದ್ರೀಯ ವಿದ್ಯಾಲಯ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾ ತ ಕೋತ್ತರ ಅಧ್ಯಯನ ಕೇಂದ್ರ ಹಾಗೂ ಸ್ನಾತಕ ಸಂಶೋಧನಾ ಕೇಂದ್ರದಲ್ಲಿ ನಡೆಯಿತು .
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಮಟಾದ ಬಾಳಿಗಾ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ. ಮಹೇಶ್ ಅಡಕೋಳಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ “ಶಿಕ್ಷಕ ವೃತ್ತಿ ಬಹುದೊಡ್ಡದು ಹಾಗೂ ಪವಿತ್ರವಾದದ್ದು .ಶಿಕ್ಷಕರಾದವರು ವಿಷಯ ಪ್ರೌಢಿಮೆ, ನಿಷ್ಪಕ್ಷಪಾತತೆ ,ಸಮಯ ಪ್ರಜ್ಞೆ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಸಂವಹನ ಕೌಶಲ್ಯ, ಶಿಷ್ಯ ವಾತ್ಸಲ್ಯ ಮುಂತಾದ ಗುಣಗಳನ್ನು ಹೊಂದಿರಬೇಕು. ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೀತಿಸದಿದ್ದರೆ ವಿದ್ಯಾರ್ಥಿಗಳು ಅವರ ವಿಷಯವನ್ನು ಪ್ರೀತಿಸುವದಿಲ್ಲ. ಶಿಕ್ಷಕರು ಜ್ಞಾನ ಮತ್ತು ಕೌಶಲ್ಯಗಳಿಂದ ತಮ್ಮ ಸಾಂಬಾರ ಬಟ್ಟಲನ್ನು ತುಂಬಿಕೊಳ್ಳಬೇಕು. ಸಿಕ್ಕಿರುವ ವೇತನಕ್ಕೆ ಖುಷಿಪಡಬೇಕು. ಇಂದು ವಿದ್ಯಾರ್ಥಿಗಳಲ್ಲಿ ಐ ಕ್ಯೂ ಇದೆ ಆದರೆ ಇಕಿದ ಕೊರತೆ ಇದೆ. ಇಂದು ಸಮಾಜದಲ್ಲಿ ಡಾಕ್ಟರ್, ಇಂಜಿನಿಯರ್, ಲಾಯರ್, ವಿವಿಧ ಹುದ್ದೆಯ ಅಧಿಕಾರಿಗಳು ಸಿಗುತ್ತಾರೆ. ಆದರೆ ಮಾನವೀಯತೆ ಉಳ್ಳ ಮನುಷ್ಯರು ವಿರಳ ರಾಗಿದ್ದಾರೆ. ತಮಗಿಂತ ಕೆಳಸ್ತರದಲ್ಲಿ ಇರುವವರನ್ನು ನೋಡಿ ನಮ್ಮ ಸ್ಥಿತಿಯ ಅವಲೋಕನ ಮಾಡಬೇಕು. ಯಾವತ್ತುBetter than before ಎನ್ನುವ ಧ್ಯೇಯ ವಾಕ್ಯವನ್ನು ಎಲ್ಲರೂ ಪರಿಪಾಲಿಸಬೇಕಾಗಿದೆ” ಎಂದರು.

ಈ ಸಂದರ್ಭದಲ್ಲಿ ಒPಇ ಸೊಸೈಟಿಯ ಸಮೂಹ ವಿದ್ಯಾಸಂಸ್ಥೆಗಳಾದ ಕೇಂದ್ರೀಯ ವಿದ್ಯಾಲಯ, ಪದವಿ ಪೂರ್ವ ಕಾಲೇಜು ,ಪದವಿ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಸ್ನಾತಕ ಸಂಶೋಧನಾ ಕೇಂದ್ರದ ಶಿಕ್ಷಕರ ,ಶೈಕ್ಷಣಿಕ- ಸಂಸ್ಕೃತಿಕ -ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳ ವಿಶೇಷ ಸಾಧನೆ ಗುರುತಿಸಿ ,ವಿಶೇಷ ಪುರಸ್ಕಾರ ದೊಂದಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಎಸ್. ಡಿ .ಎಂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ ನಾಯ್ಕ ರವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಂಪಿಈ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿಯವರು ಮಾತನಾಡಿ” ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಂಬAಧ ,ತಾಯಿ ಮಕ್ಕಳಿದ್ದಂತೆ .ಅತ್ತೆ ತಾಯಿಯಾದಾಗ ,ಮಾವ ತಂದೆಯಾದಾಗ, ಸೊಸೆ ಮಗಳಾದಾಗ, ಅಳಿಯ ಮಗನಾದಾಗ ಸಂಸಾರದ ತೇರು ಸರಿಯಾದ ಪಥದಲ್ಲಿ ಮುಂದುವರೆಯುವAತೆ ,ಶಿಕ್ಷಣ ಸಂಸ್ಥೆಯು ಕೂಡ ಪರಸ್ಪರ ಸಹಕಾರ ಸಂಬAಧ ವಾತ್ಸಲ್ಯ ದಿಂದ ಮುಂದುವರೆಯುತ್ತದೆ. ಪ್ರತಿಯೊಬ್ಬ ಶಿಕ್ಷಕರು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ದುಡಿಯಬೇಕು. ಸಂಸ್ಥೆ ಬೆಳೆಸುವಲ್ಲಿ ತಮ್ಮ ಗುರುತರ ಕಾರ್ಯನಿರ್ವಹಿಸಬೇಕು” ಎಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ .ಎಚ್. ಭಟ್ ,ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರಾದ ಕಾಂತಿ ಭಟ್, ಡಾ. ಎಂ.ಪಿ .ಕರ್ಕಿ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಅಂಡ್ ರಿಸರ್ಚ್ ಸೆಂಟರ್ ನ ನಿರ್ದೇಶಕರಾದ ಡಾ. ಶಿವರಾಂ ಎಸ್ ಶಾಸ್ತ್ರಿ ಮತ್ತು ಆಡಳಿತ ಮಂಡಳಿಯ ಸದಸ್ಯರು, ಮತ್ತು ಉಪನ್ಯಾಸಕರು ,ಶಿಕ್ಷಕರು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವು ಕುಮಾರಿ ನಿಹಾರಿಕಾ ಭಟ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಎAಪಿಈ ಸೊಸೈಟಿಯ ಕಾರ್ಯದರ್ಶಿಗಳಾದ ಎಸ್.ಎಂ. ಭಟ್ ರವರು ಸ್ವಾಗತಿಸಿದರು. ಕನ್ನಡ ವಿಭಾಗದ ಎಂ. ಎನ್. ಅಡಿಗುಂಡಿ, ವಿದ್ಯಾಧರ್ ಕಡತೋಕ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಜಿ.ಪಿ. ಹೆಗಡೆ ಕೊನೆಯಲ್ಲಿ ವಂದಿಸಿದರು.

error: