May 18, 2024

Bhavana Tv

Its Your Channel

ಎಸ್ ಡಿ ಎಂ ಮಹಾ ವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಭೇಟಿ ನೀಡಿ ಮೌಲ್ಯಮಾಪನ

ಹೊನ್ನಾವರದ ಎಂ ಪಿ ಇ ಸೊಸೈಟಿಯ ಎಸ್ ಡಿ ಎಂ ಮಹಾ ವಿದ್ಯಾಲಯಕ್ಕೆ ಫೆಬ್ರವರಿ 9 ರಂದು ನ್ಯಾಕ್ ಸಮಿತಿಯು ಮೂವರು ಸದಸ್ಯರ ತಂಡವು ಭೇಟಿ ನೀಡಿ ಮೌಲ್ಯಮಾಪನ ನಡೆಸಿತು.

ಮಧ್ಯಪ್ರದೇಶದ ಉಜ್ಜಯಿನಿಯ ಮಹರ್ಷಿ ಪಾಣಿನಿ ಸಂಸ್ಕೃತ ಏ ವಂ ವೇದಿಕ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಜಯಕುಮಾರ್ ಸಿಜಿ ಅವರು ಸಮಿತಿಯ ಚೇರ್ಮನ್ನರಾಗಿ, ಮತ್ತು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿ ಪುರದ ಇಸ್ಲಾಮಿಕ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಇಲ್ಲಿಯ ಡಾ. ಮಹಮ್ಮದ್ ಅಕ್ಬರ್, ಕುರು ರವರು ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯ ಸಾಕೇತ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ ಇಲ್ಲಿಯ ಪ್ರಾಂಶುಪಾಲರಾದ ಡಾ. ಕೃಷ್ಣಮ್ ರಾಜು ಸಂಗರಾಜು ರವರ ತಂಡವನ್ನು ಎಂಪಿಈ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ, ಪ್ರಾಂಶುಪಾಲರಾದ ಡಾ. ವಿಜಯಲಕ್ಷ್ಮಿ ಎಂ ನಾಯ್ಕ ಮತ್ತು ಕೋ ಆರ್ಡಿನೇಟರ್ ಡಾ ಪಿ ಎಂ ಹೊನ್ನಾವರ್ ರವರು ಆತ್ಮೀಯವಾಗಿ ಬರಮಾಡಿಕೊಂಡರು.
ನAತರ ಮಹಾವಿದ್ಯಾಲಯದ ಪ್ರತಿ ವಿಭಾಗದ ಆಂತರಿಕ ಮೌಲ್ಯಮಾಪನ ಮಾಡಿದ ನ್ಯಾಕ್ ಪೀರ್ ತಂಡವು ಉಪನ್ಯಾಸಕರೊಂದಿಗೆ ಶೈಕ್ಷಣಿಕ ಸಾಧನೆಗಳು ಹಾಗೂ ಗುಣಾತ್ಮಕ ಮೌಲ್ಯಮಾಪನ ಕುರಿತಾದ ಅವಲೋಕನ ಮತ್ತು ಚರ್ಚೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಪಾಲಕರೊಂದಿಗೆ ಚರ್ಚೆ ಮತ್ತು ಸಂವಾದ ,ಹಳೆ ವಿದ್ಯಾರ್ಥಿ ಗಳೊಂದಿಗೆ ಸಂವಾದ ಮತ್ತು ಚರ್ಚೆ, ಆಡಳಿತ ಮಂಡಳಿಯವರೊAದಿಗೆ ಸಂವಾದ ಮತ್ತು ಚರ್ಚೆಯನ್ನು ನಡೆಸಿತು ಹಾಗೂ ಯುಜಿ ಮತ್ತು ಪಿಜಿ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಸ್ತು ಪ್ರದರ್ಶನ ಮತ್ತು ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.

error: