May 15, 2024

Bhavana Tv

Its Your Channel

ಎಂ. ಪಿ. ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್ ನಲ್ಲಿ ವಾರ್ಷಿಕ ಕ್ರೀಡಾಕೂಟ

ಹೊನ್ನಾವರ: ಕ್ರೀಡೆ ಮನುಷ್ಯನದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯವಾದದ್ದು ಎಂದು ಎಂ. ಪಿ. ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಶಿವಾನಿಯವರು ಸೆಂಟ್ರಲ್ ಸ್ಕೂಲ್‌ನ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ, ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂಬ ವಿಚಾರವನ್ನು ಎಂ. ಪಿ. ಇ ಸೊಸೈಟಿಯ ನೂತನ ಕರ‍್ಯನಿರ್ವಾಹಣಾಧಿಕಾರಿ(ಅಇಔ) ಕಿರಣ್ ಕುಡ್ತಾರ್‌ಕರ್‌ರವರು ಮಾತನಾಡಿ ವಿದ್ಯಾರ್ಥಿಗಳ ಗಮನಕ್ಕೆ ತಂದರು. ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಯ ಮಹತ್ವದ ಕುರಿತು ಶಾಲೆಯ ಮುಖ್ಯಾಧ್ಯಾಪಕರಾದ ಕಾಂತಿ ಭಟ್ಟರವರು ಮಾತನಾಡಿದರು. ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಎಸ್.ಎಮ್ ಭಟ್ಟರವರು ಉಪಸ್ಥಿತರಿದ್ದರು.
ಎಂ. ಪಿ. ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್‌ನ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಎರಡು ದಿನಗಳ ಕಾಲ ನಡೆಯಿತು.ಮೊದಲನೇ ದಿನ ಬೆಳಿಗ್ಗೆ 9:30 ಕ್ಕೆ ಉದ್ಘಾಟನಾ ಕರ‍್ಯಕ್ರಮ ನೆರವೇರಿತು. ನಂತರ ವಿದ್ಯಾರ್ಥಿಗಳಿಗೆ ತರಗತಿ ವಾರು ವಿಭಾಗಗಳನ್ನು ಮಾಡಿಕೊಂಡು ಹಂತಹAತವಾಗಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆಯನ್ನು ಮೂಡಿಸುವ ಉದ್ದೇಶದಿಂದ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಸ್ಪರ್ಧೆಗಳನ್ನು ನಡೆಸಲಾಯಿತು.ಎರಡನೆಯ ದಿನ ಗುಂಪು ಆಟಗಳನ್ನು ಆಡಿಸಲಾಯಿತು.ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಕುರಿತು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಎಲ್ಲಾ ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದಾರೆ.ಕ್ರೀಡಾಕೂಟದಕಾರ್ಯಕ್ರಮವನ್ನು ಕುಮಾರಿ.ಸ್ಮೀತಾ ತಾಂಡೇಲ್ ನಿರೂಪಿಸಿದರು , ರಾಜೇಶ್ವರಿ ಕೆ ಸ್ವಾಗತಿಸಿದರು ಹಾಗೂ ವಿಜಯಲಕ್ಷಿö್ಮÃ ನಾಯ್ಕ ವಂದನಾರ್ಪಣೆ ಮಾಡಿದರು.

error: