May 17, 2024

Bhavana Tv

Its Your Channel

ಅನಂತವಾಡಿಯ ನಾಗರೀಕರ ಓಡಾಟಕ್ಕೆ ಸಂಕಷ್ಟ, ಜನಪ್ರತಿನಿಧಿಗಳ ನಿರ್ಲಕ್ಷ

ಹೊನ್ನಾವರ: ರೈಲ್ವೆ ಆರಂಭವಾದ ದಿನಗಳಿಂದಲು ಮೇಲ್ ಸೇತುವೆಗಾಗಿ ಮನವಿ ನೀಡುತ್ತಾ ಬಂದಿದ್ದರು ಜನಪ್ರತಿನಿಧಿಗಳ ನಿರ್ಲಕ್ಷದಿಂದ ನಿತ್ಯವು ಹೊನ್ನಾವರ ತಾಲ್ಲೂಕ್ಕಿನ ಅನಂತವಾಡಿಯ ನಾಗರೀಕರು ಓಡಾಟಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಸುತ್ತಮುತ್ತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಅನಂತವಾಡಿಯಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದೆ. ಕಳೆದ 25 ವರ್ಷಗಳ ಹಿಂದೆ ರೈಲು ಈ ಭಾಗದಿಂದ ಓಡಾಟ ನಡೆಸುತ್ತದೆ ಎಂದಾಗ ಜನರು ತುಂಬಾ ಸಂತೋಷಪಟ್ಟಿದ್ದರು. ಆದರೆ ಇಲ್ಲಿ ರೇಲ್ವೆ ಹಳಿ ದಾಟಲು ಮೇಲ್‌ಸೇತುವೆ ನಿರ್ಮಾಣ ಮಾಡದೆ ಜನರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯತದಿAದ ಹಿಡಿದು ಪ್ರಧಾನಿ ಕಚೇರಿವರೆಗೆ ಮನವಿ ಮಾಡಿಕೊಂಡರು ಜನರ ಸಮಸ್ಯೆ ಮಾತ್ರ ಇಂದಿಗು ಪರಿಹಾರವಾಗಿಲ್ಲ. ಕೊಂಕಣ ರೇಲ್ವೆ ಹಳಿಯಲ್ಲಿ ನಿತ್ಯವು ನೂರಾರು ರೈಲುಗಳು ಒಡಾಡುವುದರಿಂದ ಇಲ್ಲಿ ಅರ್ಧಗಂಟೆವರೆಗೆ ಗೇಟನ್ನು ಹಾಕಲಾಗುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ನಾಗರೀಕರಿಗೆ ಹಾಗೂ ಅದರಲ್ಲೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಾಡುವ ರೋಗಿಗಳಿಗೆ ಒಮ್ಮೆ ರೈಲು ಹಾದು ಹೋಗುವಾಗ ಗಂಟೆಗಟ್ಟಲೆ ಕಾಯುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಭಾಗದ ನಾಗರೀಕರು ಜನಪ್ರತಿನಿಧಿಗಳಿಗೆ,ಕೊಂಕಣ ರೈಲ್ವೆ
ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಜನರು ಹೋರಾಟವೇ ಅನಿವಾರ್ಯವೆಂದು ಪರಿಗಣಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಭಾವನಾ ಟಿವಿಯೊಂದಿಗೆ ಮಾತನಾಡಿದದ ಗಜಾನನ ನಾಯ್ಕರವರು ಸೇತುವೆ ನಿರ್ಮಾಣಕ್ಕೆ ಮನವಿ ಅರ್ಪಿಸಿದ ಹಾಗೂ ಪ್ರಯತ್ನದ ಬಗ್ಗೆ ಮಾಹಿತಿ ನೀಡಿದರು.
ಈ ಭಾಗದ ನಾಗರೀಕರಾದ ಗಣೇಶಯಾಜಿ ಹಾಗೂ ಗಣಪತಿ ನಾಯ್ಕರವರು ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
ರಾಜ್ಯ ಸರ್ಕಾರದ ಅನುದಾನ ಹಾಗು ಆದೇಶಕ್ಕಾಗಿ ಕೊಂಕಣ ರೇಲ್ವೆ ನಿಗಮ ಕಾಯುತ್ತಿದ್ದು ಶಾಸಕ ಸುನೀಲ ನಾಯ್ಕರವರು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀನಿವಾಸ ಪೂಜಾರಿಯವರ ಮೂಲಕ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಬೇಕಾಗಿದೆ.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: