April 27, 2024

Bhavana Tv

Its Your Channel

ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ಜಿಲ್ಲಾ ಮಟ್ಟದ ಮುಖ್ಯಾಧ್ಯಾಪಕರ ಕಾರ್ಯಾಗಾರ

ಹೊನ್ನಾವರ: ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ದಿನಾಂಕ07/12/2022 ರಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟಾ ಉ.ಕ.ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢ ಶಾಲಾ ಮುಖ್ಯಾಧ್ಯಾಪಕರ ಕಾರ್ಯಾಗಾರ ನಡೆಯಿತು.
ಶ್ರೀ ಈಶ್ವರ ನಾಯ್ಕ ಉಪನಿರ್ದೇಶಕರು ಆಡಳಿತ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ ಇವರು ದೀಪ ಬೆಳಗುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ2022-23 ನೇ ಸಾಲಿನ ಪರೀಕ್ಷಾ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದೆ. ಫಲಿತಾಂಶ ಹೆಚ್ಚಳಕ್ಕೆ ಕ್ರಿಯಾ ಯೋಜನೆ ಹಾಕಿಕೊಂಡು ಶಾಲೆಯ ಮುಖ್ಯಾಧ್ಯಾಪಕರ ನಾಯಕತ್ವದಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿ ಹೆಚ್ಚಿಸಿ ವಿದ್ಯಾಥಿ9ಗಳನ್ನು ಪ್ರೇರೇಪಿಸಿ ಪ್ರತಿ ಮಗುವಿನ ಪ್ರಗತಿ ಗಮನಿಸಿ ಮಗುವಿನ ನೋವು ನಲಿವುಗಳನ್ನು ಅರಿತು ಪ್ರೀತಿಯಿಂದ ಒಲಿಸಿಕೊಂಡು ರಾಜ್ಯದ ಫಲಿತಾಂಶದಲ್ಲಿ ಉತ್ತರಕನ್ನಡ ಜಿಲ್ಲೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.
ಶಿಕ್ಷಣ ಕೇತ್ರದಸಾಧನೆ ಮತ್ತು ಸೇವೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ವಿಶೇಷ ಅಭಿನಂದನೆ ಪಡೆದ ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರ ಹೊನ್ನಾವರದ ಮುಖ್ಯಾಧ್ಯಾಪಕರಾದ ಎಂ.ಟಿ.ಗೌಡರಿಗೆ ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸನ್ಮಾನಿಸಲಾಯಿತು.ಸನ್ಮಾನಿತರು ಮಾತನಾಡಿ ಉತ್ತರಕನ್ನಡ ಜಿಲ್ಲೆಯಲ್ಲಿ 1864 ರಲ್ಲಿ ಸ್ಥಾಪನೆ ಗೊಂಡ ಬಂಕಿಕೊಡ್ಲು ಪ್ರೌಢಶಾಲೆ ಪ್ರಥಮ ಅನುದಾನಿತ ಸಂಸ್ಥೆ ಹಾಗೆ ಉತ್ತರಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಬೆಳವಣಿಗೆಗೆ ಕೊಡುಗೆ ನೀಡಿದ್ದು ಅನುದಾನಿತ ಸಂಸ್ಥೆಗಳು ಆದರೆ ಇಂದು ಅನೇಕ ಶಾಲೆಗಳು ಅಳಿವಿನ ಅಂಚಿನಲ್ಲಿದೆ. ಸಂಘಟನೆ ಮತ್ತು ಶೈಕ್ಷಣಿಕ ಕಾರ್ಯ ಚಟುವಟಿಗೆಗಾಗಿ ಮಾತ್ರ ಮುಖ್ಯಾಧ್ಯಾಪಕ ಸಂಘದ ಕಾರ್ಯ ನಿವ9ಹಿಸುತ್ತಿದೆ ಎಂದು ತಿಳಿಸಿ ಸಂಘದ ಉದ್ದೇಶ ವಿವರಿಸಿದರು.ಗ್ರಾಮೀಣ ಭಾಗದ ವಿದ್ಯಾಥಿ9ಗಳ ಭವಿಷ್ಯ ಉತ್ತಮ ಪಡಿಸಿದರೆ ಅದರ ಪುಣ್ಯ ಶಿಕ್ಷಕರಿಗೆ ಹಾಗೂ ಅವರ ಕುಟುಂಬಕ್ಕೆ ಲಭಿಸುತ್ತದೆ.ಆದ್ದರಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸೋಣ ಎಂದರು.
ಹೊನ್ನಾವರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ.ಎಸ್.ನಾಯ್ಕರವರು ಮಾತನಾಡಿ ಇಲಾಖೆಯ ಕಾರ್ಯ ಚಟುವಟಿಕೆಯನ್ನು ಸಂಘಟಿಸಲು ಮುಖ್ಯಾಧ್ಯಾಪಕರ ಸಂಘದ ಸಹಕಾರ ಸ್ಮರಿಸಿ, ಎಸ್ ಎಸ್ ಎಲ್ ಸಿಪರೀಕ್ಷೆಗೆ ಇರುವ ಸೀಮಿತ ಅವಧಿಯಲ್ಲಿ ಸೂಕ್ತ ಯೋಜನೆ ಹಾಕಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದಾಖಲೆಯ ಫಲಿತಾಂಶ ನೀಡಲು ಪ್ರಯತ್ನಿಸೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ನಾಗರಾಜ ನಾಯ್ಕ ಪ್ರವತ9ಕರು ಅಖಿಇಬೆಳಗಾವಿ ಇವರು ಮಾತನಾಡಿ ಅನುಭವಗಳ ಹಂಚಿಕೆಯೊoದಿಗೆ ಶಾಲೆಗಳ ಕಾರ್ಯಚಟುವಟಿಕೆ ನಡೆಸಿದಾಗ ಪ್ರಗತಿ ಸಾಧ್ಯ. ಕಾರ್ಯಾಗಾರದ ಪ್ರೇರಣೆಯಿಂದ ಫಲಿತಾಂಶದ ಗುರಿ ಹಾಕಿಕೊಂಡು ಗುಣಾತ್ಮಕ ಫಲಿತಾಂಶ ಪಡೆಯಬೇಕು ಇದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.
ಕಾರ್ಯಾಗಾರದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಾಧಿಕಾರಿ ದೇವಿದಾಸ ಮೊಗೇರ, ಭಟ್ಕಳ ಶುಭಾ ನಾಯ್ಕ ಹಿರಿಯ ಉಪನ್ಯಾಸಕರು ಡಯಟ್ ಕುಮಟಾ ನಾಗರಾಜ ಗೌಡ, ಉಪನ್ಯಾಸಕರು ಡಯಟ್ ಕುಮಟಾ ಎಸ್.ಎಮ್.ಹೆಗಡೆ, ತಾಲೂಕಾ ಸಮನ್ವಯ ಅಧಿಕಾರಿಗಳು ಹೊನ್ನಾವರ ಉಪಸ್ಥಿತರಿದ್ದರು.ಸಭಾಕಾರ್ಯಕ್ರಮದ ನಂತರ ಕಾರ್ಯಾಗಾರ ನಡೆಸಿ ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳ,ಕಲಿಕಾ ಚೇತರಿಕೆ,ಅಟಲ್ ಟಿಂಕರಿoಗ್ ಲ್ಯಾಬ್, ಯೋಜನೆಗಳ ಕುರಿತು ಚರ್ಚಿಸಲಾಯಿತು
ಎಲ್.ಎಮ್. ಹೆಗಡೆ ಯವರು ಸ್ವಾಗತಿಸಿದರು ದಯಾನಂದ ದೇಶ ಭಂಡಾರಿಯವರು ವಂದಿಸಿದರು.ಕುಮಾರಿ ಸಿಂಚನಾ ಆಚಾರಿ ಪ್ರಾರ್ಥನೆ ಪ್ರಸ್ತುತ ಪಡಿಸಿದರು. ಮುಕ್ತಾ ನಾಯ್ಕ ಮತ್ತು ಸೀಮಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

error: