May 4, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಸಾಮಾಜಿಕ ಕಳಕಳಿಯ ಮೂಲಕ ಕೇಕ್ ಕತ್ತರಿಸಿ ಜನ್ಮ ದಿನ ಆಚರಣೆ

ಹೊನ್ನಾವರ :- “WE NEED EMERGENCY HOSPITAL IN UTTHARA KANNADA” ಎಂಬ ಬರಹದ ಕೇಕ್ ಕತ್ತರಿಸುವ ಮೂಲಕ, ಹೊನ್ನಾವರ ತಾಲೂಕಿನ ಹರಡಸೆಯ ನರಸಿಂಹ ನಾಯ್ಕರ ಅಕ್ಕನ ಮಗಳು ಕುಮಾರಿ ಸಿಂಚನಳ ಜನ್ಮ ದಿನವನ್ನು ಸರಳವಾಗಿ ಆಚರಿಸಲಾಯಿತು.

ತಾಲೂಕಿನ ಮಾಗೋಡ್ ಬೆಳ್ಳಿಮಕ್ಕಿಯ ನೇತ್ರಾವತಿ ಮಾರುತಿ ನಾಯ್ಕ್ ದಂಪತಿಯ ಹನ್ನೆರಡು ವರ್ಷದ ಮಗಳು ಸಿಂಚನಾಳ ಜನ್ಮದಿನವನ್ನು ಹರಡಸೆಯ ನರಸಿಂಹ ನಾಯ್ಕರ ಮನೆಯಲ್ಲಿ ಸರಳವಾಗಿ ಆಚರಿಸಿದ್ದು, ಕೇಕ್ ಮೇಲಿನ ಬರಹ ಎಲ್ಲರ ಗಮನ ಸೆಳೆಯಿತು. ಸಿಂಚನಳ ಹೆಸರಿನ ಬದಲಿಗೆ “ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು” ಎಂಬ ಸಾಮಾಜಿಕ ಕಳಕಳಿಯ ವಾಖ್ಯವನ್ನು ಇಂಗ್ಲಿಷ್ ನಲ್ಲಿ ಕೇಕ್ ಮೇಲೆ ಬರೆಸಲಾಗಿತ್ತು.

ಈ ಸಂದರ್ಭದಲ್ಲಿ ನರಸಿಂಹ ನಾಯ್ಕ್ ಮಾತನಾಡಿ “ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲೇ ಅಪಘಾತ ನಡೆದರೂ ಜೀವ ಕೈಯಲ್ಲಿ ಹಿಡಿದು ಅಂಬ್ಯುಲೆನ್ಸ್ ನಲ್ಲಿ ನೆರೆಯ ಜಿಲ್ಲೆಗೆ ಸಾಗುವುದು ಅನಿವಾರ್ಯವಾಗಿದೆ. ಆಸ್ಪತ್ರೆ ನಿರ್ಮಾಣದ ಕನಸು ನನಸಾಗುವ ತನಕ ನಮ್ಮ ಜಿಲ್ಲೆಗಿರುವ ಸುಸಜ್ಜಿತ ಆಸ್ಪತ್ರೆಯ ಅಗತ್ಯತೆಯನ್ನು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನೆನಪಿಸಿಕೊಳ್ಳಬೇಕು.
“ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಆಸ್ಪತ್ರೆ ಬೇಕು” ಎಂಬ ಬೇಡಿಕೆ ಅಥವಾ ಕೂಗು “ಬತ್ಡೇð ಕೇಕ್, ಲಗ್ನಪತ್ರಿಕೆ, ಆಟ, ನಾಟಕ, ಸಮಾವೇಶದ ಆಮಂತ್ರಣಗಳ ಮೇಲೆಲ್ಲ ಅಕ್ಷರ ರೂಪದಲ್ಲಿ ಸದಾ ಪ್ರತಿಧ್ವನಿಸುತ್ತಿರಬೇಕು” ಎಂದರು.

error: