April 28, 2024

Bhavana Tv

Its Your Channel

ಅಂತರ ಕಾಲೇಜು ಮಟ್ಟದ ಚೆಸ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮ

ಹೊನ್ನಾವರ :-ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಕುಟುಂಬಕ್ಕೆ ಮತ್ತು ಕಾಲೇಜಿಗೆ ಹೆಸರನ್ನು ತರಬೇಕೆಂದು ಎಂ ಎಸ್ ಹೆಗಡೆ, ಸದಸ್ಯರು, ಸಿಡಿಸಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ ಇವರು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು
ಎರಡು ದಿನದ ಕ್ರಿಡಾಕೂಟದಲ್ಲಿ ಒಟ್ಟು ಪುರುಷ 17 ತಂಡ ಹಾಗೂ ಮಹಿಳಾ 7 ತಂಡಗಳು ಭಾಗವಹಿಸಿ ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎಂದು ವಿಶ್ವವಿದ್ಯಾಲಯದ ನಿರ್ಣಾಯಕರಾದ ವೇಂಕಟೇಸ್ ಪಿ ಅವರು ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ನಾಗೇಶ ಶೆಟ್ಟಿ ಇವರು ವಹಿಸಿದ್ದರು ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕರಾದ ಡಾ. ಶ್ರೀನಿವಾಸ, ಕು. ಕಾವ್ಯಶ್ರೀ, ಶಂಕರ ದೇವಾಡಿಗ ಇವರು ಉಪಸ್ಥಿತರಿದ್ದರು. ಹಾಗೂ ಕಾರ್ಯಕ್ರಮದಲ್ಲಿ ನಮಿತಾ ಇವರು ಪ್ರಾರ್ಥಿಸಿದರು, ಸಂಜನಾ ನಾಯ್ಕ ಇವರು ಸ್ವಾಗತಿಸಿದರು, ಅಪೂರ್ವ ಭಟ್ ಇವರು ವಂದಿಸಿದರು ಹಾಗೂ ಸೋನಾಲಿ ಎಸ್ ನಾಯ್ಕ ಇವರು ನಿರೂಪಿಸಿದರು
ಪುರುಷ ವಿಭಾಗದ ಚೇಸ್ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ ಪ್ರಥಮ ಸ್ಥಾನ, ಕೆಸಿಡಿ ವಿಜ್ಞಾನ ಮಹಾವಿದ್ಯಾಲಯ ದ್ವಿತಿಯ ಸ್ಥಾನ, ಪಿ.ಸಿ ಜಾಬಿನ್ ವಿಜ್ಞಾನ ಕಾಲೇಜು, ಹುಬ್ಬಳ್ಳಿ ತೃತಿಯ ಸ್ಥಾನ ಪಡೆದಿರುತ್ತದೆ
ಮಹಿಳೆಯರ ವಿಭಾಗದ ಚೇಸ್ ಪಂದ್ಯಾವಳಿಯಲ್ಲಿ ಎಂಇಎಸ್ ಕಾಮರ್ಸ ಕಾಲೇಜು ಸಿರ್ಸಿ ಪ್ರಥಮ ಸ್ಥಾನ, ಅಂಜುಮಾನ ಪದವಿ ಮಹಾವಿದ್ಯಾಲಯ ಭಟ್ಕಳ ದ್ವಿತಿಯ ಸ್ಥಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ ತೃತಿಯ ಸ್ಥಾನ ಪಡೆದಿರುತ್ತದೆ

error: