May 5, 2024

Bhavana Tv

Its Your Channel

ಹೊನ್ನಾವರ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ ಕೋಟೆಬೈಲ್ ಸರಕಾರಿ ಪ್ರಾಢಶಾಲೆಯ ವಿದ್ಯಾರ್ಥಿನಿಯರು

ಹೊನ್ನಾವರ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ, ತಾಲೂಕಿನ ಕೋಟೆಬೈಲ್ ಸರಕಾರಿ ಪ್ರಾಢಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕಿನ ಎಸ್.ಡಿ.ಎಂ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ, ಕೋಟೆಬೈಲ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಿಂಧೂ ಆರ್. ನಾಯ್ಕ್ ಇವಳು ಮೂರು ಸಾವಿರ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಮತ್ತು 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.

ಯೋಗಾಸನ ಸ್ಪರ್ಧೆಯಲ್ಲಿ ಕುಮಾರಿ ಚಂದನ ಎಂ. ನಾಯ್ಕ್ ಇವಳು ರಿದಮಿಕ್ ಯೋಗವನ್ನು ಪ್ರದರ್ಶಿಸುವ ಮೂಲಕ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಇನ್ನು ಕುಮಾರಿ ರಚನಾ ನಾಯ್ಕ್ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾಳೆ.
ಇವರಿಗೆ ದೈಹಿಕ ಶಿಕ್ಷಕಿ ಪರ್ಪಿತಾ ರೊಡ್ರಿಗಿಸ್ ತರಬೇತಿ ನೀಡಿದ್ದರು.

ಸಿಂಧೂ ಹಾಗೂ ಚಂದನ, ವಿದ್ಯಾಭ್ಯಾಸ ಮತ್ತು ಆಟೋಟ ಅಷ್ಟೇ ಅಲ್ಲದೇ ವಿವಿಧ ಗ್ಯಾಂದರಿAಗ್ ಗಳಲ್ಲಿ ಉತ್ತಮ ಡಾನ್ಸ್ ಪ್ರದರ್ಶನವನ್ನು ನೀಡಿ ಜನಮೆಚ್ಚುಗೆಗೆ ಸಾಕ್ಷಿಯಾಗಿದ್ದು; ರಂಗೋಲಿ ಚಿತ್ರಕಲೆಯಲ್ಲೂ ಸಹ ವಿಶೇಷ ಆಸಕ್ತಿಯುಳ್ಳ ವಿದ್ಯಾರ್ಥಿನಿಯರಾಗಿದ್ದಾರೆ.

ಕ್ರೀಡಾಕೂಟದಲ್ಲಿನ ಇವರ ಸಾಧನೆಗೆ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಹಾಗೂ ಊರನಾಗರೀಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

ವರದಿ:ನರಸಿಂಹ ನಾಯ್ಕ್ ಹರಡಸೆ

error: