May 18, 2024

Bhavana Tv

Its Your Channel

ಜೀವ ಬಿಟ್ಟೆವು ಭೂಮಿ ಬಿಡೆವು ಅಸಹಕಾರ ಚಳುವಳಿಯ ಚಾಲನೆಗೆ ಚಿಂತನೆ -ಚಂದ್ರಕಾoತ ಕೊಚರೇಕರ

ಹೊನ್ನಾವರ: ಒಕ್ಕಲೆಬ್ಬಿಸುವುದಾಗಿ ಸುಪ್ರೀಂಗೆ ಸರಕಾರದ ಅಫಿಡವಿಟ್, ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಕೆಗೆ ಆಗ್ರಹ, ಅಗತ್ಯಕ್ರಮ ಆಗದಿದ್ದರೆ ಹೋರಾಟ ತೀವ್ರಹೋರಾಟಕ್ಕು ಸಿದ್ದ? ಜೀವ ಬಿಟ್ಟೆವು ಭೂಮಿ ಬಿಡೆವು ಅಸಹಕಾರ ಚಳುವಳಿಯ ಚಾಲನೆಗೆ ಚಿಂತನೆ ನಡೆಸಲಾಗುವುದು ಎಂದು ಚಂದ್ರಕಾAತ ಕೊಚರೇಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಸತಿ ಮತ್ತು ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಬದುಕನ್ನು ಕಟ್ಟಿಕೊಂಡಿರುವ ದೇಶದ ಪರಂಪರಾಗತ ಅರಣ್ಯವಾಸಿಗಳಿಗೆ 2005ರ ಪೂರ್ವ ದಿಂದ ಅವರು ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯ ಹಕ್ಕನ್ನು ನೀಡಲು ಡಾ . ಮನಮೋಹನ ಸಿಂಗ್ ಪ್ರಧಾನಿ ನೇತ್ರತ್ವದ ಅಂದಿನ ಸರಕಾರ ದೇಶದಲ್ಲಿ ಅರಣ್ಯ ಹಕ್ಕು ಮಾನ್ಯತೆ ಕಾಯಿದೆಯನ್ನು ಜಾರಿಗೆ ತಂದಿದ್ದು, ಅರಣ್ಯ ವಾಶಿಗಳ ಪಾಲಿಗೆ ವರವಾಗಿ ಪರಿಣಮಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ಕಾಯಿದೆಯ ಸಮರ್ಪಕ ಅನುಷ್ಠಾನಕ್ಕೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ಅಗತ್ಯ ಕ್ರಮಕೈಗೊಳ್ಳದೇ ನಿರ್ಲಕ್ಷ ವಹಿಸಿದವು. ಇತರ ಪರಂಪರಾಗತ ಅರಣ್ಯವಾಸಿಗಳ ವಿಚಾರದಲ್ಲಿ ಕಾಯಿದೆಯ ಮೂಲ ಆಶಯಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಹಲವು ಶರತ್ತುಗಳನ್ನು ವಿಧಿಸಿ ಕ್ಲೇಮುಗಳನ್ನು ಸಾರಾಸಗಟು ತಿರಸ್ಕರಿಸಿ ತಾರತಮ್ಯ ಮಾಡಿದರಲ್ಲದೇ ಅರಣ್ಯ ಭೂಮಿ ಒತ್ತುವರಿದಾರರನ್ನು ಹಂತ ಹಂತವಾಗಿ ಒಕ್ಕಲೆಬ್ಬಿಸುವದಾಗಿ ಸುಪ್ರಿಂಕೋರ್ಟ್ ಗೆ ಅಫೀಡವಿಟ ಸಲ್ಲಿಸಿ ಸರಕಾರ ಗಾಯದ ಮೇಲೆ ಬರೆ ಎಳೆಯುವ ಜನವಿರೋಧಿ ಕ್ರಮ ಅನುಸರಿಸಿದೆ. ಇದರಿಂದ ಜಿಲ್ಲೆಯ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗುವ ಅಪಾಯ ಎದುರಾಗಿದ್ದು ಜನರಲ್ಲಿ ಅಭದ್ರತೆ ಕಾಡುತ್ತಿದೆ.ಸರಕಾರಗಳ ಈ ಬಗೆಯ ನಿರ್ಲಕ್ಷ ಧೋರಣೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಅರಣ್ಯವಾಸಿಗಳು ಈಗ ಅತಂತ್ರ ಸ್ಥಿತಿಯಲ್ಲಿ ದಿನದೂಡುವಂತಾಗಿದೆ.. ಈ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ರಾಜಕೀಯ ಒಲೈಕೆ ಬಿಟ್ಟು, ಸಂಘಟಿತ ಹೋರಾಟವನ್ನು ಮುಂದುವರಿಸುವ ಹಾಗೂ ಮುಂದಿನ ಚುನಾವಣೆಯಲ್ಲಿ ತಮ್ಮ ಹಿತ ಕಾಯುವ ಪ್ರಮುಖ ಅಭ್ಯರ್ಥಿ ಮತ್ತು ಪಕ್ಷಕ್ಕೆ ಅರಣ್ಯವಾಸಿಗಳು ಮತ ಚಲಾಯಿಸಬೇಕೆನ್ನುವ ಪ್ರಸ್ತಾವ ಬಂದಿದ್ದು, ಈ ಬಗ್ಗೆ ಅರಣ್ಯವಾಸಿಗಳಲ್ಲಿ ಸಾಕಷ್ಟು ಚಿಂತನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ತಾಳ್ಮೆಯಿಂದ ವ್ಯವಹರಿಸುವದುಸೂಕ್ತ ಎನ್ನುವ ಕಾರಣದಿಂದ ಸಧ್ಯ ಈ ವಿಚಾರದಲ್ಲಿ ನಾವು ಮೌನಕ್ಕೆ ಶರಣಾಗಿದ್ದೇವೆ.

ಸರಕಾರವು ಅರಣ್ಯವಾಸಿಗಳ ಹಿತಕ್ಕೆ ಬದ್ದವಾಗಿ ಅರಣ್ಯ ಭೂಮಿಯಲ್ಲಿನ 2005 ರ ಪೂರ್ವದ ವಸತಿ ಸಹಿತ ಕೃಷಿ, ತೋಟಗಾರಿಕೆ ಸಾಗುವಳಿ ಕ್ಷೇತ್ರವನ್ನು ಒಂದು ನಿಗದಿತ ಕಾಲಮಿತಿಯಲ್ಲಿ ಸಕ್ರಮ ಪಡಿಸಿ ಹಕ್ಕುಪತ್ರ ನೀಡಲು ಪರಿಗಣಿಸಬೇಕು ಮತ್ತು ಆಬಗ್ಗೆ ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಸುಪ್ರಿಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಹಿತ ರಕ್ಷಣಿ ಮಾಡುವ ಬಗ್ಗೆ ಸರಕಾರ ತನ್ನ ನಿರ್ಧಾರವನ್ನು ಪ್ರಕಟಿಸಬೇಕು ಮತ್ತು ಈ ವಿಚಾರದಲ್ಲಿ ಸರಕಾರ ಮತ್ತು ವಿರೋಧ ಪಕ್ಷಗಳ ರಚನಾತ್ಮಕ ಸಹಕಾರವನ್ನು ಅರಣ್ಯವಾಸಿಗಳು ನಿರೀಕ್ಷೆ ಮಾಡುತ್ತೇವೆ. .ಈಗ ಚುನಾವಣೆಗಳ ಸಮಯ.ಅರಣ್ಯ ಭೂಮಿ ಹಕ್ಕಿಗಾಗಿ ಕ್ಷೇಮನ್ನು ಸಲ್ಲಿಸಿದ ಒತ್ತುವರಿದಾರರು ರಾಜಕೀಯವಾಗಿ ತಾಟಸ್ಥ್ಯ ನಿಲುವನ್ನು ಹೊಂದಬೇಕೆ ? ಅಥವಾ ಅರಣ್ಯವಾಸಿಗಳ ಬೇಡಿಕೆಗಳನ್ನು ಈಡೇರಿಸುವದಾಗಿ ಚುನಾವಣಾ ಪ್ರಣಾಳಿಕೆಗಳಲ್ಲಿ ಭರವಸೆ ನೀಡುವವರಿಗೆ ಬೆಂಬಲಿಸಬೇಕೆ ಎನ್ನುವ ಕುರಿತು ಮತ್ತು ಮುಂದಿನ ಸಂಘಟಿತ ಹೋರಾಟವನ್ನು ಯಾವರೀತಿ ಹಮ್ಮಿಕೊಳ್ಳಬೇಕು? ಹಾಗೂ ಅವುಗಳ ರೂಪುರೇಷೆಗಳ ಬಗ್ಗೆ ಚಳಿಗಾಲದ ಅಧಿವೇಶನದ ನಂತರ ಜಿಲ್ಲಾ ವೇದಿಕೆಯೊಂದಿಗೆ ಚರ್ಚಿಸಿ ಒಂದು ಗಟ್ಟಿ ನಿರ್ಧಾರಕ್ಕೆ ಬರುವ ಬಗ್ಗೆ ಚರ್ಚೆ ನಡೆಸಲಾಗುವದು ಎಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾAತ ಕೊಚರೇಕರ್ ಹೇಳಿದ್ದಾರೆ.

error: