May 3, 2024

Bhavana Tv

Its Your Channel

ಮಾಗೋಡ ಗ್ರಾ. ಪಂ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆದ ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 21ನೇ ಸಮಾಲೋಚನೆ ಸಭೆ

ಹೊನ್ನಾವರ:– ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಗ್ರಾಮ ಪಂಚಾಯತ್ ವ್ಯಾಪ್ತಿಯ 21.ನೇ ಸಮಾಲೋಚನೆ ಸಭೆಯನ್ನು ಮಾಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಸಭೆಯ ಉದ್ಘಾಟಕರಾಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನೋದಾ ಎಸ್ ನಾಯ್ಕ ಆಗಮಿಸಿದರು.ಸಭೆಯ ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷರಾದ ಜಿ ಎನ್ ಗೌಡರು ವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಜಿ ಹೆಗಡೆ ಮಾತನಾಡಿ ನಮ್ಮಲ್ಲಿ ಏಕಾಗ್ರತೆ ನಾಯಕತ್ವ ಗುಣ ಇದ್ದಾಗ ಮಾತ್ರ ನಾವು ಕಂಡ ಹೊನ್ನಾವರ ಬದಲಾಗಲು ಸಾಧ್ಯ ಎಂದರು.

ಉದ್ಘಾಟನೆ ನೇರವೇರಿಸಿ ಮಾತನಾಡಿದ ವಿನೋದಾ ಎಸ್ ನಾಯ್ಕ ನಮ್ಮ ಹೊನ್ನಾವರ ತಾಲೂಕು ಪ್ರತಿಯೊಬ್ಬ ವ್ಯಕ್ತಿಯ ತಾಯಿ ಸಮಾನ ಎಂದರೆ ತಪ್ಪಾಗಲಾರದು.ನಮ್ಮ ಹೊನ್ನಾವರ ಎನ್ನುವುದು ಒಂದು ಕುಟುಂಬ ಇದ್ದಂತೆ ಅದರ ಜವಾಬ್ದಾರಿ ಸಮಸ್ತರಿಗೂ ಇದೆ ಎಂದರು.

ಬಾಬು ನಾಯ್ಕ ಮಾತನಾಡಿ ನಮ್ಮ ಹೊನ್ನಾವರದ ಸಮಸ್ಯೆಗಳು ಬಗೇಹರಿಸುವುದಕ್ಕೆ ಸಂಘಟನೆಯ ಕೊರತೆ ಇತ್ತು ಈಗ ಅದರ ಸೌಭಾಗ್ಯ ನಮಗೆ ಸಿಕ್ಕಿರುವುದು ಖುಷಿಯ ವಿಚಾರ.ಈ ಸಂಘಟನೆಯಿAದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಲಿ ಅವರ ಜೊತೆ ನಾವು ಸದಾ ಇರಲೇಬೇಕೆಂದರು.

ಕ್ರಷ್ಣಮೂರ್ತಿ ಹೆಬ್ಬಾರ ಮಾತನಾಡಿ ಸಂಘಟನೆಯ ಬಲವೃದ್ಧಿಗೆ ಬೇಕಾಗಿರುವುದು ಕೇವಲ ಪ್ರೀತಿ -ನೀತಿ ಮಾತ್ರ ಅದರ ಉತ್ಸಾಹ ಪ್ರತಿ ಗ್ರಾಮ ಗ್ರಾಮಗಳಲ್ಲಿ ಬರಬೇಕು ಎಂದು ಹೇಳಿದರು.

ಪಿ ಜಿ ಜೋಷಿ ಮಾತನಾಡಿ ಈ ಸಂಘಟನೆ ರಾಜಕೀಯ ಮುಕ್ತ ವೇದಿಕೆ ತುಂಬಾ ಖುಷಿಯ ವಿಚಾರ ಈ ವೇದಿಕೆ ಗೆ ಸಮರ್ಥ ಹೋರಾಟಗಾರರೇ ಅಧ್ಯಕ್ಷ ರಾಗಿರುವುದು ಮತ್ತು ಸಂಘಟನೆಯ ಪದಾಧಿಕಾರಿಗಳ ಸೇವೆ ನೋಡಿದರೆ ನಾವೇಲ್ಲರು ಈ ಸಂಘಟನೆಯ ಜೊತೆ ಯಾವತ್ತು ಇರಬೇಕು ಎಂದರು
.

ಕರೀಂ ಸಾಹೇಬ್ ಮಾತನಾಡಿ ಸ್ಥಳೀಯ ಸಮಸ್ಯೆ ಬಗೆಹರಿಸಲು ನಾವು ನೀವೇಲ್ಲರು ಸೇರಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. ಎಸ್ ಕೆ ಹೆಗಡೆ ಮಾತನಾಡಿ ಈ ವೇದಿಕೆ ಜನರಿಗಾಗಿ ಇರುವ ವೇದಿಕೆ ಇಲ್ಲಿ ಯಾರಿಗೂ ವ್ಯಯಕ್ತಿಕ ಹೀತಾಶಕ್ತಿ ಇಲ್ಲಾ ಯಾಕೆಂದರೆ ನಮ್ಮ ಹೊನ್ನಾವರ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಮೋಹನ್ ಗಾಬಿತ್ ಮಾತನಾಡಿ ಸ್ಥಳೀಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಸ್ಯೆಯನ್ನು ಹೋರಾಟದ ಮೂಲಕ ಅದರ ಫಲವನ್ನು ಪಡೆದುಕೊಳ್ಳುತ್ತಾರೆ ನಮ್ಮ ಹೊನ್ನಾವರದ ಸಮಸ್ಯೆಗಳು ಬಗೆಹರಿಸುವುದಕ್ಕೆ ಈ ಸಂಘಟನೆ ರಚನೆಯಾಗಿದ್ದು ತುಂಬಾ ಖುಷಿಯ ವಿಚಾರ ಅವರಿಗೆ ನಾವೆಲ್ಲರು ಸಹಕಾರ ಖಂಡಿತ ನೀಡಬೇಕು ಎಂದರು

ಶ್ರೀ ಪ್ರಭಾಕರ ಪಟಗಾರ ಮಾತನಾಡಿ ಸಂಘಟನೆಯಲ್ಲಿ ನಾವು ನೀವೇಲ್ಲರು ಸೇರಿ ಮಾಡಬೇಕಾದ ಕೆಲಸ ಹೋರಾಟದ ಮನೋಭಾವನೆ ಅದರಿಂದ ನಮ್ಮ ಹೊನ್ನಾವರ ತಾಲೂಕಿನ ಅಭಿವೃದ್ಧಿಗೆ ಬೇಕಾದ ಪೂರಕ ವಾತಾವರಣ ಕಂಡುಕೊಳ್ಳಲು ಖಂಡಿತ ಸಾಧ್ಯ ಎಂದರು.

ಜಿ ಎನ್ ಗೌಡರು ಮಾತನಾಡಿ ಸಂಘಟನೆಯ ಮುಖ್ಯ ಉದ್ದೇಶ ನಮ್ಮ ಹೊನ್ನಾವರದ ಹಕ್ಕನ್ನು ಪಡೆಯುವುದು ಇಲ್ಲಿ ಯಾರಿಗೂ ವ್ಯಯಕ್ತಿಕ ಹೀತಾಶಕ್ತಿ ಇಲ್ಲಾ ಸಮಗ್ರ ಹೊನ್ನಾವರ ಬೆಳವಣಿಗೆ ನಮ್ಮ ಮೂಲ ಉದ್ದೇಶ ಎಂದು ಹೇಳಿದರು.

ಸಭೆಯಲ್ಲಿ ಊರಿನ ಮಹಿಳೆಯರು ಬಸ್ ಸಮಸ್ಯೆ ಬಗ್ಗೆ ನಾವು ಪಂಚಾಯತ್ ಗಮನಕ್ಕೆ ತಂದರು ಸಹ ಬಸ್ ಸಮಸ್ಯೆ ಬಗೆಹರಿಸಲು ಸಾಧ್ಯ ವಾಗಿಲ್ಲ ನಾವು ಸಹ ನಿಮ್ಮ ಸಂಘಟನೆಯ ಜೊತೆ ಸೇರಿ ಸ್ಥಳೀಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಹೋರಾಟ ಮಾಡಲು ಸದಾ ಸಿದ್ಧ ಎಂದರು.

.ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಕೊಡಾಣಿ ವಿ ಎಸ್ ಎಸ್ ಸದಸ್ಯರಾದ ಬಾಬು ನಾಯ್ಕ. ಮೋಹನ್ ನಾರಾಯಣ್ ಗಾಬಿತ್ ಕರೀಂ ಸಾಹೇಬ್ ತಲಕಣಿ.ಯಕ್ಷಗಾನ ಕಲಾವಿದರಾದ ಅಣ್ಣಪ್ಪ ಗೌಡ, ಎಸ್ ಕೆ ಹೆಗಡೆ,ಶಾರದಾಂಬ ಹೈಸ್ಕೂಲ್ ನ ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ ಜಿ ಜೋಷಿ, ಸಂಘಟನೆಯ ಪ್ರಮುಖರಾದ ಎಸ್ ಜಿ ಹೆಗಡೆ, ಎಸ್ ಡಿ ಹೆಗಡೆ, ಕೃಷ್ಣಮೂರ್ತಿ ಹೆಬ್ಬಾರ, ನರಸಿಂಹ ನಾಯ್ಕ, ಮಹಿಳಾ ಸಂಘಟನೆಯ ಕಾರ್ಯಾಧ್ಯಕ್ಷ ರಾದ ರಾಧಾ ನಾಯ್ಕ, ಉಪಸ್ಥೀತರಿದ್ದರು
ವೇದಿಕೆಯ ಮುಂಭಾಗದಲ್ಲಿ ನಮ್ಮ ಸಂಘಟನೆಯ ಪ್ರಮುಖ ರಾದ ರಾಘವೇಂದ್ರ ನಾಯ್ಕ. ರಾಘು ಮೇಸ್ತ.ಮಹಿಳಾ ಸಂಘಟನೆಯ ಸಂಘಟನಾ ಕಾರ್ಯದರ್ಶಿ ಯಾದ ಸಂಧ್ಯಾ ರವಿ ಗಾಬಿತ ಇತರರು ಹಾಜರಿದ್ದರು.
ಸಮಾಲೋಚನೆ ಸಭೆಯನ್ನು ನಡೆಸಲು ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಡಳಿತ ಮಂಡಳಿ ಸ್ಥಳದ ನೆರವನ್ನು ನೀಡಿತು.ಸಭೆ ಯಶಸ್ವಿಯಾಗಿ ನಡೆಸಲು ದಾಮೋದರ ನಾಯ್ಕಅಣ್ಣಪ್ಪ ಗೌಡ ಮುತುವರ್ಜಿ ವಹಿಸಿದರು.ಸಭೆಯ ಸ್ವಾಗತ ಹಾಗೂ ನಿರೂಪಣೆ ಯನ್ನು ಶ್ರೀ ಗಿರೀಶ್ ರಾಯ್ಕರ್ ಉಪ್ಪೋಣಿ ನೇರವೇರಿಸಿದರು .

error: