May 12, 2024

Bhavana Tv

Its Your Channel

ಅಮೆಚ್ಯೂರ ಕಬ್ಬಡ್ಡಿ ಆಸೋಶಿಯೇಷನ್ ವತಿಯಿಂದ ಆಯೋಜಿಸಿದ ಕುಮಟಾ ಹೊನ್ನಾವರ ತಾಲೂಕಿನ ಕಬ್ಬಡ್ಡಿ ಪಂದ್ಯಾವಳಿ

ಹೊನ್ನಾವರ; ದೇಶಿಯ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪೊತ್ಸಾಹಿಸುವ ಕಾರ್ಯ ಮಾಡಬೇಕಿದೆ ಎಂದರು ಕಾಂಗ್ರೇಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದರು.
ಅವರು ಎಸ್.ಕೆ.ಪಿ. ಗೆಳೆಯರ ಬಳಗ ಅರೇಅಂಗಡಿಯಲ್ಲಿ ತಾಲೂಕ ಅಮೆಚ್ಯೂರ ಕಬ್ಬಡ್ಡಿ ಆಸೋಶಿಯೇಷನ್ ವತಿಯಿಂದ ಆಯೋಜಿಸಿದ ಕುಮಟಾ ಹೊನ್ನಾವರ ತಾಲೂಕಿನ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಇಂದು ಗ್ರಾಮೀಣ ಕ್ರೀಡೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಜನಮನ್ನಣೆ ಪಡೆದಿದೆ. ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಪೊತ್ಸಾಹಿಸಬೇಕಿದೆ ಎಂದರು.
ಕ್ರೀಡಾಂಗಣದ ಉದ್ಘಾಟನೆ ನೇರವೇರಿಸಿದ ರವಿಕುಮಾರ ಶೆಟ್ಟಿ ಮಾತನಾಡಿ ಕಬ್ಬಡ್ಡಿ ನಶಿಸುವ ಸಮಯದಲ್ಲಿ ಪ್ರೋ ಕಬ್ಬಡ್ಡಿ ಆರಂಭವಾಗಿ ಇನ್ನಷ್ಟು ಯುವಕರನ್ನು ಪ್ರೇರೆಪಿಸಿ, ಗ್ರಾಮೀಣ ಭಾಗದಲ್ಲಿ ಕ್ರಿಕೇಟ್ ವಾಲಿಬಾಲ್ ಜೊತೆಜೊತೆಗೆ ಕಬ್ಬಡ್ಡಿ ಆರಂಭವಾಯಿತು. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಆರಂಭವಾದಾಗ ಹಬ್ಬದ ಸಂಭ್ರಮ ಮನೆ ಮಾಡಲಿದೆ ಇಂದು ಈ ಭಾಗದಲ್ಲಿ ಕ್ರೀಡಾ ಹಬ್ಬ ನಡೆಯಲಿದೆ ಎಂದರು.
ಎಸ್.ಕೆ.ಪಿ.ಕಾಲೇಜಿನ ಪ್ರಾಚಾರ್ಯ ವಿ.ಎನ್.ಭಟ್, ವೈದ್ಯರಾದ ವಿನಾಯಕ ಭಟ್ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಕ್ರೀಡೆಯಿಂದ ಸಾಮಾಜಿಕ ಸಾಮರಸ್ಯದ ಜೊತೆ ದೈಹಿಕ ಸಾಮರ್ಥ್ಯ ವೃದ್ದಿಸಲಿದೆ. ಗ್ರಾಮೀಣ ಪ್ರತಿಭೆ ಪೊತ್ಸಾಹಿಸುವ ಮೂಲಕ ಸಾಮಾಜಿಕ ಕಾರ್ಯ ಹೆಚ್ಚಿನ ಪ್ರಮಾಣದಲ್ಲಿ ಜರುಗಲಿ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಡ್ಲೆ ಗ್ರಾ.ಪಂ.ಅಧ್ಯಕ್ಷ ಗೋವಿಂದ ಗೌಡ, ಚಿಕ್ಕನಕೋಡ ಗ್ರಾ.ಪಂ.ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ಯಂಗ್ ಬ್ರಿಗೇಡ್ ಅಧ್ಯಕ್ಷ ಅಕ್ಷಯ ನಾಯ್ಕ, ಉದ್ಯಮಿ ಸಂದೀಪ ಪೂಜಾರಿ, ಅಯ್ಯಪ್ಪ ನಾಯ್ಕ, ವಿನಾಯಕ ಶೆಟ್ಟಿ, ಬಾಲು ಭಟ್, ರಾಜೇಶ ನಾಯ್ಕ, ನಾಗೇಶ ನಾಯ್ಕ, ಮತ್ತಿತರರು ಉಪಸ್ಥಿತರಿದ್ದರು.
ನಂತರ ನಡೆದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕಾಸರಕೋಡ ಯಕ್ಷ ಚೌಡೇಶ್ವರಿ ತಂಡ ಪ್ರಥಮ ಸ್ಥಾನ, ಜೈನಜಟಗೇಶ್ವರ ತಂಡ ದ್ವೀತಿಯ ಸ್ಥಾನ ಪಡೆಯುವ ಮೂಲಕ ಪ್ರಶಸ್ತ್ರಿ ಮುಡಿಗೇರಿಸಿಕೊಂಡಿತು

error: