April 29, 2024

Bhavana Tv

Its Your Channel

ಹೊನ್ನಾವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 55 ನೇ ವಾರ್ಷಿಕ ಸರ್ವಸಾಧಾರಣಾ ಸಭೆ

ಹೊನ್ನಾವರ:ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿ. ಹೊನ್ನಾವರ ಉ.ಕ. ಇದರ 55 ನೇ ವಾರ್ಷಿಕ ಸರ್ವಸಾಧಾರಣಾ ಸಭೆ ಭಾನುವಾರ ಹೊನ್ನಾವರ ಮೂಡಗಣಪತಿ ಸಭಾ ಭವನದಲ್ಲಿ ಜರುಗಿತು

ಬ್ಯಾಂಕಿನ ಅಧ್ಯಕ್ಷರಾದ ವಿ. ಎನ್. ಭಟ್ಟ ಇವರ ಅಧಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬ್ಯಾಂಕಿನ 2021-22ನೇ ಸಾಲಿನ ವಾರ್ಷಿಕ ವರದಿ, ಮತ್ತು ಅಢಾವೆ ಹಾಗೂ 2022-23ನೇ ಸಾಲಿನ ಅಂದಾಜು ಪತ್ರಿಕೆಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು. 2021-22ನೇ ಸಾಲಿನಲ್ಲಿ ಬ್ಯಾಂಕು ನಿವ್ವಳ ರೂ 155.83 ಲಕ್ಷ ಲಾಭ ಗಳಿಸಿದ್ದು, ಲಾಭ ವಿಭಾಗಣೆ ಮಾಡಿ ಸದಸ್ಯರ ಶೇರಿನ ಮೇಲೆ ಶೇ 17.00 ರಂತೆ ಡಿವಿಡೆಂಡ ನೀಡುವುದು ಮತ್ತು ಸದಸ್ಯರ ಕಲ್ಯಾಣ ನಿಧಿ ಹಾಗೂ ಧರ್ಮದತ್ತು ನಿಧಿಗಳ ಮೂಲಕ ಸದಸ್ಯರಿಗೆ ವೈಧ್ಯಕೀಯ ನೆರವು ನೀಡುವುದು ಮುಂತಾದ ಯೋಜನೆಗಳಿಗೆ ಮಂಜೂರಿ ನೀಡಲಾಯಿತು. ಮುಂದಿನ ವರ್ಷದಿಂದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರುಗಳು, ವಿವಿಧ ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರಗಳು ಸೇರಿದಂತೆ ಬ್ಯಾಂಕಿನ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಪಿ. ಎನ್. ಭಟ್ಟರವರು ವಿಷಯ ಮಂಡನೆ ಮಾಡಿದರು. ಉಪಾಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯ್ಕ ರವರು ಅಭಿನಂಧನೆಗಳನ್ನು ಸಲ್ಲಿಸಿದರು. ಸಭೆಗೆ ಆಗಮಿಸಿದ ಎಲ್ಲಾ ಸದಸ್ಯರಿಗೆ ಚಹಾ-ತಿಂಡಿ ಜೊತೆಗೆ ಸಿಹಿ ವಿತರಿಸಲಾಯಿತು.

error: