April 27, 2024

Bhavana Tv

Its Your Channel

ಡಿ.4 ಕ್ಕೆ 16ನೇ ಶರಾವತಿ ಉತ್ಸವ 2022

ಹೊನ್ನಾವರ: ಡಿ.4 2022 ರಂದು ಹೊನ್ನಾವರದ ಪ್ರಭಾತನಗರದ ಸೇಂಟ್ ಅಂತೋನಿ ಪ್ರೌಢಶಾಲೆಯ ಮೈದಾನದಲ್ಲಿ 16ನೇ ಶರಾವತಿ ಉತ್ಸವ 2022 ನಡೆಯಲಿದೆ ಎಂದು ಶರಾವತಿ ಸಾಂಸ್ಕೃತಿಕ ವೇದಿಕೆ ಇದರ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ (ಪುಟ್ಟ ಹೆಗಡೆ)ಕವಲಕ್ಕಿ ಅವರು ತಿಳಿಸಿದರು.

ಅವರು ಶ್ರೀ ಕುಮಾರ ರೋಡ್‌ಲೈನ್ಸ್ ಕರ್ಕಿ ಹೊನ್ನಾವರ ಇದರ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ಕಳೆದ 16 ವರ್ಷಗಳಿಂದ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ಅವಕಾಶ ನೀಡುತ್ತಾ ಖ್ಯಾತ ಕಲಾವಿದರಿಂದ ಅಪ್ಪಟ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಾ ಬಂದಿದ್ದು ಹೊಸ ಪ್ರತಿಭೆಗಳಿಗೆ ಪ್ರೋತ್ಸಾವನ್ನು ನೀಡುತ್ತಾ ಬಂದಿದ್ದೇವೆ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾನೀಯರನ್ನು ಸನ್ಮಾನಿಸುತ್ತಾ ಬಂದಿದ್ದು ಪ್ರತಿ ವರ್ಷ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಮಠಾಧೀಶರು ಹಾಗೂ ಹಿರಿಯ ಅಧಿಕಾರಿಗಳನ್ನು ಅತಿಥಿಗಳಾಗಿ ಕರೆದು ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸುತ್ತಾ ಬಂದಿರುತ್ತೇವೆ ಅದೇ ರೀತಿ ಈ ವರ್ಷ ಡಿಸೆಂಬರ್.4 2022 ರ ಸಂಜೆ 4:30ರಿಂದ ಹೊನ್ನಾವರದ ಪ್ರಭಾತನಗರದ ಸೇಂಟ್ ಅಂತೋನಿ ಪ್ರೌಢಶಾಲೆಯ ಮೈದಾನದಲ್ಲಿ ಜರುಗಲಿದೆ ಎಂದರು.

ಸಂಜೆ 4:30 ರಿಂದ ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ  ಕಾರ್ಯಕ್ರಮ ಸಂಜೆ 6: 30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ತಾಯಿ ಶರಾವತಿ ನಮನ, ಶರಾವತಿಯ ಪವಿತ್ರ ಜಲ ಕುಂಭಕ್ಕೆ ಆರತಿ ಬೆಳಗಿಸಿ ಪ್ರಾರ್ಥಿಸಿ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಉದ್ಘಾಟಕರಾಗಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಬೆಂಗಳೂರು ಅಧ್ಯಕ್ಷರಾದ ಗೋವಿಂದ ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿ ನಿರ್ದೇಶಕರು ಶಿವಾನಂದ ಹೆಗಡೆ ಕಡತೋಕ ಹಾಗೂ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ರಾಜೇಶ ಕಿಣಿ , ಖ್ಯಾತ ಯಕ್ಷಗಾನ ಭಾಗವತರಾದ ಸರ್ವೇಶ್ವರ ಹೆಗಡೆ ಮೂರೂರು, ಹಾಗೂ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಅಶೋಕ ನಾಯ್ಕ ಇವರುಗಳನ್ನು ಸನ್ಮಾನಿಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮಗಳು:-
ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಶಿರಸಿ ಹೊನ್ನಾವರ ಶಾಖೆ ಇವರಿಂದ ಭರತನಾಟ್ಯ ಕಾರ್ಯಕ್ರಮ, ಶ್ರೀ ಚೆನ್ನಕೇಶವ ಪ್ರೌಢ ಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ ಹಾಗೂ ಯಕ್ಷಗಾನ ನೃತ್ಯ ಅಭಿನಯ , ಗಂಧರ್ವ ಕಲಾಕೇಂದ್ರ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ , ದಿನಕರ ಇಂಗ್ಲಿಷ ಮಾಧ್ಯಮ ಶಾಲೆ ಧಾರೇಶ್ವರ ವಿದ್ಯಾರ್ಥಿಗಳಿಂದ ನೃತ್ಯ, ಕು.ಉನ್ನತಿ ರೋಹಿದಾಸ ನಾಯ್ಕ ಇವಳಿಂದ ಭರತನಾಟ್ಯ ನಡೆಯಲಿದೆ.
ರಾತ್ರಿ 8:30 ಕ್ಕೆ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ “ದಕ್ಷಯಜ್ಞ” ಯಕ್ಷಗಾನ ನಡೆಯಲಿದೆ.
ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಯಶ್ವಸಿಗೋಳಿಸುವಂತೆ ಕೋರಿದ್ದಾರೆ
ಪ್ರತಿಕಾಗೋಷ್ಟಿಯಲ್ಲಿ ಶರಾವತಿ ಸಾಂಸ್ಕçತಿಕ ವೇದಿಕೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಉಪಸ್ಥಿತರಿದ್ದರು.

error: