May 17, 2024

Bhavana Tv

Its Your Channel

ಹೊಸಾಕುಳಿ ಉಮಾಮಹೇಶ್ವರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಸಮಾಜದ ವಾಲಿಬಾಲ್ ಪಂದ್ಯಾವಳಿ

ಹೊನ್ನಾವರ: ಉಮಾಮಹೇಶ್ವರ ಹಾಲಕ್ಕಿ ಪ್ರೆಂಡ್ಸ ವತಿಯಿಂದ ಹೊಸಾಕುಳಿ ಉಮಾಮಹೇಶ್ವರ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಸಮಾಜದ ವಾಲಿಬಾಲ್ ಪಂದ್ಯಾವಳಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.

ನಂತರ ಮಾತನಾಡಿ ಒಗ್ಗಟ್ಟಿನ ಮೂಲಕ ಇತರರಿಗೆ ಮಾದರಿಯಾದ ಹಾಲಕ್ಕಿ ಸಮಾಜವು ಕ್ರೀಡಾಕೂಟ ಆಯೋಜನೆಯಲ್ಲಿಯೂ ಮಾದರಿಯಾಗಿದೆ. ಇರ್ವರು ಸಾಧಕರು ಪ್ರದ್ಮಶ್ರೀ ಪ್ರಶಸ್ತ್ರಿ ಪಡೆದಿರುವುದು ಸಮಾಜದ ಹೆಮ್ಮೆಯಾದರೆ, ನಮ್ಮದೇ ಕೇಂದ್ರ ಸರ್ಕಾರ ನೀಡಿರುವುದು ಎನ್ನುವ ಹೆಮ್ಮೆ ನಮಗಿದೆ. ಇನಷ್ಟು ಸಾಧಕರು ಸಮಾಜದಿಂದ ಹೊರಹೊಮ್ಮುವ ಮೂಲಕ ಸಮಾಜದ ಹಿರಿಮೆ ಉತ್ತುಂಗಕ್ಕೆ ಏರಲಿ ಎಂದು ಶುಭಹಾರೈಸಿದರು.
ಟ್ರೋಪಿ ಅನಾವರಣಗೊಳಿಸಿದ ಕಾಂಗ್ರೇಸ್ ಮುಖಂಡರಾದ ರವಿಕುಮಾರ ಶೆಟ್ಟಿ ಮಾತನಾಡಿ ಈ ಸಮಾಜದವರು ವಾಸಿಸುವ ಸ್ಥಳದಲ್ಲಿ ದಟ್ಟ ಪರಿಸರವಿದ್ದು, ಗಿಡಗಳನ್ನು ಪೋಷಣೆಯ ಮೂಲಕ ಮಾದರಿಯಾಗಿದ್ದಾರೆ. ಧಾರ್ಮಿಕ ಉತ್ಸವ ಬಂಡಿಹಬ್ಬದ ಸಮಯದಲ್ಲಿ ಇವರ ಜನಪದ ಕಲಾ ಪ್ರಕಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸುಗ್ಗಿ ಹಾಗೂ ಜನಪದ ಗೀತೆಗಳ ಮೂಲಕ ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿದೆ. ಇಂದು ಯುವಕರೆಲ್ಲ ಒಗ್ಗಟ್ಟಾಗಿ ಆಯೋಜಿಸಿದ ಕ್ರೀಡಾಕೂಟದ ಮೂಲಕ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಲಿ ಎಂದರು.
ಕ್ರೀಡಾಂಗಣ ಉದ್ಘಾಟಿಸಿದ ಸೂರಜ್ ನಾಯ್ಕ ಸೋನಿ ಮಾತನಾಡಿ ಸೋಲು ಗೆಲುವನ್ನು ಅನುಭವಿಸಿದ ಸಮಾಜದ ಬಹುವರ್ಷದ ಬೇಡಿಕೆಯಾದ ಎಸ್.ಟಿ ಮೀಸಲಾತಿಗೆ ಬೆಂಬಲವಾಗಿ ಸದಾ ಕಾಲ ನಿಲ್ಲುವ ಜೊತೆ ನಿಮ್ಮ ಇತರೆ ಬೇಡಿಕೆಗೂ ಧ್ವನಿಯಾಗಿದ್ದೇನೆ. ಸುಗ್ಗಿಯಂತಹ ಸಾಂಪ್ರದಾಯಿಕ ಕಲೆಯು ಇನ್ನು ಜೀವಂತವಾಗಿರುದಕ್ಕೆ ಈ ಸಮಾಜದ ಪರಿಶ್ರಮವೇ ಕಾರಣ ಎಂದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕ ಶಿವಾನಂದ ಹೆಗಡೆ ಮಾತನಾಡಿ ಸಂಘಟನೆ ಇದ್ದಾಗ ಮಾತ್ರ ಸಮಾಜ ಮುಂದೆ ಬರಲಿದೆ. ಶೈಕ್ಷಣಿಕವಾಗಿ, ಕ್ರೀಡೆ ಮತ್ತು ಸಾಂಸ್ಕೃತಿಕವಾಗಿ ಹಲವು ಸಾಧಕರಿದ್ದಾರೆ ಅಂತಹ ಸಾಧಕರು ಯುವಕರಿಗೆ ಸ್ಪೂರ್ತಿಯಾಗಲಿದ್ದು, ಅವರನ್ನು ಗುರುತಿಸಿ ಪೊತ್ಸಾಹಿಸುವ ಮೂಲಕ ಮಾದರಿ ಕ್ರೀಡಾಕೂಟ ಆಯೋಜಿಸಿದ್ದಿರಿ. ಸಮಾಜದ ಪ್ರತಿ ಕಾರ್ಯಕ್ಕೂ ಪೊತ್ಸಾಹಿಸುವ ಕಾರ್ಯ ಹಿಂದೆಯೂ ಮಾಡಿದ್ದು, ಮುಂದೆಯು ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುರೇಖಾ ನಾಯ್ಕ, ಬಿಜೆಪಿ ಮುಖಂಡರಾದ ಎಂ.ಜಿ.ಭಟ್, ಕಡ್ಲೆ ಗ್ರಾ.ಪಂ.ಅಧ್ಯಕ್ಷ ಗೊವಿಂದ ಗೌಡ, ಉಪಾಧ್ಯಕ್ಷ ಕಿರಣ ಹೆಗಡೆ, ಸಚೀನ ನಾಯ್ಕ, ಸುರೇಶ ಶೆಟ್ಟಿ, ಎಚ್.ಆರ್.ಗಣೇಶ, ಕೃಷ್ಣ ಗೌಡ ಹಳಗೇರಿ, ಬೂದೆ ಗೌಡ, ಪ್ರಕಾಶ ಹೆಗಡೆ, ಜಿ.ಎಸ್. ತೆಕ್ಕೂರು ಮತ್ತಿತರರು ಉಪಸ್ಥಿತರಿದ್ದರು.

error: