February 20, 2024

Bhavana Tv

Its Your Channel

ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಹಳೆಯ ಲೈನುಗಳ ಬದಲಾವಣೆ ಕುರಿತು ಮನವಿ

ಹೊನ್ನಾವರ: ಹಳೆ ಚಿತ್ತಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಪೂಳಿ ಗ್ರಾಮದ ಸಾರ್ವಜನಿಕರು ಹಾಗೂ ಮರಾಠಿ ಸಮಾಜದ ರೈತರುಗಳು ಅಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಹಳೆಯ ಲೈನುಗಳ ಬದಲಾವಣೆ ಹೊಸ ಟ್ರಾನ್ಸ್ಫಾರ್ಮರ್ ನೀಡುವ ಬಗ್ಗೆ ಕೂಡಲೇ ಸರಿಪಡಿಸುವ ಬಗ್ಗೆ ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆ ಪ್ರಮುಖರ ಹಾಗೂ ಊರಿನವರ ಜೊತೆ ಹೊನ್ನಾವರ ಹೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕರಿಗೆ ಮನವಿ ನೀಡಲಾಯಿತು.
ನವಂಬರ್ 15 ಒಳಗೆ ಸಮಸ್ಯೆಯನ್ನು ಪರಿಹರಿಸದಿದ್ದರೆ ಹೋರಾಟ ಮಾಡುವ ಬಗ್ಗೆ ಜಿ ಎನ್ ಗೌಡರು ಅಧಿಕಾರಿಗಳನ್ನು ಎಚ್ಚರಿಸಿದರು. ಈ ಬಗ್ಗೆ ಅಧಿಕಾರಿಗಳು ಕೂಡಲೆ ಪರಿಹರಿಸುವ ವಿಶ್ವಾಸ ನೀಡಿದರು ಎಂದು ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಸಂಘಟಣೆಯ ಅಧ್ಯ÷ಕ್ಷರಾದ ಜಿ ಎನ್ ಗೌಡ ತಿಳಿದ್ದಾರೆ. ನಂತರ ಆ ಊರಿನ ಯುವಕರುಗಳು ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ಕಚೇರಿಗೆ ಭೇಟಿ ನೀಡಿ ನಮ್ಮ ಸಂಘಟನೆಗೆ ಬೆಂಬಲ ನೀಡಲು ತಾವು ಯಾವಾಗಲೂ ಸಿದ್ದರಿದ್ದೇವೆಂದು ಆಶ್ವಾಸ ನೀಡಿದರು,

error: