May 5, 2024

Bhavana Tv

Its Your Channel

ನ್ಯೂಇಂಗ್ಲಿಷ್ ಸ್ಕೂಲ್, ಬಾಲಕರ ಹಾಗೂ ಬಾಲಕಿಯರ ಖೋ-ಖೋ ತಂಡ ಜಿಲ್ಲಾ ಮಟ್ಟಕ್ಕೆ.

ಹೊನ್ನಾವರ ನ್ಯೂ ಇಂಗ್ಲಿಷ್ ಸ್ಕೂಲ್‌ನ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದ ಖೋ_ಖೋ ಸ್ಪರ್ಧೆಯಲ್ಲಿಅತ್ಯುತ್ತಮ ಪ್ರದರ್ಶನ ನೀಡಿಪ್ರಥಮ ಸ್ಥಾನ ಗಳಿಸುವುದರ ಮೂಲಕ ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.
ಈ ಎರಡೂತಂಡಗಳು ಜಿಲ್ಲಾ ಮಟ್ಟಕ್ಕೆಆಯ್ಕೆಯಾಗಿರುವುದುಗಮನಾರ್ಹ ಸಾಧನೆಯಾಗಿರುತ್ತದೆ. ನಿರಂತರತರಬೇತಿಯಿAದ ಈ ಯಶಸ್ಸು ಸಾಧ್ಯವಾಗಿದೆ.ಶಾಲೆಯದೈಹಿಕ ಶಿಕ್ಷಣ ಶಿಕ್ಷಕರುಗಳಾದ ಲೋಕೇಶ ಚಂದಾವರಕರ್ ಹಾಗೂ ಯಶ್ವಂತ ಮೇಸ್ತರವರ ಮಾರ್ಗದರ್ಶನದಲ್ಲಿತರಬೇತಿ ಪಡೆದಿರುತ್ತಾರೆ.ಪೂರ್ವ ವಿದ್ಯಾರ್ಥಿಗಳಾದ ಆಕಾಶ ಬಾನಾವಳಿ ಮತ್ತುಗಿರೀಶ್ ಸಹಕಾರ ನೀಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆಶಾಲಾ ಆಡಳಿತ ಮಂಡಳಿಯಅಧ್ಯಕ್ಷರು, ಸದಸ್ಯರುಗಳು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. ಶಾಲೆಯ ಪೂರ್ವವಿದ್ಯಾರ್ಥಿ ಹಾಗೂ ಕ್ರೀಡಾಪಟುಗಳಾದ ಪಿ. ಬಿ. ಶ್ಯಾನಭಾಗ್‌ರವರು ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿಪತ್ರ ವಿತರಿಸಿ, ಗೌರವಿಸಿ ಹುರಿದುಂಬಿಸಿದರು.

error: