February 28, 2024

Bhavana Tv

Its Your Channel

ಗೇರುಸೊಪ್ಪಾ ಸಮೀಪ ಅಪಘಾತ ಮಾಡಿದ ಆರೋಪಿ ಚಾಲಕನಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 7500ರೂ ದಂಡ ವಿಧಿಸಿದ ಹೊನ್ನಾವರ ನ್ಯಾಯಾಲಯ.

ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಮಾಸ್ತಿಮನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಅಪಘಾತ ಮಾಡಿದ ಆರೋಪಿ ಕಾರ ಚಾಲಕ ಬೆಂಗಳೂರು ಮತ್ತಿಕೆರೆಯ ಕಾರ್ತಿಕ್ ಎಂ. ಟಿ. ಎಂಬುವವನಿಗೆ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಜೆ. ರವರು ವಿಚಾರಣೆ ನಡೆಸಿ ಆರೋಪಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ರೂಪಾಯಿ 7,500/- ದಂಡ ವಿಧಿಸಿರುತ್ತಾರೆ.

ಆರೋಪಿಯು ದಿನಾಂಕ 03-04-2016 ರಂದು ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ತನ್ನ ಕಾರನ್ನು ಗೇರುಸೊಪ್ಪ ಕಡೆಯಿಂದ ಸಾಗರ ಕಡೆಗೆ ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಗಡೆಯಿಂದ ಅಂದರೆ ಸಾಗರ ಕಡೆಯಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ ಮಾರುತಿ ಓಮಿನಿ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿ ಮಾರುತಿ ಓಮಿನಿಯಲ್ಲಿ ಪ್ರಯಾಣಿಸುತ್ತಿದ್ದ 6 ಜನ ಪ್ರಯಾಣಿಕರಿಗೆ ಗಾಯನೋವುಂಟುಮಾಡಿದ್ದು ಮತ್ತು ಮಾರುತಿ ಓಮಿನಿ ಚಾಲಕ ಸಂಪತಕುಮಾರ ಇವರಿಗೆ ತೀವೃ ಸ್ವರೂಪದ ಗಾಯವುಂಟಾಗಿದ್ದು ನಂತರ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದರು.

ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಹೊನ್ನಾವರ ಪೊಲೀಸ್ ಠಾಣೆಯ ಆಗಿನ ಪಿ. ಎಸ್. ಐ, ಗಣೇಶ ಬಿ. ಜೋಗಳೆಕರ ಮತ್ತು ಆಗಿನ ಹೊನ್ನಾವರದ ವೃತ್ತ ನಿರೀಕ್ಷಕರಾದ ಕೆ. ಕುಮಾರಸ್ವಾಮಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಲಯಕ್ಕೆ ಸಲ್ಲಿಸಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸಂಪದಾ ಅಶೋಕ ಗುನಗಾ ಈ ಪ್ರಕರಣದಲ್ಲಿ 10 ಜನ ಸಾಕ್ಷಿದಾರರನ್ನು ವಿಚಾರಿಸಿ ವಾದಿಸಿದ್ದರು.

error: